IPL 2025 Mega Auction: ಮೂವರು ಭಾರತೀಯ ಆಟಗಾರರ ಮೇಲೆ ಮಾಲೀಕರ ಚಿತ್ತ
ಐಪಿಎಲ್ ಮೆಗಾ ಹರಾಜಿಗೆ ಸಿದ್ಧತೆಗಳು ಭರದಿಂದ ಸಾಗಿವೆ. ಐಪಿಎಲ್ ತಂಡಗಳ ಮಾಲೀಕರು ಯಾವ ತಂಡ ಯಾರನ್ನು ಕೈ ಬಿಡಲಿದೆ ಎಂಬುದನ್ನು ನೋಡುತ್ತಿದ್ಧಾರೆ. ಇದೇ ವೇಳೆ ತಮ್ಮ ತಂಡದಲ್ಲಿ ಯಾರನ್ನು ಉಳಿಸಿಕೊಳ್ಳಬೇಕು ಯಾರನ್ನು ಕೈ ಬಿಡಬೇಕು ಎಂಬ ಟೆನ್ಷನ್ ಸಹ ಆರಂಭವಾಗಿದೆ. ಈ ಬಾರಿ ಐಪಿಎಲ್ ಮೆಗಾ ಹರಾಜು ನಡೆಯಲಿದ್ದು, ಎಲ್ಲರ ಚಿತ್ತ ಕದ್ದಿದೆ.
ಈ ಬಾರಿ ನಡೆಯಲಿರುವ ಐಪಿಎಲ್ ಹರಾಜಿನಲ್ಲಿ ಹಿಂದಿನ ದಾಖಲೆಗಳೆಲ್ಲಾ ಅಳಿಸಿ ಹೋಗುವ ಸಾಧ್ಯತೆಗಳಿವೆ. ಈ ಬಾರಿ ಬಿಡ್ಡಿಂಗ್ ಅಂಗಳಕ್ಕೆ ಖ್ಯಾತ ನಾಮ ಆಟಗಾರರು ಎಂಟ್ರಿ ನೀಡಲಿದ್ದಾರೆ. ಹೀಗಾಗಿ ಕುತೂಹಲ ಹೆಚ್ಚಿದೆ. ಮಾಲೀಕರು ಸಹ ಭಾರತೀಯ ಆಟಗಾರರಿಗೆ ಹಣವನ್ನು ಹೂಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅದರಂತೆ ಈ ಬಾರಿ ಐಪಿಎಲ್‌ನಲ್ಲಿ ಹರಾಜು ಅಂಗಳದಲ್ಲಿ ಮೂವರು ಭಾರತೀಯ ಆಟಗಾರರು ಎಲ್ಲರ ಚಿತ್ತವನ್ನು ಕದ್ದಿದ್ದಾರೆ.

