ಐಪಿಎಲ್ 2025ರ ಮೆಗಾ ಹರಾಜಿಗೆ ತೆರೆಯ ಮರೆಯ ಪ್ರಯತ್ನಗಳು ನಡೆದಿವೆ. ಯಾವ ಆಟಗಾರನನ್ನು ಉಳಿಸಿಕೊಳ್ಳಬೇಕು, ಯಾರನ್ನು ಕೈ ಬಿಡಬೇಕು ಎಂಬ ಲೀಸ್ಟ್ ಸಿದ್ಧವಾಗುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ಸಹ ಈ ನಿಟ್ಟಿನಲ್ಲಿ ತನ್ನ ಲೀಸ್ಟ್ ಫೈನಲ್ ಮಾಡುತ್ತಿದೆ. ಈಗ ಬರುತ್ತಿರುವ ಮಾಹಿತಿಯಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ತಂಡವನ್ನು ತೊರೆಯಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಿದ್ದ ರಿಕ್ಕಿ ಪಾಂಟಿಂಗ್ ಈ ವರ್ಷದ ಆರಂಭದಲ್ಲಿ ತಂಡವನ್ನು ತೊರೆದಿದ್ದಾರೆ. ಈ ಸುದ್ದಿ ಬರುತ್ತಿದ್ದ ಹಿಂದೆಯೇ ರಿಷಭ್ ಪಂತ್ ಸಹ ಐಪಿಎಲ್‌ನಲ್ಲಿ ಡೆಲ್ಲಿ ತಂಡವನ್ನು ತೊರೆಯುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂಥ್ ಅವರ ಸಾಧನೆ ಸಹ ಹೇಳಿಕೊಳ್ಳುವಂತಿಲ್ಲ. ಹೀಗಾಗಿ ತಂಡದಿಂದ ಇವರನ್ನು ಕೈ ಬಿಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಐಪಿಎಲ್ ಮೆಗಾ ಹರಾಜು ಈ ಬಾರಿ ನಡೆಯಲಿದೆ. ಈ ಬಾರಿ ಅನೇಕ ತಂಡಗಳ ನಾಯಕರು ಬದಲಾಗುವ ಸಾಧ್ಯತೆ ಇದೆ. ಈ ಸಾಲಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸಹ ಸೇರಿದೆ. ವರದಿಗಳನ್ನು ನಂಬುವುದಾದರೆ, ರಿಷಭ್ ಪಂಥ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆಯಬಹುದು. ಈಗ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಈ ರೇಸ್‌ನಲ್ಲಿ ಇಬ್ಬರು ಅನುಭವಿ ಆಟಗಾರರ ಹೆಸರುಗಳು ಕೇಳಿ ಬರುತ್ತಿವೆ.
ಡೆಲ್ಲಿ ಕ್ಯಾಪಿಟಲ್ಸ್ ನೋಡುತ್ತಿರುವ ಸ್ಟಾರ್ ನಾಯಕನ ಪಟ್ಟಿಯಲ್ಲಿ ಕೆ.ಎಲ್ ರಾಹುಲ್ ಹೆಸರು ಸಹ ಸೇರಿದೆ. ರಾಹುಲ್ ಅವರು ಬ್ಯಾಟಿಂಗ್‌ಗೆ ಬಲ ತುಂಬ ಬಲ್ಲ ಆಟಗಾರ. ಇವರಲ್ಲೂ ನಾಯಕತ್ವದ ಗುಣಗಳು ಸಾಕಷ್ಟಿವೆ. ಇವರ ಮುಂದಾಳತ್ವದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಒಂದು ಬಾರಿ ಪ್ಲೇ ಆಫ್‌ಗೆ ಕ್ವಾಲಿಫೈ ಆಗಿತ್ತು. ಆದರೆ ಕಳೆದ ಆವೃತ್ತಿಯಲ್ಲಿ ತಂಡ ನೀರಸ ಪ್ರದರ್ಶನ ನೀಡಿದ್ದರಿಂದ ಎಲ್‌ಎಸ್‌ಜಿ ಇವರಿಗೂ ಗೇಟ್ ಪಾಸ್ ನೀಡುವ ಸಾಧ್ಯತೆ ಇದೆ.

ಎಲ್‌ಎಸ್‌ಜಿ ಮಾಲೀಕರ ಜೊತೆಗೆ ಕೆ.ಎಲ್ ರಾಹುಲ್ ಮಾತಿನ ಚಕಮಕಿ ನಡೆದಿತ್ತು. ಈ ಬೆನ್ನಲ್ಲೆ ಅವರ ನಾಯಕತ್ವದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಲಾಗಿತ್ತು. ಇವರನ್ನು ಎಲ್‌ಎಸ್‌ಜಿ ಕೈ ಬಿಡಬಹುದು. ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಹಲವು ಮಾಲೀಕರು ಚಿತ್ತ ನೆಟ್ಟಿರುತ್ತಾರೆ. ಈ ಸಾಲೀನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸಹ ಸೇರಿದೆ.
ಹಲವು ತಂಡಗಳು ಇನ್ನು ಆಟಗಾರರ ರಿಲೀಸ್ ಮಾಡಿರುವ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಇವರಿಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಉಳಿಸಿಕೊಳ್ಳುವುದು ಕೊಂಚ ಕಷ್ಟ. ಇವರು ಸಹ ನಾಯಕತ್ವವನ್ನು ಬಯಸುತ್ತಿದ್ದಾರೆ. ಹೀಗಾಗಿ ಇವರು ಬೇರೆ ತಂಡಗಳತ್ತ ಮುಖ ಮಾಡಬಹುದು. ಈ ಅವಕಾಶವನ್ನು ಬಳಸಿಕೊಳ್ಳಲು ಎಲ್ಲ ತಂಡಗಳು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿವೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನ ಸ್ಥಾನವನ್ನು ತುಂಬ ಬಲ್ಲ ಆಟಗಾರರ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಸಹ ಸೇರಿದ್ದಾರೆ. ಇವರು ಟೀಮ್ ಇಂಡಿಯಾದ ನಾಯಕರಾಗಿಯೂ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದ್ದಾರೆ. ಹೀಗಾಗಿ ಇವರ ಮೇಲೂ ಡೆಲ್ಲಿ ಕ್ಯಾಪಿಟಲ್ಸ್ ಬೆಟ್ ಮಾಡಬಹುದು.