IPL Auction 2025 LSG: ರಾಹುಲ್ ಬದಲಿಗೆ ರಿಷಭ್ ಪಂತ್‌ಗೆ 27 ಕೋಟಿ ರೂ. ನೀಡಿದ ಲಕ್ನೋ
ಈ ಬಾರಿ ಬಹು ಚರ್ಚಿತ ತಂಡಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಒಂದು. ಈ ತಂಡ ರಿಟೇನ್ಷನ್ ಲೀಸ್ಟ್ ರಿಲೀಸ್ ಮಾಡುವ ಮೊದಲೇ ನಾಯಕನನ್ನು ಕೈ ಬಿಡುವ ಬಗ್ಗೆ ಸೂಚನೆ ನೀಡಿತ್ತು. ಬಳಿಕ ಒಬ್ಬ ಪ್ಲೇಯರ್ ಆಗಿ ಅವರನ್ನು ಉಳಿಸಿಕೊಳ್ಳಲು ಬಯಸುತ್ತೇವೆ ಎಂದು ತಿಳಿಸಿತ್ತು. ಆದರೆ ಎಲ್‌ಎಸ್‌ಜಿ ಕೊನೆಗೆ ಕೆಎಲ್ ರಾಹುಲ್ ಅವರನ್ನು ಹರಾಜಿನ ಅಂಗಳಕ್ಕೆ ಬಿಟ್ಟಿತು. ಇವರಿಗೆ ಆರ್‌ಸಿಬಿ ಭಾರೀ ಮೊತ್ತ ನೀಡಿ ತಂಡಕ್ಕೆ ಬರ ಮಾಡಿಕೊಳ್ಳಬಹುದು ಎಂದೇ ಲೆಕ್ಕಾಚಾರ ಹಾಕಿಕೊಳ್ಳಲಾಗಿತ್ತು. ಆದರೆ ಎಲ್ಲ ಲೆಕ್ಕಾಚಾರ ತಲೆ ಕೆಳಗಾಗಿವೆ.
ಲಕ್ನೋ ತನ್ನ ತಂಡವನ್ನು ಬಲಿಷ್ಠ ಗೊಳಿಸವು ನಿಟ್ಟಿನಲ್ಲಿ ಶ್ರಮಿಸಿದೆ. ತಾನು ಹಾಕಿಕೊಂಡ ಯೋಜನೆಂತೆ ಪ್ಲ್ಯಾನ್ ಮಾಡಿ, ಡೆಲ್ಲಿ ಕ್ಯಾಪಿಟಲ್ಸ್ ಕೈ ಬಿಟ್ಟ ನಾಯಕ ಪ್ಲಸ್ ವಿಕೆಟ್ ಕೀಪರ್ ಬ್ಯಾಟರ್ ಅವರಿಗೆ ಮಣೆ ಹಾಕಿದೆ. ಎಲ್‌ಎಸ್‌ಜಿ ರಿಷಭ್ ಪಂತ್ ಅವರಿಗೆ 27 ಕೋಟಿ ರೂ. ನೀಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಹರಾಜಿನಲ್ಲಿ ಲಕ್ನೋ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದೆ. ಈ ಬಾರಿಯೂ ದೇಶಿಯ ಹಾಗೂ ವಿದೇಶಿ ಆಟಗಾರರ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಎಲ್‌ಎಸ್‌ಜಿ 69 ಕೋಟಿ ಹಣವನ್ನು ಹೂಡಿ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಒಂದು ಮಟ್ಟಿನ ಯಶಸ್ಸು ಕಂಡಿದೆ.

ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿದ ಆಟಗಾರರು
ರಿಷಬ್ ಪಂತ್---27,00 ಕೋಟಿ ರೂ.
ಅವೇಶ್ ಖಾನ್---9,75 ಕೋಟಿ ರೂ.
ಆಕಾಶ್ ದೀಪ್---8,00 ಕೋಟಿ ರೂ.
ಡೇವಿಡ್ ಮಿಲ್ಲರ್---7,50 ಕೋಟಿ ರೂ.
ಅಬ್ದುಲ್ ಸಮದ್---4,20 ಕೋಟಿ ರೂ.
ಮಿಚೆಲ್ ಮಾರ್ಷ್---3,40 ಕೋಟಿ ರೂ.
ಶಹಬಾಜ್ ಅಹಮದ್---2,40 ಕೋಟಿ ರೂ.
ಐಡೆನ್ ಮಾರ್ಕ್ರಾಮ್---2,00 ಕೋಟಿ ರೂ.
ಮ್ಯಾಥ್ಯೂ ಬ್ರೀಟ್ಜ್ಕೆ---75,00 ಲಕ್ಷ ರೂ.
ಶಾಮರ್ ಜೋಸೆಫ್---75,00 ಲಕ್ಷ ರೂ.
ಎಂ.ಸಿದ್ಧಾರ್ಥ್---75,00 ಲಕ್ಷ ರೂ.
ಅರ್ಶಿನ್ ಕುಲಕರ್ಣಿ--30 ಲಕ್ಷ ರೂ.
ರಾಜವರ್ಧನ್ ಹಂಗರಗೇಕರ್--30 ಲಕ್ಷ ರೂ.
ಯುವರಾಜ್ ಚೌಧರಿ--30 ಲಕ್ಷ ರೂ.
ರಾಜಕುಮಾರ ಯಾದವ್--30 ಲಕ್ಷ ರೂ.
ಆಕಾಶ್ ಸಿಂಗ್--30 ಲಕ್ಷ ರೂ.
ದಿಗ್ವೇಶ್ ಸಿಂಗ್--30 ಲಕ್ಷ ರೂ.
ಹಿಮ್ಮತ್ ಸಿಂಗ್--30 ಲಕ್ಷ ರೂ.
ಆರ್ಯನ್ ಜುಯಲ್--30 ಲಕ್ಷ ರೂ.
ಎಲ್‌ಎಸ್‌ಜಿ ಉಳಿಸಿಕೊಂಡ ಆಟಗಾರರು
ನಿಕೋಲಸ್ ಪೂರನ್ 21 ಕೋಟಿ ರೂ.
ಮಯಾಂಕ್ ಯಾದವ್ 11 ಕೋಟಿ ರೂ.
ರವಿ ಬಿಷ್ಣೋಯ್ 11 ಕೋಟಿ ರೂ.
ಮೊಹ್ಸಿನ್ ಖಾನ್ ಅನ್‌ಕ್ಯಾಪ್ಡ್, ₹4 ಕೋಟಿ ರೂ.
ಆಯುಷ್ ಬದೋನಿ ಅನ್‌ಕ್ಯಾಪ್ಡ್, ₹4 ಕೋಟಿ ರೂ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications