ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ನೂತನ ಹೆಡ್‌ಕೋಚ್ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಆಟಗಾರರನ್ನು ಬಿಡ್ ಮಾಡಿತ್ತು. ಮೆಗಾ ಹರಾಜಿನ ಮೊದಲ ದಿನ ರಾಜಸ್ಥಾನ ರಾಯಲ್ಸ್ ಇಂಗ್ಲೆಂಡ್ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರನ್ನು 12.5 ಕೋಟಿ ರೂ.ಗೆ ಖರೀದಿಸಿತು. ಈ ಮೂಲಕ ರಾಜಸ್ಥಾನ ಖರೀದಿಸಿದ ದುಬಾರಿ ಆಟಗಾರರ ಎಂಬ ಹೆಗ್ಗಳಿಕೆಗೆ ಜೋಫ್ರಾ ಆರ್ಚರ್ ಪಾತ್ರರಾದರು.
ರಾಜಸ್ಥಾನ ರಾಯಲ್ಸ್ ಸ್ಟಾರ್ ಆಟಗಾರರನ್ನು ಬಿಡ್ ಮಾಡಲು ಮುಂದಾಗಲಿಲ್ಲ. ದೇಶಿ ಪ್ರತಿಭೆಗಳನ್ನು ಗುರಿತಿಸಿ ಬಿಡ್ ಮಾಡಿತ್ತು. ಹೀಗಾಗಿ ಐಪಿಎಲ್ ಮೆಗಾ ಹರಾಜಿನಲ್ಲಿ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದ ವೈಭವ್ ಸೂರ್ಯವಂಶಿ ಅವರಿಗೆ 1.1 ಕೋಟಿ ರೂ. ನೀಡಿ ರಾಜಸ್ಥಾನ ಸೇರಿಸಿಕೊಂಡಿದೆ. ಅಲ್ಲದೆ, ಶ್ರೀಲಂಕಾದ ಇಬ್ಬರು ಸ್ಟಾರ್ ಸ್ಪಿನ್ನರ್‌ಗಳಾದ ಮಹೇಶಾ ತೀಕ್ಷಣ (4.4 ಕೋಟಿ ರೂ.) ಮತ್ತು ವನಿಂದು ಹಸರಂಗ (5.25 ಕೋಟಿ ರೂ.) ಅವರನ್ನು ಆರ್‌ಆರ್ ಬಿಡ್ ಮಾಡಿದೆ.

ಜೋಫ್ರಾ ಆರ್ಚರ್: 12.5 ಕೋಟಿ ರೂ.
ಮಹೇಶ್ ತೀಕ್ಷಣ: 4.4 ಕೋಟಿ ರೂ.
ವನಿಂದು ಹಸರಂಗ: 5.25 ಕೋಟಿ ರೂ.
ಆಕಾಶ್ ಮಧ್ವಲ್: 1.2 ಕೋಟಿ ರೂ.
ಕುಮಾರ್ ಕಾರ್ತಿಕೇಯ: 30 ಲಕ್ಷ ರೂ.
ನಿತೀಶ್ ರಾಣಾ: 4.40 ಕೋಟಿ ರೂ.
ತುಷಾರ್ ದೇಶಪಾಂಡೆ: 6.50 ಕೋಟಿ ರೂ.
ಶುಭಂ ದುಬೆ: 80 ಲಕ್ಷ ರೂ.
ಯುದ್ಧವೀರ್ ಸಿಂಗ್: 35 ಲಕ್ಷ ರೂ.
ಫಜಲ್ಹಕ್ ಫಾರೂಕಿ: 2 ಕೋಟಿ ರೂ.
ವೈಭವ್ ಸೂರ್ಯವಂಶಿ: 1.1 ಕೋಟಿ ರೂ.
ಕ್ವೆನಾ ಮಫಕಾ: 1.50 ಕೋಟಿ ರೂ.
ಕುನಾಲ್ ರಾಥೋಡ್: 30 ಲಕ್ಷ ರೂ.
ಅಶೋಕ್ ಶರ್ಮಾ: 30 ಲಕ್ಷ ರೂ.
ಸಂಜು ಸ್ಯಾಮ್ಸನ್: 18 ಕೋಟಿ ರೂ.
ಯಶಸ್ವಿ ಜೈಸ್ವಾಲ್: 18 ಕೋಟಿ ರೂ.
ರಿಯಾನ್ ಪರಾಗ್: 14 ಕೋಟಿ ರೂ.
ಧ್ರುವ್ ಜುರೆಲ್: 14 ಕೋಟಿ ರೂ.
ಶಿಮ್ರಾನ್ ಹೆಟ್ಮೆಯರ್: 11 ಕೋಟಿ ರೂ.
ಸಂದೀಪ್ ಶರ್ಮಾ: 4 ಕೋಟಿ ರೂ.