Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Auction 2025 SRH: ಸ್ಟಾರ್ ಆಟಗಾರರಿಗೆ ಗಾಳ ಹಾಕಿದ ಕಾವ್ಯ ಮಾರನ್; ಇಲ್ಲಿದೆ ಎಸ್‌ಆರ್‌ಹೆಚ್ ಬಿಡ್ ಲಿಸ್ಟ್

ಹಾಲಿ ರನ್ನರ್ ಆಫ್ ಸನ್‌ರೈಸರ್ಸ್‌ ಹೈದರಾಬಾದ್ (ಎಸ್‌ಆರ್‌ಹೆಚ್‌) ಮುಂದಿನ ಐಪಿಎಲ್‌ ಆವೃತ್ತಿಯಲ್ಲಿ ಚಾಂಪಿಯನ್ ಆಗಲು ಭರ್ಜರಿ ತಂಡ ಕಟ್ಟಿದೆ. ಐಪಿಎಲ್ 2025ರ ಮೆಗಾ ಹರಾಜಿನ ಮೊದಲನೇ ದಿನವೇ ಎಸ್‌ಆರ್‌ಹೆಚ್‌ ಸ್ಟಾರ್ ಆಟಗಾರರಿಗೆ ಗಾಳ ಹಾಕಿದೆ. ಟೀಮ್ ಇಂಡಿಯಾ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ಇಶಾನ್ ಕಿಶನ್ ಅವರನ್ನು 11.25 ಕೋಟಿ ರೂ.ಗೆ ಎಸ್‌ಆರ್‌ಹೆಚ್‌ ಬಿಡ್ ಮಾಡಿದೆ. ಈ ಬಾರಿ ಮೆಗಾ ಹರಾಜಿನಲ್ಲಿ ಎಸ್‌ಆರ್‌ಹೆಚ್‌ ಬಿಡ್ ಮಾಡಿದ ದುಬಾರಿ ಆಟಗಾರರ ಪಟ್ಟಿಯಲ್ಲಿ ಇಶಾನ್ ಕಿಶನ್ ಮೊದಲ ಸ್ಥಾನದಲ್ಲಿದ್ದಾರೆ

ಇಶಾನ್ ಕಿಶನ್ ನಂತರ ಟೀಮ್ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ 10 ಕೋಟಿ ರೂ. ಎಸ್‌ಆರ್‌ಹೆಚ್ ಖರೀದಿಸಿದೆ. ಅಲ್ಲದೆ, ಪರ್ಪಲ್ ಪಟೇಲ್ ಎಂದೇ ಹೆಸರು ಮಾಡಿರುವ ವೇಗಿ ಹರ್ಷಲ್ ಪಟೇಲ್ ಅವರಿಗೆ ಎಸ್‌ಆರ್‌ಹೆಚ್‌ 8 ಕೋಟಿ ರೂ. ನೀಡಿದೆ. ಈ ಮೂಲಕ ಬಲಿಷ್ಠ ತಂಡವನ್ನು ಎಸ್‌ಆರ್‌ಹೆಚ್‌ ಐಪಿಎಲ್ 2025ರ ಆವೃತ್ತಿಗೆ ರೆಡಿ ಮಾಡಿಕೊಂಡಿದೆ.

IPL 2025 Mega Auction SRH Full List of Players bought and total Amount Spent

ಸನ್‌ರೈಸರ್ಸ್ ಹೈದರಾಬಾದ್ ಬಿಡ್ ಮಾಡಿದ ಆಟಗಾರರು

ಮೊಹಮ್ಮದ್ ಶಮಿ: 10 ಕೋಟಿ ರೂ.
ಹರ್ಷಲ್ ಪಟೇಲ್: 8 ಕೋಟಿ ರೂ.
ಇಶನ್ ಕಿಶನ್: 11.25 ಕೋಟಿ ರೂ.
ರಾಹುಲ್ ಚಹಾರ್: 3.2 ಕೋಟಿ ರೂ.
ಆಡಮ್ ಜಂಪಾ: 2.4 ಕೋಟಿ ರೂ.
ಅಥರ್ವ ಟೈಡೆ: 30 ಲಕ್ಷ ರೂ.
ಅಭಿನವ್ ಮನೋಹರ್: 3.2 ಕೋಟಿ ರೂ.
ಸಿಮರ್ಜೀತ್ ಸಿಂಗ್: 1.50 ಕೋಟಿ ರೂ.
ಜೀಶನ್ ಅನ್ಸಾರಿ: 40 ಲಕ್ಷ ರೂ.
ಜಯದೇವ್ ಉನದ್ಕತ್: 1 ಕೋಟಿ ರೂ.
ಬ್ರೈಡನ್ ಕಾರ್ಸೆ: 1 ಕೋಟಿ ರೂ.
ಕಮಿಂದು ಮೆಂಡಿಸ್: 75 ಲಕ್ಷ ರೂ.
ಅನಿಕೇತ್ ವರ್ಮಾ: 30 ಲಕ್ಷ ರೂ.
ಈಶಾನ್ ಮಾಲಿಂಗ: 1.20 ಕೋಟಿ ರೂ.
ಸಚಿನ್ ಬೇಬಿ: 30 ಲಕ್ಷ ರೂ.

ಎಸ್‌ಆರ್‌ಹೆಚ್‌ ಉಳಿಸಿಕೊಂಡಿರುವ ಆಟಗಾರರು

ಪ್ಯಾಟ್ ಕಮಿನ್ಸ್:18 ಕೋಟಿ ರೂ.
ಅಭಿಷೇಕ್ ಶರ್ಮಾ: 14 ಕೋಟಿ ರೂ.
ನಿತೀಶ್ ರೆಡ್ಡಿ 6 ಕೋಟಿ ರೂ.
ಹೆನ್ರಿಚ್ ಕ್ಲಾಸೆನ್ 23 ಕೋಟಿ ರೂ.
ಟ್ರಾವಿಸ್ ಹೆಡ್ 14 ಕೋಟಿ ರೂ.

Story first published: Monday, November 25, 2024, 20:19 [IST]
Other articles published on Nov 25, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+