Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Auction 2025: ಪಂಜಾಬ್ ಸೇರಿದ ಆರ್‌ಸಿಬಿ ಮಾಜಿ ಆಟಗಾರರು; ಶ್ರೇಯಸ್ ಅಯ್ಯರ್‌ಗೆ ಲಾಟರಿ

ಐಪಿಎಲ್ 2025ರ ಟೂರ್ನಿಗಾಗಿ ಪಂಜಾಬ್ ಕಿಂಗ್ಸ್ ಬಲಿಷ್ಠ ತಂಡವನ್ನು ಕಟ್ಟಿಕೊಂಡಿದೆ. ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಬಿಡ್ ಮಾಡಿರುವ ಪಂಜಾಬ್ ಕಿಂಗ್ಸ್‌ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗುವ ಕನಸಿನ ಬಳಿ ಬಂದು ನಿಂತಿದೆ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಮಾಜಿ ಆಟಗಾರರನ್ನು ಪಂಜಾಬ್ ಕಿಂಗ್ಸ್ ಬಿಡ್ ಮಾಡಿರುವುದು ಎಲ್ಲರ ಅಚ್ಚರಿಗೊಳಿಸಿದೆ. ಎಲ್ಲದಕ್ಕಿಂತ ಚಾಂಪಿಯನ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು 26.75 ಕೋಟಿ ರೂ. ಖರೀದಿಸಿದೆ. ಈ ಮೂಲಕ ಐಪಿಎಲ್ ಮೆಗಾ ಹರಾಜಿನಲ್ಲಿ ಸೇಲ್ ಆದ ಎರಡನೇ ದುಬಾರಿ ಆಟಗಾರ ಎಂಬ ಹೆಗ್ಗಳಿಕೆ ಶ್ರೇಯಸ್ ಅಯ್ಯರ್ ಪಾತ್ರರಾಗಿದ್ದಾರೆ.

ಶ್ರೇಯಸ್ ಅಯ್ಯರ್ ಹೊರೆತಪಡಿಸಿ ಪಂಜಾಬ್ ಕಿಂಗ್ಸ್ ತಂಡ ಆರ್‌ಟಿಎಂ ಮೂಲಕ ಅರ್ಷದೀಪ್ ಸಿಂಗ್ ಅವರನ್ನು 18 ಕೋಟಿ ರೂ.ಗೆ ಮರಳಿ ಪಡೆದಿದೆ. ಅಲ್ಲದೆ, ಆರ್‌ಸಿಬಿ ಮಾಜಿ ಆಟಗಾರರಾದ ಯುಜ್ವೇಂದ್ರ ಚಹಾಲ್, ಮಾರ್ಕಸ್ ಸ್ಟೋನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿಜಯ್‌ಕುಮಾರ್ ವೈಶಾಕ್ ಮತ್ತು ಲಾಕಿ ಫರ್ಗುಸನ್ ಆವರನ್ನು ಪಂಜಾಬ್ ಸೇರಿಸಿಕೊಂಡಿದೆ. ಇನ್ನುಳಿದ ಸ್ಟಾರ್ ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ.

IPL 2025 Mega Auction Punjab Kings Full List of Players bought and total Amount Spent

ಪಂಜಾಬ್ ಕಿಂಗ್ಸ್‌ ಬಿಡ್ ಮಾಡಿರುವ ಆಟಗಾರರು

ಶ್ರೇಯಸ್ ಅಯ್ಯರ್: 26.75 ಕೋಟಿ ರೂ.
ಅರ್ಷದೀಪ್ ಸಿಂಗ್ (ಆರ್‌ಟಿಎಂ): 18 ಕೋಟಿ ರೂ.
ಯುಜ್ವೇಂದ್ರ ಚಹಾಲ್: 18 ಕೋಟಿ ರೂ.
ಮಾರ್ಕಸ್ ಸ್ಟೋನಿಸ್: 11 ಕೋಟಿ ರೂ.
ಗ್ಲೆನ್ ಮ್ಯಾಕ್ಸ್‌ವೆಲ್: 4.20 ಕೋಟಿ ರೂ.
ನೆಹಾಲ್ ವಧೇರಾ: 4.20 ಕೋಟಿ ರೂ.
ಹರ್‌ಪ್ರೀತ್ ಬ್ರಾರ್: 1.50 ಕೋಟಿ ರೂ.
ವಿಷ್ಣು ವಿನೋದ್: 95 ಲಕ್ಷ ರೂ.
ವಿಜಯ್‌ಕುಮಾರ್ ವೈಶಾಕ್:1.80 ಕೋಟಿ ರೂ.
ಯಶ್ ಠಾಕೂರ್:1.60 ಕೋಟಿ ರೂ.
ಮಾರ್ಕೊ ಜಾನ್ಸೆನ್:7 ಕೋಟಿ ರೂ.
ಜೋಶ್ ಇಂಗ್ಲಿಸ್:2.6 ಕೋಟಿ ರೂ.
ಲಾಕಿ ಫರ್ಗುಸನ್:2 ಕೋಟಿ ರೂ.
ಅಜ್ಮತುಲ್ಲಾ ಒಮರ್ಜಾಯ್: 2.40 ಕೋಟಿ ರೂ.
ಹರ್ನೂರ್ ಪನ್ನು: 30 ಲಕ್ಷ ರೂ.
ಕುಲದೀಪ್ ಸೇನ್: 80 ಲಕ್ಷ ರೂ.
ಪ್ರಿಯಾಂಶ್ ಆರ್ಯ: 3.80 ಕೋಟಿ ರೂ.
ಆರೋನ್ ಹಾರ್ಡಿ: 1.25 ಕೋಟಿ ರೂ.
ಮುಶೀರ್ ಖಾನ್: 30 ಲಕ್ಷ ರೂ.
ಸೂರ್ಯಾಂಶ್ ಶೆಡ್ಜ್: 30 ಲಕ್ಷ ರೂ.
ಕ್ಸೇವಿಯರ್ ಬಾರ್ಟ್ಲೆಟ್: 80 ಲಕ್ಷ ರೂ.
ಪೈಲಾ ಅವಿನಾಶ್: 30 ಲಕ್ಷ ರೂ.
ಪ್ರವೀಣ್ ದುಬೆ: 30 ಲಕ್ಷ ರೂ.

ಪಂಜಾಬ್ ಉಳಿಸಿಕೊಂಡಿದ್ದ ಆಟಗಾರರು

ಶಶಾಂಕ್ ಸಿಂಗ್: 5.5 ಕೋಟಿ ರೂ.
ಪ್ರಭಾಸಿಮ್ರಾನ್ ಸಿಂಗ್: 4 ಕೋಟಿ ರೂ.

Story first published: Monday, November 25, 2024, 20:54 [IST]
Other articles published on Nov 25, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+