IPL 2025 Mega Auction: ಭಾರತೀಯ ಬೌಲರ್‌ಗಳ ಮೇಲೆ ಹಣದ ಸುರಿಮಳೆ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜಿನಲ್ಲಿ ಭಾರತೀಯ ಬೌಲರ್‌ಗಳ ಮೇಲೆ ಹಣದ ಸುರಿಮಳೆ ಆಗಿದೆ. ಮೆಗಾ ಹರಾಜಿನ ಮೊದಲ ದಿನ ಎಲ್ಲಾ 10 ಫ್ರಾಂಚೈಸಿಗಳು ಟೀಮ್ ಇಂಡಿಯಾದ ಸ್ಟಾರ್ ಬೌಲರ್‌ಗಳನ್ನು ಹೆಚ್ಚು ಬಿಡ್ ಮಾಡಿವೆ. ಟೀಮ್ ಇಂಡಿಯಾದ ವೇಗದ ಬೌಲರ್‌ಗಳಾದ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್ ಹಾಗು ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ದುಬಾರಿ ಬೆಲೆ ಬಿಡ್ ಆದರು.
ಟೀಮ್ ಇಂಡಿಯಾದ ಬೌಲರ್‌ಗಳನ್ನು ಮೆಗಾ ಹರಾಜಿನಲ್ಲಿ ಬಿಡ್ ಮಾಡಲು ಐಪಿಎಲ್ ಫ್ರಾಂಚೈಸಿಗಳು ಪೈಪೋಟಿ ನಡೆಸಿದವು. ಹೀಗಾಗಿ ದುಬಾರಿ ಬೆಲೆಗೆ ಟೀಮ್ ಇಂಡಿಯಾದ ಬೌಲರ್‌ಗಳು ಬಿಡ್ ಆದರು. ಮೊಹಮ್ಮದ್ ಶಮಿ ಅವರನ್ನು 10 ಕೋಟಿ ರೂ.ಗೆ ಸನ್ ರೈಸರ್ಸ್ ಹೈದರಾಬಾದ್ ಖರೀದಿಸಿದೆ . ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಎರಡೂ ಫ್ರಾಂಚೈಸಿಗಳು ಶಮಿ ಅವರನ್ನು ಬಿಡ್ ಮಾಡಲು ಪೈಪೋಟಿ ನಡೆಸಿದವು. ಅಂತಿಮವಾಗಿ ಹೈದರಾಬಾದ್ ಶಮಿ ಅವರನ್ನು ಬಿಡ್ ಮಾಡುವಲ್ಲಿ ಯಶಸ್ವಿಯಾಯಿತು.

ಐಪಿಎಲ್ ಮೆಗಾ ಹರಾಜಿನಲ್ಲಿ ಯುಜ್ವೇಂದ್ರ ಚಹಾಲ್ ಕೂಡ ದುಬಾರಿ ಬೆಲೆ ಪಡೆದರು. ಪಂಜಾಬ್ ಕಿಂಗ್ಸ್ 18 ಕೋಟಿ ರೂ.ಗೆ ಬಿಡ್ ಮಾಡುವ ಮೂಲಕ ಚಹಾಲ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು. ಗುಜರಾತ್ ಟೈಟಾನ್ಸ್ 12.25 ಕೋಟಿ ರೂ. ಮೊಹಮ್ಮದ್ ಸಿರಾಜ್ ಅವರನ್ನು ಬಿಡ್ ಮಾಡಿದೆ. ಸಿರಾಜ್ ಗೆ ಆರ್ ಸಿಬಿ ಆರ್ ಟಿಎಂ ಬಳಸಿಲ್ಲ. ಹೀಗಾಗಿ ಸಿರಾಜ್ ಅವರು ಗುಜರಾತ್ ಟೈಟಾನ್ಸ್ ತಂಡದ ಪಾಲಾದರು.
ಮೆಗಾ ಹರಾಜಿನಲ್ಲಿ ಪಂಜಾಬ್ ಅರ್ಷದೀಪ್ ಸಿಂಗ್ ಅವರ ಮೂಲ ಬೆಲೆ 2 ಕೋಟಿ ರೂ. ಆಗಿತ್ತು. ಸನ್ ರೈಸರ್ಸ್ ಹೈದರಾಬಾದ್ 15.45 ಕೋಟಿ ರೂ. ಖರೀದಿಸಲು ಮುಂದಾಯಿತು. ಈ ವೇಳೆ
ಪಂಜಾಬ್ ಕಿಂಗ್ಸ್ ಆರ್‌ಟಿಎಂ ಬಳಸಿತು. ಹೀಗಾಗಿ ಅರ್ಷದೀಪ್ ಸಿಂಗ್ ಅವರನ್ನು ಪಂಜಾಬ್ ಕಿಂಗ್ಸ್ 18 ಕೋಟಿ ರೂ.ಗೆ ಸೇರಿಸಿಕೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications