ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣಿಸಿಲ್ಲ. ಏಕೆಂದರೆ ಈಗಾಗಲೇ ಸ್ಟಾರ್ ಆಟಗಾರರನ್ನು ಮುಂಬೈ ಉಳಿಸಿಕೊಂಡಿದೆ. ಈ ಸ್ಟಾರ್ ಆಟಗಾರರೊಂದಿಗೆ ಆಡುವ ಕೆಲವೇ ಆಟಗಾರರನ್ನು ಮಾತ್ರ ಹುಡುಕಿ ಮುಂಬೈ ಬಿಡ್ ಮಾಡಿದೆ. ಇದರಲ್ಲಿ ನ್ಯೂಜಿಲೆಂಡ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಅವರಿಗೆ 12.50 ಕೋಟಿ ರೂ. ನೀಡುವ ಮೂಲಕ ಖರೀದಿಸಿದೆ. ಮುಂಬೈ ಬಿಡ್ ಮಾಡಿದ ದುಬಾರಿ ಆಟಗಾರ ಎಂದರೆ ಟ್ರೆಂಟ್ ಬೌಲ್ಟ್.
ಆರ್‌ಸಿಬಿ ಬಿಡುಗಡೆ ಮಾಡಿದ ವಿಲ್ ಜ್ಯಾಕ್ ಅವರಿಗೆ 5.25 ಕೋಟಿ ರೂ.ಗೆ ಮುಂಬೈ ಗಾಳ ಹಾಕಿದೆ. ಅಲ್ಲದೆ, ಕಳೆದ ಬಾರಿ ಬ್ಯಾಟಿಂಗ್‌ನಲ್ಲಿ ಮಿಂಚಿದ ನಮನ್ ಧೀರ್ ಅವರಿಗೂ 5.25 ಕೋಟಿ ರೂ. ನೀಡಿದ ಮುಂಬೈ ತಂಡವನ್ನು ಬಲಿಷ್ಠ ಮಾಡಿಕೊಂಡಿದೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಮುಂಬೈ ಬಿಡ್ ಮಾಡಿದ ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ.

ಟ್ರೆಂಟ್ ಬೌಲ್ಟ್: 12.50 ಕೋಟಿ ರೂ.
ನಮನ್ ಧೀರ್: 5.25 ಕೋಟಿ ರೂ.
ರಾಬಿನ್ ಮಿಂಜ್: 65 ಲಕ್ಷ ರೂ.
ಕರಣ್ ಶರ್ಮಾ: 50 ಲಕ್ಷ ರೂ.
ರಿಯಾನ್ ರಿಕೆಲ್ಟನ್: 1 ಕೋಟಿ ರೂ.
ದೀಪಕ್ ಚಹಾರ್: 9.25 ಕೋಟಿ ರೂ.
ಅಲ್ಲಾ ಗಜನ್ಫರ್: 4.80 ಕೋಟಿ ರೂ.
ವಿಲ್ ಜ್ಯಾಕ್ಸ್: 5.25 ಕೋಟಿ ರೂ.
ಅಶ್ವನಿ ಕುಮಾರ್: 30 ಲಕ್ಷ ರೂ.
ಮಿಚೆಲ್ ಸ್ಯಾಂಟ್ನರ್: 2 ಕೋಟಿ ರೂ.
ರೀಸ್ ಟೋಪ್ಲಿ: 75 ಲಕ್ಷ ರೂ.
ಕೃಷ್ಣನ್ ಶ್ರೀಜಿತ್: 30 ಲಕ್ಷ ರೂ.
ರಾಜ್ ಅಂಗದ್ ಬಾವಾ 30 ಲಕ್ಷ ರೂ.
ಸತ್ಯನಾರಾಯಣ ರಾಜು: 30 ಲಕ್ಷ ರೂ.
ಬೆವನ್ ಜೇಕಬ್ಸ್: 30 ಲಕ್ಷ ರೂ.
ಅರ್ಜುನ್ ತೆಂಡೂಲ್ಕರ್: 30 ಲಕ್ಷ ರೂ.
ಲಿಜಾದ್ ವಿಲಿಯಮ್ಸ್: 75 ಲಕ್ಷ ರೂ.
ವಿಘ್ನೇಶ್ ಪುತ್ತೂರು: 30 ಲಕ್ಷ ರೂ.
ಜಸ್ಪ್ರೀತ್ ಬುಮ್ರಾ : 18 ಕೋಟಿ ರೂ.
ಸೂರ್ಯಕುಮಾರ್ ಯಾದವ್: 16.35 ಕೋಟಿ ರೂ.
ಹಾರ್ದಿಕ್ ಪಾಂಡ್ಯ: 16.35 ಕೋಟಿ ರೂ.
ರೋಹಿತ್ ಶರ್ಮಾ: 16.30 ಕೋಟಿ ರೂ.
ತಿಲಕ್ ವರ್ಮ 8 ಕೋಟಿ ರೂ.