ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜು ಅಖಾಡದಲ್ಲಿ ಹೊಸ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ, ಸ್ಟಾರ್ ಆಟಗಾರರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇಂದು ಈ ಸ್ಟಾರ್ ಆಟಗಾರರ ಐಪಿಎಲ್ ಭವಿಷ್ಯ ನಿರ್ಧಾರವಾಗಲಿದೆ. ಈ ಸ್ಟಾರ್ ಆಟಗಾರರು ದುಬಾರಿ ಬೆಲೆಗೆ ಸೇಲ್ ಆಗುವ ಸಾಧ್ಯತೆಯಿದೆ. ದುಬಾರಿ ಬೆಲೆಗೆ ಸೇಲ್ ಆಗುವ ಆಟಗಾರರು ಪಟ್ಟಿಯಲ್ಲಿ ಏಳು ಸ್ಟಾರ್ ಆಟಗಾರರಿದ್ದಾರೆ.
ದುಬಾರಿ ಬೆಲೆಗೆ ಸೇಲ್ ಆಗುವ ಸ್ಟಾರ್ ಆಟಗಾರರನ್ನು ಬಿಡ್ ಮಾಡಲು ಐಪಿಎಲ್ ಫ್ರಾಂಚೈಸಿಗಳು ಬ್ಲೂ ಪ್ರಿಂಟ್ ರೆಡಿ ಮಾಡಿಕೊಂಡಿವೆ. ಹೀಗಾಗಿ ಯಾವ ಆಟಗಾರ ಯಾವ ತಂಡಕ್ಕೆ ಸೇರುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ. ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಈ ಸ್ಟಾರ್ ಆಟಗಾರರ ಅದೃಷ್ಟ ಖುಲಾಯಿಸುವ ಸಾಧ್ಯತೆ ಇದೆ. ಅಂತಹ ಸ್ಟಾರ್ ಆಟಗಾರರ ಬಗ್ಗೆ ತಿಳಿಯಿರಿ.

ಈ ಬಾರಿಯ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗುವ ಆಟಗಾರರ ಪಟ್ಟಿಯಲ್ಲಿ ಇರುವ ಮೊದಲ ಹೆಸರು ರಿಷಬ್ ಪಂತ್. ಪಂತ್ ಅವರನ್ನು ಬಿಡ್ ಮಾಡಲು ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗಳು ಮುಂಚೂಣಿಯಲ್ಲಿವೆ. ವಿಕೆಟ್ ಕೀಪರ್ ಮತ್ತು ಬ್ಯಾಟರ್ ಆಗಿರುವ ರಿಷಬ್ ಪಂತ್ ನಾಯಕತ್ವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆರ್‌ಸಿಬಿ ಸಿಎಸ್‌ಕೆ ಮತ್ತು ಪಂಜಾಬ್ ತಂಡಗಳು ನಾಯಕನ ಹುಡುಕಾಟದಲ್ಲಿ ಇವೆ. ಪಂತ್ ಮೂರು ತಂಡಗಳಿಗೆ ಪ್ರಮುಖ ಆಟಗಾರ ಎನಿಸಿದ್ದಾರೆ. ಹೀಗಾಗಿ
ಪಂತ್ ಮೇಲೆ ಸಾಕಷ್ಟು ಹಣದ ಸುರಿಮಳೆ ಸುರಿಯುವ ಸಾಧ್ಯತೆ ಇದೆ.
ಕಳೆದ ಬಾರಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಶ್ರೇಯಸ್ ಅಯ್ಯರ್ ಪ್ರಮುಖ ಪಾತ್ರವನ್ನು ವಹಿಸಿದ್ದರು. ಆದರೆ ಈ ಬಾರಿ ಮೆಗಾ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಚಾಂಪಿಯನ್ ನಾಯಕ ಮೆಗಾ ಹರಾಜಿನಲ್ಲಿ ದುಬಾರಿ ಬೆಲೆಗೆ ಸೇಲ್ ಆಗಬಹುದು.
ಈ ಬಾರಿ ಐಪಿಎಲ್ 2025ರ ಪ್ರಕ್ರಿಯೆಗೆ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೆಂಟ್ಸ್ ತಂಡವನ್ನು ತೊರೆದು ಬಂದಿರುವುದು ಆರ್‌ಸಿಬಿ ಅಭಿಮಾನಿಗಳಿಗೆ ಸಂತಸ ಮೂಡಿಸಿದೆ. ವಿಕೆಟ್ ಕೀಪರ್ ಮತ್ತು ನಾಯಕತ್ವ ಸಾಮರ್ಥ್ಯ ಹೊಂದಿರುವ ರಾಹುಲ್ ಮೇಲೆ ಆರ್‌ಸಿಬಿ ಕಣ್ಣಿಟ್ಟಿದೆ. ರಾಹುಲ್ ಕೂಡ ದುಬಾರಿ ಬೆಲೆಗೆ ಬಿಡ್ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದಾರೆ.