ರೋಹಿತ್ ಶರ್ಮಾ
ರೋಹಿತ್ ಶರ್ಮಾ ಸದ್ಯ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಾರೆ. ಆದರೆ ಅವರನ್ನು ಮುಂಬೈ ತಂಡ ಉಳಿಸಿಕೊಳ್ಳುತ್ತದೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಗುಜರಾತ್ ಟೈಟನ್ಸ್‌ನಿಂದ ಹಾರ್ದಿಕ್ ಪಾಂಡ್ಯರನ್ನು ಟ್ರೇಡ್ ಮಾಡಿದ್ದ ಮುಂಬೈ, ನಾಯಕತ್ವವನ್ನು ನೀಡಿತ್ತು. ಇದರಿಂದ ರೋಹಿತ್‌ಗೆ ಅಸಮಾಧಾನವಾಗಿತ್ತು. ಆದರೆ ಈಗಿನ ಚಿತ್ರಣವೇ ಡಿಫ್ರೆಂಟ್ ಆಗಿದೆ. ರೋಹಿತ್ ತಮ್ಮಲ್ಲಿ ಇನ್ನು ನಾಯಕತ್ವದ ಗುಣಗಳು ಇವೆ ಎಂಬುದನ್ನು ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಸಾಬೀತು ಮಾಡಿ ತೋರಿಸಿದ್ದಾರೆ.
ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಅವರನ್ನು ತಂಡದಿಂದ ಕೈ ಬಿಟ್ಟಲ್ಲಿ, ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಹಣದ ಹೊಳೆಯನ್ನು ಹರಿಸಲು ಮಾಲೀಕರು ಸಹ ಸಿದ್ಧತೆ ನಡೆಸಿದ್ದಾರೆ. ಈ ಸ್ಟಾರ್ ಪ್ಲೇಯರ್ ಆರಂಭಿಕರಾಗಿ ಕಣಕ್ಕೆ ಇಳಿಯುವುದಲ್ಲದೆ, ನಾಯಕರಾಗಿಯೂ ತಂಡಕ್ಕೆ ನೆರವಾಗಬಲ್ಲರು.
ಕೆ.ಎಲ್ ರಾಹುಲ್
ಕನ್ನಡಿಗ ಕೆ.ಎಲ್. ರಾಹುಲ್ ಈ ಬಾರಿ ಎಲ್ಲರ ಚಿತ್ತ ಕದ್ದಿರುವ ಇನ್ನೋಬ್ಬ ಭಾರತೀಯ ಆಟಗಾರ. ಕಳೆದ ಆವೃತ್ತಿಯ ವೇಳೆ ಲಕ್ನೋ ಸೂಪರ್ ಜೈಂಟ್ಸ್ ಮಾಲೀಕರ ಹಾಗೂ ರಾಹುಲ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದನ್ನು ನೋಡಿದರೆ ಇವರು ಎಲ್‌ಎಸ್‌ಜಿ ತಂಡದ ಪರ ಆಡುವುದು ಡೌಟ್ ಎನಿಸುತ್ತದೆ. ಒಂದು ವೇಳೆ ಎಲ್‌ಎಸ್‌ಜಿ ಇವರನ್ನು ರಿಲೀಸ್ ಮಾಡಿದ್ದೇ ಆದಲ್ಲಿ ಇವರಿಗೂ ಮಾಲೀಕರು ಬಾಜಿ ಕಟ್ಟಲಿದ್ದಾರೆ.

ರಾಹುಲ್ ಬಹು ಮುಖ ಪ್ರತಿಭೆ. ಇವರ ನಾಯಕತ್ವದಲ್ಲಿ ಎಲ್‌ಎಸ್‌ಜಿ ಒಮ್ಮೆ ಪ್ಲೇ ಆಫ್ ಪ್ರವೇಶಿಸಿತ್ತು. ಇನ್ನು ಇವರು ವಿಕೆಟ್ ಕೀಪರ್ ಆಗಿಯೂ ಉತ್ತಮವಾಗಿ ಕೆಲಸ ಮಾಡುತ್ತಾರೆ. ಅಲ್ಲದೆ ಬ್ಯಾಟಿಂಗ್‌ಗೆ ಆನೆ ಬಲ ತುಂಬ ಬಲ್ಲ ಪ್ಲೇಯರ್.
ಹರ್ಷಿತ್ ರಾಣಾ
2024ರ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಆಟಗಾರ ಹರ್ಷಿತ್ ರಾಣ. ಕೋಲ್ಕತ್ತಾ ಯುವ ಆಟಗಾರನಿಗೆ ಮಣೆ ಹಾಕುತ್ತದೋ ಇಲ್ಲವೋ ಎಂಬುದರ ಬಗ್ಗೆ ಇನ್ನು ಸ್ಪಷ್ಟ ಮಾಹಿತಿ ಇಲ್ಲ. ಆದರೆ ಇವರು ಬಿಡ್ ಅಂಗಳಕ್ಕೆ ಎಂಟ್ರಿ ನೀಡಿದರೆ, ಕೋಟಿ ಕೋಟಿ ಕೊಳ್ಳೆ ಹೊಡೆಯಬಲ್ಲರು.

ಹರ್ಷಿತ್ ರಾಣಾ ಕಳೆದ ಬಾರಿಯ ಐಪಿಎಲ್‌ನಲ್ಲಿ ಆಡಿದ 13 ಪಂದ್ಯಗಳಲ್ಲಿ 19 ವಿಕೆಟ್ ಪಡೆದು ಮಿಂಚಿದ್ದರು. ಹೀಗಾಗಿ ಇವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಮಾಲೀಕರು ಬಾಜಿ ಕಟ್ಟಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications