IPL 2025: ಎಲ್ಲಿ ನಡೆಯಲಿದೆ ಐಪಿಎಲ್ ಮೆಗಾ ಹರಾಜು? ಯಾವಾಗ?
ಹಲವು ದಿನಗಳಿಂದ ಐಪಿಎಲ್ ಫ್ರಾಂಚೈಸಿಗಳ ಚಿತ್ತವನ್ನು ಕದ್ದಿದ್ದ ರಿಟೇನ್ಶನ್ ಪಾಲಿಸಿಯನ್ನು ಅಳೆದು ತೂಗಿ ಬಿಸಿಸಿಐ ರಿಲೀಸ್ ಮಾಡಿದೆ. ಈ ಪಟ್ಟಿ ರಿಲೀಸ್ ಆಗುತ್ತಿದ್ದಂತೆ ಐಪಿಎಲ್ ಮಾಲೀಕರು ತಮ್ಮ ಕೆಲಸವನ್ನು ಆರಂಭಿಸಿದ್ದಾರೆ. ಇಷ್ಟು ವರ್ಷಗಳಿಂದ ಕಟ್ಟಿದ್ದ ತಂಡದಲ್ಲಿ ಯಾವ 6 ಜನ ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬ ಚಿಂತೆ ನಿಶ್ಚಿತವಾಗಿ ಮ್ಯಾನೇಜ್ಮೆಂಟ್ ಕಾಡುತ್ತಿದೆ. ಈ ನಡುವೆ ಮೆಗಾ ಹರಾಜಿಗೆ ಸಂಬಂಧಿಸಿದಂತೆ ಬಿಗ್ ಅಪ್‌ಡೇಟ್ ಒಂದು ಹೊರ ಬಿದ್ದಿದೆ.
ಈ ಬಾರಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಇದಕ್ಕಾಗಿ ಬಿಸಿಸಿಐ ಸ್ಥಳ ಹಾಗೂ ದಿನಾಂಕದ ಬಗ್ಗೆ ಆಯ್ಕೆಯನ್ನು ನಡೆಸುತ್ತಿದೆ. ಕ್ರಿಕ್‌ಬಜ್ ವರದಿಯ ಪ್ರಕಾರ ಈ ವರ್ಷವೂ ಮೆಗಾ ಹರಾಜು ಮರಳುನಾಡಿನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಅಲ್ಲದೆ ಮೆಗಾ ಹರಾಜಿನ ದಿನಾಂಕವನ್ನು ಸಹ ಲೆಕ್ಕ ಹಾಕಲಾಗಿದೆ.

ಮೆಗಾ ಹರಜು ನಡೆಯುವುದು ಯಾವಾಗ?
ಬಿಸಿಸಿಐ ಸೌದಿ ಅರೇಬಿಯಾದ ನಗರದಲ್ಲಿ ಮೆಗಾ ಹರಾಜನ್ನು ಆಯೋಜಿಸಲು ಯೋಚನೆ ನಡೆಸಿದೆ. ಆದರೆ ಮೆಗಾ ಹರಾಜಿಗೆ ಇನ್ನು ಯಾವುದೇ ಸ್ಥಳವನ್ನು ಫೈನಲ್ ಮಾಡಿಲ್ಲ. ರಿಯಾದ್ ಅಥವಾ ಜೆಡ್ಡಾ ಹೆಸರುಗಳು ಬಿಸಿಸಿಐ ಅಧಿಕಾರಿಗಳ ತಲೆಯಲ್ಲಿ ಓಡುತ್ತಿವೆ. ಯುಎಇಯಲ್ಲಿ ದುಬೈ ಕೂಡ ಒಂದು ಆಯ್ಕೆಯಾಗಿದೆ. ಆದರೆ ಇಲ್ಲಿ ನಡೆಸುವುದು ಕೊಂಚ ಕಷ್ಟ ಆಗಿರಲಿದೆ. ಐಪಿಎಲ್ 2025 ರ ಮೆಗಾ ಹರಾಜು ಈ ವರ್ಷದ ನವೆಂಬರ್ ಕೊನೆಯ ವಾರದಲ್ಲಿ ನಡೆಯುವ ನಿರೀಕ್ಷೆಯಿದೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ.
ಮೆಗಾ ಹರಾಜು ಎಲ್ಲಿ ನಡೆಯಲಿದೆ?
ಮೆಗಾ ಹರಾಜಿಗೆ ಬಿಸಿಸಿಐ ಸ್ಥಳ ಹಾಗೂ ಹೊಟೇಲ್ ಗುರುತಿಸುವುದು ದೊಡ್ಡ ಸಮಸ್ಯೆಯಾಗಿದೆ. ಸೌದಿಯಲ್ಲಿ ಪ್ಲೇಸ್ ಫೈನಲ್ ಮಾಡಲು ಸಮಸ್ಯೆಗಳಿವೆ ಎಂದು ತಿಳಿದು ಬಂದಿದೆ. ಸೌದಿಯಲ್ಲಿ ವೆಚ್ಚ ಹೆಚ್ಚಾಗಲಿದೆ. ಐಪಿಎಲ್ 2023ರ ಹರಾಜು ದುಬೈನಲ್ಲಿ ಆಯೋಜಿಸಲಾಗಿತ್ತು.
ಮೊದಲಿಗೆ ಲಂಡನ್ ಅನ್ನು ಮೆಗಾ ಹರಾಜಿಗೆ ಶಾರ್ಟ್‌ಲಿಸ್ಟ್ ಮಾಡಲಾಗಿದೆ ಎಂದು ವರದಿಯಾಗಿತ್ತು. ಆದರೆ ಅಲ್ಲಿನ ಹವಾಮಾನ ತೊಂದರೆ ನೀಡಬಹುದು ಎಂಬ ಉದ್ದೇಶದಿಂದ ಆ ಸ್ಥಳವನ್ನು ಬಿಸಿಸಿಐ ಕೈ ಬಿಟ್ಟಿದೆ. ಬಿಸಿಸಿಐ ಮತ್ತು ಐಪಿಎಲ್ ಅಧಿಕಾರಿಗಳು ಈಗ ಎರಡು ದಿನಗಳ ಕಾಲ ಹರಾಜು ನಡೆಸಬಹುದಾದ ಸ್ಥಳವನ್ನು ಹುಡುಕುತ್ತಿವೆ.
ಫ್ರಾಂಚೈಸಿ ಚಿಂತೆ ಏನು?
ಅತ್ತ ಬಿಸಿಸಿಐಗೆ ಐಪಿಎಲ್ ಮೆಗಾ ಹರಾಜಿನ ಡೇಟ್ ಹಾಗೂ ಪ್ಲೇಸ್ ಫೈನಲ್ ಮಾಡುವ ಚಿಂತೆ ಆದರೆ, ಇತ್ತ ಫ್ರಾಂಚೈಸಿಗಳಿಗೆ ಆರು ಆಟಗಾರರನ್ನು ಉಳಿಸಿಕೊಳ್ಳುವುದು ದೊಡ್ಡ ತಲೆನೋವಾಗಿದೆ. ಫ್ರಾಂಚೈಸಿಗಳು ಆರು ಆಟಗಾರರನ್ನು ಉಳಿಸಿಕೊಳ್ಳಬಹುದು. ಇಲ್ಲವೇ ಆರ್‌ಟಿಎಂ ಲಾಭ ಸಹ ಪಡೆಯಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications