ಡೆಲ್ಲಿ ಕ್ಯಾಪಿಟಲ್ಸ್ ರಿಷಭ್ ಪಂತ್ ಅವರನ್ನು ಕೂ ಬಿಡುತ್ತಿದ್ದಂತೆ ಈ ತಂಡವನ್ನು ಐಪಿಎಲ್ 2025ರಲ್ಲಿ ಯಾರು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಇದಕ್ಕೆ ಐಪಿಎಲ್ ಮೆಗಾ ಹರಾಜಿನಲ್ಲಿ ಉತ್ತರ ಸಿಕ್ಕಿದೆ. ಡೆಲ್ಲಿ ಕ್ಯಾಪಿಟಲ್ಸ್ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಕೈ ಬಿಟ್ಟ ನಾಯಕ ಕೆಎಲ್ ರಾಹುಲ್ ಅವರಿಗೆ ಮಣೆ ಹಾಕಿದೆ. ಇವರು ಈ ಬಾರಿ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಇವರಿಗೆ ಡೆಲ್ಲಿ 14 ಕೋಟಿ ಬಿಡ್ ಮಾಡಿದೆ. ಡೆಲ್ಲಿ ಒಟ್ಟು 76.25 ಕೋಟಿ ರೂಪಾಯಿಗಳೊಂದಿಗೆ ಐಪಿಎಲ್ ಹರಾಜು ಪ್ರವೇಶಿಸಿತ್ತು.
ಕ್ಯಾಪಿಟಲ್ಸ್ ಚೊಚ್ಚಲ ಐಪಿಎಲ್ ಟ್ರೋಫಿ ಕನಸಿನಲ್ಲಿದ್ದು, ಇದಕ್ಕಾಗಿ ಸ್ಟಾರ್ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ. ವಿಶ್ವದ ಅಪಾಯಕಾರಿ ವೇಗಿ ಮಿಚೆಲ್ ಸ್ಟಾರ್ಕ್ ಅವರಿಗೆ ಡೆಲ್ಲಿ 11.75 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಆಶುತೋಷ್ ಶರ್ಮಾ ಅವರಿಗೂ ಡೆಲ್ಲಿ ಬಾಜಿ ಕಟ್ಟಿ ಗೆದ್ದಿದೆ. ಈ ತಂಡದ ವಿಶೇಷ ಅಂದರೆ ಆರ್‌ಸಿಬಿ ತಂಡದ ಕೈ ಬಿಟ್ಟ ಫಾಫ್ ಡುಪ್ಲೇಸಿಸ್ ಅವರಿಗೆ ಮಣೆ ಹಾಕಿದೆ. ಅಲ್ಲದೆ ಕರುಣ್ ನಾಯರ್ ಅವರನ್ನು ಸಹ ತಂಡಕ್ಕೆ ಸೇರಿಸಿಕೊಂಡಿದೆ.

ಕೆಎಲ್ ರಾಹುಲ್---14,00 ಕೋಟಿ ರೂ.
ಮಿಚೆಲ್ ಸ್ಟಾರ್ಕ್---11,75 ಕೋಟಿ ರೂ.
ಟಿ.ನಟರಾಜನ್---10,75 ಕೋಟಿ ರೂ.
ಜೇಕ್ ಫ್ರೇಸರ್-ಮೆಕ್‌ಗುರ್ಕ್---9,00 ಕೋಟಿ ರೂ.
ಮುಖೇಶ್ ಕುಮಾರ್---8,00 ಕೋಟಿ ರೂ.
ಹ್ಯಾರಿ ಬ್ರೂಕ್---6,25 ಕೋಟಿ ರೂ.
ಅಶುತೋಷ್ ಶರ್ಮಾ---3,80 ಕೋಟಿ ರೂ.
ಮೋಹಿತ್ ಶರ್ಮಾ---2,20 ಕೋಟಿ ರೂ.
ಫಾಫ್ ಡು ಪ್ಲೆಸಿಸ್---2,00 ಕೋಟಿ ರೂ.
ಸಮೀರ್ ರಿಜ್ವಿ---95,00 ಲಕ್ಷ ರೂ.
ಡೊನೊವನ್ ಫೆರೇರಾ---75,00 ಲಕ್ಷ ರೂ.
ದುಷ್ಮಂತ ಚಮೀರ್---75,00 ಲಕ್ಷ ರೂ.
ವಿಪ್ರಜ್ ನಿಗಮ್---50,00 ಲಕ್ಷ ರೂ.
ಕರುಣ್ ನಾಯರ್---50,00 ಲಕ್ಷ ರೂ.
ಮಾಧವ್ ತಿವಾರಿ--- 40,00 ಲಕ್ಷ ರೂ.
ತ್ರಿಪುರಾಣ ವಿಜಯ್---30,00 ಲಕ್ಷ ರೂ.
ಮನ್ವಂತಕುಮಾರ್---30,00 ಲಕ್ಷ ರೂ.
ಅಜಯ್ ಮಂಡಲ್---30,00 ಲಕ್ಷ ರೂ.
ದರ್ಶನ್ ನಲ್ಕಂಡೆ---30,00 ಲಕ್ಷ ರೂ.
ಅಕ್ಷರ್ ಪಟೇಲ್ (16.5 ಕೋಟಿ ರೂ.)
ಕುಲದೀಪ್ ಯಾದವ್ (13.25 ಕೋಟಿ ರೂ.)
ಟ್ರಿಸ್ಟನ್ ಸ್ಟಬ್ಸ್ (10 ಕೋಟಿ ರೂ.)
ಅಭಿಷೇಕ್ ಪೊರೆಲ್ (4 ಕೋಟಿ ರೂ.) - ಅನ್‌ಕ್ಯಾಪ್ಡ್