IPL Mega Auction: ಹರಾಜಿಗೆ ಹೆಸರು ನೊಂದಾಯಿಸಿಕೊಂಡ 1165 ಭಾರತೀಯ ಆಟಗಾರರು
ಈ ಬಾರಿ ಐಪಿಎಲ್ ಟೂರ್ನಿ ಆರಂಭವಾಗುವ ಮುನ್ನವೇ ಕ್ರೇಜ್ ಹೆಚ್ಚಾಗಿದೆ. 18ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ ಐಪಿಎಲ್ 10 ತಂಡಗಳು ಭಾಗವಹಿಸಲಿದ್ದು, ತಮ್ಮ ಆಯ್ಕೆಯ ಆಟಗಾರನಿಗೆ ಬಾಜಿ ಕಟ್ಟಲಿವೆ. ಆದರೆ ಈ ಬಾರಿಯ ಹರಾಜು ಎಲ್ಲಿ ಹಾಗೂ ಯಾವಾಗ ನಡೆಯಲಿದೆ ಎಂಬ ಬಗ್ಗೆ ಇನ್ನು ಅಧಿಕೃತ ಮಾಹಿತಿ ಹೊರ ಬಂದಿಲ್ಲ.
ಐಪಿಎಲ್ ರಿಟೇನ್ಷನ್ ಲೀಸ್ಟ್ ನೀಡುವಂತೆ ಬಿಸಿಸಿಐ ಐಪಿಎಲ್ 10 ಫ್ರಾಂಚೈಸಿಗಳಿಗೆ ಸೂಚಿತ್ತು. ಅಲ್ಲದೆ ಅಕ್ಟೋಬರ್ 31ರೊಳಗೆ ಸಲ್ಲಿಸುವಂತೆ ಗಡುವ ನೀಡಿತ್ತು. ಮಾಲೀಕರು ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದ್ದಾರೆ. ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಮಾಡುವ ಕೆಲಸ ಸದ್ಯ ಬಿಸಿಸಿಐ ಹಾಗೂ ಐಪಿಎಲ್ ಕಾರ್ಯಕರಣಿ ಮುಂದೆ ಇದೆ. ವರದಿಗಳ ಅನುಸಾರ ಈ ಬಾರಿಯ ಹರಾಜು ನವೆಂಬರ್ 24 ಮತ್ತು 25 ರವರೆಗೆ, ಜೆಡ್ಡಾ ನಗರದಲ್ಲಿನಡೆಯುವ ಸಾಧ್ಯತೆ ಇದೆ.

ಹರಾಜಿಗೆ ನೊಂದಾಯಿಸಿಕೊಂಡ ಭಾರತೀಯ ಆಟಗಾರರ ಸಂಖ್ಯೆ ಎಷ್ಟು?
ಈ ಬಾರಿ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಕೈ ಬಿಟ್ಟ ರಿಷಭ್ ಪಂತ್, ಲಖ್ನೋ ಸೂಪರ್ ಜೈಂಟ್ಸ್ ತಂಡದಿಂದ ಕೈ ಬಿಡಲಾಗಿರುವ ಕೆಎಲ್ ರಾಹುಲ್, ಮಾಜಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ಸಹ ಕಾಣಿಸಿಕೊಳ್ಳಲಿದ್ದಾರೆ. ಭಾರತವನ್ನು ಪ್ರತಿನಿಧಿಸಿರುವ ಒಟ್ಟು 48 ಕ್ಯಾಪ್ಡ್ ಆಟಗಾರರು ಹರಾಜಿನಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಆಡಿ ಸೈ ಎನಿಸಿಕೊಂಡು, ಭಾರತಕ್ಕೆ ಆಡದ 152 ಆಟಗಾರರು ಸಹ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐಪಿಎಲ್‌ನಲ್ಲಿ ಇನ್ನೂ ಪಾದಾರ್ಪಣೆ ಮಾಡದ 965 ಭಾರತೀಯ ಅನ್‌ಕ್ಯಾಪ್ಡ್ ಆಟಗಾರರಿದ್ದಾರೆ.
ಮೆಗಾ ಹರಾಜಿನಲ್ಲಿ ಭಾಗವಹಿಸಲು ಒಟ್ಟು 1165 ಭಾರತೀಯ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ, ಈ ಪಟ್ಟಿಯನ್ನು ಈಗ ಎಲ್ಲಾ ಫ್ರಾಂಚೈಸಿಗಳಿಗೆ ನೀಡಲಾಗುವುದು. ಈ ಬಳಿಕವೇ ಹರಾಜಿನ ಫೈನಲ್ ಲೀಸ್ಟ್ ಸಿದ್ಧ ಪಡಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಆ ಬಳಿಕ ಅಷ್ಟೇ ಎಷ್ಟು ಆಟಗಾರರನ್ನು ಹರಾಜು ಮಾಡಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ವಿದೇಶಿ ಆಟಗಾರರ ಸಂಖ್ಯೆ ಎಷ್ಟು?
ಈ ಬಾರಿಯ ಹರಾಜಿನಲ್ಲಿ 16 ದೇಶಗಳ ಒಟ್ಟು 409 ಆಟಗಾರರು ಭಾಗವಹಿಸಲಿದ್ದಾರೆ. ಈ ಪೈಕಿ ಈಗಾಗಲೇ ತಮ್ಮ ದೇಶದ ಪರ ಆಡಿರುವ ಆಟಗಾರರ ಸಂಖ್ಯೆ 272 ಆಗಿದೆ. ಕಳೆದ ಐಪಿಎಲ್‌ನಲ್ಲಿ ಕಾಣಿಸಿಕೊಂಡ ಮೂವರು ಆಟಗಾರರು ಹರಾಜಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. 104 ಅನ್‌ಕ್ಯಾಪ್ಡ್ ವಿದೇಶಿ ಆಟಗಾರರು ಹರಾಜು ಅಂಗಳ ಪ್ರವೇಶಿಸಲಿದ್ದಾರೆ.
ಈ ಬಾರಿಯ ಹರಾಜು ಪ್ರಕ್ರಿಯೆ ಬಹಳ ಕುತೂಹಲದಿಂದ ಕೂಡಿದೆ. ಯಾವ ಪ್ಲೇಯರ್‌ಗೆ ಗಾಳ ಹಾಕಬೇಕು ಎಂಬ ಲೆಕ್ಕಾಚಾರವನ್ನು ಫ್ರಾಂಚೈಸಿಗಳು ಮಾಡತ್ತಲೇ ಇದ್ದಾರೆ. ಆರ್‌ಸಿಬಿ ಸಹ ತನ್ನ ಮೊದಲ ಟ್ರೋಫಿ ಹುಡುಕಾಟದಲ್ಲಿದ್ದು, ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಬೆಂಗಳೂರು ತಂಡ ಯೋಜನೆಯನ್ನು ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications