Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Auction KKR: ಕೋಲ್ಕತ್ತಾಗೆ "ವೆಂಕಟೇಶ" ಕೃಪೆ: ಈ ಬಾರಿ ಅಯ್ಯರ್‌ಗೆ ಸಿಗುತಾ ನಾಯಕ ಸ್ಥಾನ?

ಹಾಲಿ ಚಾಂಪಿಯನ್‌ ಕೋಲ್ಕತ್ತಾ ನೈಟ್‌ ರೈಡರ್ಸ್‌, ಮತ್ತೊಮ್ಮೆ ಚಾಂಪಿಯನ್‌ ಪಟ್ಟದ ಮೇಲೆ ಕಣ್ಣು ನೆಟ್ಟಿದೆ. ಕೆಕೆಆರ್‌ ಈ ಬಾರಿ ಟ್ರೋಫಿಯನ್ನು ಬೇರೆ ತಂಡಕ್ಕೆ ಬಿಟ್ಟು ಕೊಡಬಾರದು ಎಂದು ಲೆಕ್ಕಾಚಾರ ಹಾಕಿಕೊಂಡಿದೆ. ಇದಕ್ಕಾಗಿ ಕೆಕೆಆರ್‌ ರಿಟೇನ್‌ ಲೀಸ್ಟ್‌ ನೋಡಿದರೆ ಅರ್ಥವಾಗುತ್ತಿತ್ತು. ಸ್ಟಾರ್‌ ಅನುಭವಿ ಆಟಗಾರರಿಗೆ ಮಣೆ ಹಾಕಿದ್ದ ಕೆಕೆಆರ್‌, ಈ ಬಾರಿಯ ಹರಾಜಿನಲ್ಲಿ ನಾಯಕನ ಹುಡುಕಾಟ ನಡೆಸಿತ್ತು. ಕೆಕೆಆರ್‌ ತಂಡದ ಅವಿಭಾಜ್ಯ ಅಂಗವಾಗಿದ್ದ ಹಾಗೂ ಹಲವು ಪಂದ್ಯಗಳಲ್ಲಿ ತಂಡಕ್ಕೆ ಗೆಲುವಿನ ಮಾಲೆಯನ್ನು ತೊಡಿಸಿದ್ದ ಸ್ಟಾರ್‌ ಆಟಗಾರರಿಗೆ ಕೆಕೆಆರ್‌ ಉಳಿಸಿಕೊಂಡಿತ್ತು.

ಕೆಕೆಆರ್‌ ರಿಂಕು ಸಿಂಗ್‌, ಮಿಸ್ಟ್ರಿ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ, ಸುನಿಲ್‌ ನರೈನ್‌, ಆಂಡ್ರಿ ರಸೆಲ್‌, ಹರ್ಷಿತ್ ರಾಣಾ, ರಮಣದೀಪ್ ಸಿಂಗ್ ಅವರನ್ನು ಉಳಿಸಿಕೊಂಡಿತ್ತು. ಈ ಮೂಲಕ ಈ ಆಟಗಾರರಿಗೆ 120 ಕೋಟಿಯಲ್ಲಿ ದೊಡ್ಡ ಮೊತ್ತವನ್ನು ಪಾವತಿಸಿತ್ತು. ಇನ್ನು ಮಿಕ್ಕ 51 ಕೋಟಿ ರೂಪಾಯಿಗಳಿಂದ ಕೆಕೆಆರ್‌ ಐಪಿಎಲ್ ಮೆಗಾ ಹರಾಜು ಅಂಗಳ ಪ್ರವೇಶಿಸಿತ್ತು. ಈ ವೇಳೆ ಒಬ್ಬ ಉತ್ತಮ ನಾಯಕನ ಹುಡುಕಾಟ ಸಹ ನಡೆಸಿತ್ತು. ಆದರೆ, ಇವರ ಬಳಿ ಇದ್ದ ಅರ್ಧದಷ್ಟು ಹಣ ಒಬ್ಬನೇ ಪ್ಲೇಯರ್‌ ಕೊಳ್ಳಲು ಬೇಕಾಯಿತು. ವೆಂಕಟೇಶ್‌ ಅಯ್ಯರ್‌ ತಾವು ಅಂದುಕೊಂಡಿದಕ್ಕಿಂತಲೂ ಹೆಚ್ಚಿನ ಹಣವನ್ನು ಜೇಬಿಗೆ ಇಳಿಸಿಕೊಂಡರು. ಇವರಿಗೆ ಕೆಕೆಆರ್‌ 23.75 ಕೋಟಿ ಹಣವನ್ನು ಹೂಡಿದೆ.

IPL 2025 Mega Auction KKR Full List of Players bought and total Amount Spent

ಕೆಕೆಆರ್‌ ಖರೀದಿಸಿದ ಆಟಗಾರರು

ವೆಂಕಟೇಶ ಅಯ್ಯರ್-------23,75 ಕೋಟಿ ರೂ.
ಅನ್ರಿಚ್ ನಾರ್ಟ್ಜೆ ------6,50 ಕೋಟಿ ರೂ.
ಕ್ವಿಂಟನ್ ಡಿ ಕಾಕ್ ------3,60 ಕೋಟಿ ರೂ.
ಆಂಗ್ಕ್ರಿಶ್ ರಘುವಂಶಿ-------3,00 ಕೋಟಿ ರೂ.
ಸ್ಪೆನ್ಸರ್ ಜಾನ್ಸನ್ ------2,80 ಕೋಟಿ ರೂ.
ಮೊಯಿನ್ ಅಲಿ -----2,00 ಕೋಟಿ ರೂ.
ರಹಮಾನುಲ್ಲಾ ಗುರ್ಬಾಜ್ ------2,00 ಕೋಟಿ ರೂ.
ವೈಭವ್ ಅರೋರಾ-------1,80 ಕೋಟಿ ರೂ.
ಅಜಿಂಕ್ಯ ರಹಾನೆ-------1,50 ಕೋಟಿ ರೂ.
ರೋವ್ಮನ್ ಪೊವೆಲ್--- -1,50 ಕೋಟಿ ರೂ.
ಉಮ್ರಾನ್ ಮಲಿಕ್--- -75,00 ಲಕ್ಷ ರೂ.
ಮನೀಶ್ ಪಾಂಡೆ--- -75,00 ಲಕ್ಷ ರೂ.
ಅನುಕುಲ್ ರಾಯ್-------40,00 ಲಕ್ಷ ರೂ.
ಲುವ್ನಿತ್ ಸಿಸೋಡಿಯಾ-------30,00 ಲಕ್ಷ ರೂ.
ಮಾಯಾಂಕ್ ಮಾರ್ಕಾಂಡೆ-------30,00 ಲಕ್ಷ ರೂ.

ಕೆಕೆಆರ್‌ ಉಳಿಸಿಕೊಂಡ ಆಟಗಾರರು

ರಿಂಕು ಸಿಂಗ್ 13 ಕೋಟಿ ರೂ.
ವರುಣ್ ಚಕ್ರವರ್ತಿ 12 ಕೋಟಿ ರೂ.
ಸುನಿಲ್ ನರೈನ್ 12 ಕೋಟಿ ರೂ.
ಆಂಡ್ರೆ ರಸೆಲ್ 12 ಕೋಟಿ ರೂ.
ಹರ್ಷಿತ್ ರಾಣಾ ಅನ್‌ಕ್ಯಾಪ್ಡ್, 4 ಕೋಟಿ ರೂ.

Story first published: Monday, November 25, 2024, 19:30 [IST]
Other articles published on Nov 25, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+