ಕಳೆದ ಐಪಿಎಲ್ ಮಿನಿ ಹರಾಜಿನಲ್ಲಿ ಸಂಚಲನ ಮೂಡಿಸಿದ ಆಸ್ಟ್ರೇಲಿಯಾದ ಸ್ಟಾರ್ ವೇಗದ ಬೌಲರ್ ಮಿಚೆಲ್ ಸ್ಟಾಕ್ ಈ ಬಾರಿಯೂ ದುಬಾರಿ ಬೆಲೆಗೆ ಸೇಲ್ ಆಗುವ ನಿರೀಕ್ಷೆಯಿದೆ. ಕಳೆದ ಬಾರಿ 24.50 ಕೋಟಿ ರೂ.ಗೆ ಬಿಡ್ ಆಗಿದ್ದ ಮಿಚೆಲ್ ಸ್ಟಾಕ್ ದಾಖಲೆ ಬರೆದಿದ್ದರು. ಆದರೆ, ಮುಂದಿನ ಐಪಿಎಲ್ ಆವೃತ್ತಿ ಕೆಕೆಆರ್ ಸ್ಟಾರ್ಕ್ ಅವರನ್ನು ಉಳಿಸಿಕೊಂಡಿಲ್ಲ. ಹೀಗಾಗಿ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಸ್ಟಾರ್ಕ್ ಮೇಲೆ ಕೋಟಿ ಹಣ ಹೂಡಿಕೆ ಮಾಡಬಹುದು.
ಈ ಬಾರಿ ಐಪಿಎಲ್ ಮೆಗಾ ಹರಾಜಿನಲ್ಲಿ ಭಾರತದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ದುಬಾರಿ ಬೆಲೆಗೆ ಸೇಲ್ ಆಗುವ ಆಟಗಾರರ ಪಟ್ಟಿಯಲ್ಲಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ವಿಕೆಟ್ ಪಡೆದಿರುವ ದಾಖಲೆ ಹೊಂದಿರುವ ಚಹಾಲ್ ಅವರನ್ನು ದುಬಾರಿ ಬೆಲೆಗೆ ಬಿಡ್ ಮಾಡಬಹುದು. ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿ ತಂಡಗಳನ್ನು ಕಟ್ಟಿ ಹಾಕುವುದರಲ್ಲಿ ಚಹಾಲ್ ನಿಸೀಮರು. ಕಳೆದ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಚಹಾಲ್ ಆಡಿದ್ದರು.
ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರನ್ನು ಪಂಜಾಬ್ ಕಿಂಗ್ಸ್ ಮುಂದಿನ ಐಪಿಎಲ್ ಆವೃತ್ತಿಗೆ ಉಳಿಸಿಕೊಳ್ಳದೆ ತಂಡದಿಂದ ಬಿಡುಗಡೆ ಮಾಡಿರುವುದು ಅಚ್ಚರಿ ತರಿಸಿದೆ. ಈ ಬಾರಿ ಭಾರತ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಅರ್ಷದೀಪ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಅವರನ್ನು ಪಂಜಾಬ್ ಉಳಿಸಿಕೊಂಡಿಲ್ಲ. ಹೀಗಾಗಿ ಈ ಬಾರಿ ಐಪಿಎಲ್ ಮೆಗಾ ಹರಾಜಿನಲ್ಲಿ ಹೆಚ್ಚಿನ ಮೊತ್ತಕ್ಕೆ ಅರ್ಷದೀಪ್ ಬಿಡ್ ಆಗುವ ನಿರೀಕ್ಷೆಯಿದೆ.
ಮುಂಬೈ ಇಂಡಿಯನ್ಸ್ ತಂಡ ಕೈ ಬಿಟ್ಟಿರುವ ಸ್ಟಾರ್ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಇಶಾನ್ ಕಿಶಾನ್ ಈ ಬಾರಿ ಮೆಗಾ ಹರಾಜು ಪ್ರಕ್ರಿಯೆಯಲ್ಲಿದ್ದಾರೆ. ಇಶಾನ್ ಕಿಶಾನ್ ಮೇಲೆ ಐಪಿಎಲ್ ಫ್ರಾಂಚೈಸಿಗಳು ಹಣದ ಸುರಿಮಳೆ ಸುರಿಸುವ ಸಾಧ್ಯತೆಯಿದೆ. ಐಪಿಎಲ್ 2022 ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆದ ದಾಖಲೆಯನ್ನು ಕಿಶನ್ ಹೊಂದಿದ್ದಾರೆ. ಮುಂಬೈ ಇಂಡಿಯನ್ಸ್ ₹15.25 ಅವರನ್ನು ಕೋಟಿಗೆ ಬಿಡ್ ಮಾಡಿತ್ತು.