IPL 2025: ಐಪಿಎಲ್ ಹರಾಜಿಗೆ ಮುಹೂರ್ತ ಫಿಕ್ಸ್: ಇಲ್ಲಿದೆ ಕಂಪ್ಲೀಟ್ ಮಾಹಿತಿ
ಅಕ್ಟೋಬರ್ 31 ರಂದು ಬಿಸಿಸಿಐಗೆ ಐಪಿಎಲ್ ಫ್ರಾಂಚೈಸಿಗಳು ತಮ್ಮ ರಿಟೇನ್ಷನ್ ಲೀಸ್ಟ್ ನೀಡಿದ್ದಾರೆ. ಐಪಿಎಲ್ ಮಾಲೀಕರು ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದ್ದಾರೆ. ಸ್ಟಾರ್ ಆಟಗಾರರಾದ ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಫಾಫ್ ಡುಪ್ಲೇಸಿಸ್, ಯಜುವೇಂದ್ರ ಚಹಾಲ್ ಅವರನ್ನು ಮಾಲೀಕರು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ರಿಟೇನ್ ಲೀಸ್ಟ್ ನೀಡಿದ ಬಳಿಕ ಐಪಿಎಲ್ ಹರಾಜು ನಡೆಯುವುದು ಯಾವಾಗ ಎಂಬ ಪ್ರಶ್ನೆಗಳು ಎದ್ದಿದ್ದವು. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಕ್ರಿಕೆಟ್ ಅಭಿಮಾನಿಗಳು ಬಹಳ ಕುತೂಹಲದಿಂದ ಕಾಯುತ್ತಿದ್ದ ಐಪಿಎಲ್ ಹರಾಜಿಗೆ ಸಂಬಂಧಿಸಿದಂತೆ ದಿನಾಂಕ ಬಹಿರಂಗವಾಗಿದೆ. ಐಪಿಎಲ್ ಹರಾಜು ಎಲ್ಲಿ ನಡೆಯಲಿದೆ ಎಂಬ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಆ ಕುರಿತಾದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಹರಾಜಿಗೆ ಮುಹೂರ್ತ ಫಿಕ್ಸ್
ಐಪಿಎಲ್ 2025 ಹರಾಜಿನ ಬಿಗ್ ಅಪ್‌ಡೇಟ್ ಸಿಕ್ಕಿದೆ. ಐಪಿಎಲ್ 2025 ರ ಮೆಗಾ ಹರಾಜಿನ ಸ್ಥಳ ಮತ್ತು ದಿನಾಂಕದ ಬಗ್ಗೆ ದೊಡ್ಡ ಬಹಿರಂಗಗೊಂಡಿದೆ. ಈ ತಿಂಗಳ ಅಂತ್ಯದಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದ್ದು, ಈ ಬಾರಿಯ ಐಪಿಎಲ್ ಹರಾಜು ವಿದೇಶದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಸೌದಿ ಅರೇಬಿಯಾ ರಾಜಧಾನಿ ರಿಯಾದ್ ನಲ್ಲಿ ಮೆಗಾ ಹರಾಜು ನಡೆಯುವ ಸಾಧ್ಯತೆ ಇದೆ. ಎಎನ್‌ಐ ವರದಿಯಲ್ಲಿ ಈ ಬಗ್ಗೆ ಬಹಿರಂಗವಾಗಿದೆ.
ನಡೆಯುವುದು ಎಲ್ಲಿ? ಯಾವಾಗ?
ಎಎನ್‌ಐ ವರದಿಯ ಪ್ರಕಾರ, ಈ ಬಾರಿಯ ಮೆಗಾ ಹರಾಜು ನವೆಂಬರ್ 24 ಹಾಗೂ 25 ರಂದು ರಿಯಾದ್‌ಲ್ಲಿ ನಡೆಯಲಿದೆ. ಮಧ್ಯಪ್ರಾಚ್ಯದ ದೊಡ್ಡ ನಗರದಲ್ಲಿ ನಡೆಯಬಹುದು ಎಂಬ ಊಹಾಪೋಹಗಳು ಇದ್ದವು. ಈಗ ರಿಯಾದ್‌ನಲ್ಲಿ ನಡೆಯಲಿದೆ ಎಂದು ಬಹುತೇಕ ಖಚಿತವಾದಂತೆ ಆಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿಯೊಂದು ಹೊರ ಬೀಳಬೇಕಿದೆ. ಈ ಬಾರಿ ಒಂದಕ್ಕಿಂತ ಹೆಚ್ಚು ಆಟಗಾರರು ಹರಾಜಿನಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲಿವೆ.
ಈ ಬಾರಿಯ ಐಪಿಎಲ್ ರಿಟೇನ್ಷನ್ ಲೀಸ್ಟ್‌ನಲ್ಲಿ ಹಲವು ಅಚ್ಚರಿಯ ಮುಖಗಳಿಗೆ ಮಾಲೀಕರು ಮಣೆ ಹಾಕಿದ್ದಾರೆ. ಇನ್ನು ಪಂಜಾಬ್ ತಂಡ ಒಬ್ಬನೇ ಒಬ್ಬ ಕ್ಯಾಪ್ಡ್ ಪ್ಲೇಯರನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಪಂಜಾಬ್ ಇಬ್ಬರು ಅನ್ ಕ್ಯಾಪ್ಡ್ ಪ್ಲೇಯರ್‌ಗೆ ಮಣೆ ಹಾಕಿದೆ. ಪಂಜಾಬ್ ಹರಾಜಿನಲ್ಲಿ ತನ್ನ ಪೂರ್ಣ ತಂಡವನ್ನು ಆಯ್ಕೆ ಮಾಡಲಿದೆ.
ಮಾಲೀಕರು ಗರಿಷ್ಠ ಆರು ಜನ ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶವನ್ನು ಬಿಸಿಸಿಐ ನೀಡಿತ್ತು. ಆದರೆ ಕೆಲವೇ ಕೆಲವು ತಂಡಗಳು ಮಾತ್ರ ಆರು ಜನರನ್ನು ಉಳಿಸಿಕೊಂಡಿವೆ. ಉಳಿದಂತೆ ಹೆಚ್ಚಿನ ಹೆಚ್ಚಿನ ತಂಡಗಳು ಐದು ಆಟಗಾರರಿಗೆ ಮಣೆ ಹಾಕಿವೆ. ಈ ಮೂಲಕ ಹರಾಜಿನಲ್ಲಿ ಆರ್‌ಟಿಎಂ ಎಂಬ ಬ್ರಹ್ಮಾಸ್ತ್ರವನ್ನು ಬಳಸಿ ಸ್ಟಾರ್ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವ ಪ್ಲ್ಯಾನ್ ಮಾಡಿಕೊಂಡಿವೆ. ಆರ್‌ಸಿಬಿ ಬಳಿ ಮೂರು ಆರ್‌ಟಿಎಂ ಕಾರ್ಡ್‌ಗಳು ಇದ್ದು, ಯಾರಿಗೆ ಮಣೆ ಹಾಕಲಿವೆ ಎಂಬುದು ಕುತೂಹಲ ಹೆಚ್ಚಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications