IPL 2025: ಮೆಗಾ ಹರಾಜಿನ ಸಮಯ ಬದಲಾವಣೆ ಮಾಡಿದ ಬಿಸಿಸಿಐ; ಕಾರಣವೇನು?
ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ ಮೆಗಾ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜಿಡ್ಡಾದಲ್ಲಿ ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆ ನಡೆಸಲು ಬಿಸಿಸಿಐ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಂಡಿದೆ. ಕ್ರಿಕೆಟ್ ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಮೆಗಾ ಹರಾಜಿನ ಸಮಯವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬದಲಾವಣೆ ಮಾಡಿದೆ.
ಪರ್ತ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದೊಂದಿಗೆ ವೇಳಾಪಟ್ಟಿ ಸಂಘರ್ಷಗಳನ್ನು ತಪ್ಪಿಸಲು ಈ ಬದಲಾವಣೆಯನ್ನು ಬಿಸಿಸಿಐ ಮಾಡಲಾಗಿದೆ. ವರದಿಗಳ ಪ್ರಕಾರ, ಐಪಿಎಲ್ 2025 ಹರಾಜಿನ ಪ್ರಸಾರಕರ ಮನವಿಯ ನಂತರ ಬಿಸಿಸಿಐ ಈ ಬದಲಾವಣೆಯನ್ನು ಮಾಡಿದೆ. ಈಗ ಕ್ರಿಕೆಟ್ ಅಭಿಮಾನಿಗಳಿಗೆ ಮೆಗಾ ಹರಾಜು ಪ್ರಕ್ರಿಯೆ ಯಾವ ಸಮಯಕ್ಕೆ ಆರಂಭವಾಗಲಿದೆ ಎಂಬ ಪ್ರಶ್ನೆ ಕಾಡುತ್ತಿದೆ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ.

ಯಾವಾಗ ಆರಂಭ?
ಐಪಿಎಲ್ 2025ರ ಹರಾಜು ಪ್ರಕ್ರಿಯೆ ಜಿಯೋ ಸಿನಿಮಾದಲ್ಲಿ ಲೈವ್ ಸ್ಟ್ರೀಮ್ ಆಗುತ್ತಿದೆ. ಆದರೆ, ಮೆಗಾ ಹರಾಜಿನ ವೇಳಾಪಟ್ಟಿಯಲ್ಲಿ ಸಮಯವನ್ನು ಮಾತ್ರ ಬದಲಾವಣೆ ಮಾಡಿದೆ. ಮೊದಲು ಭಾರತೀಯ ಕಾಲಮಾಮನ ಮಧ್ಯಾಹ್ನ 3 ಗಂಟೆಗೆ ಪ್ರಾರಂಭಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ ಐಪಿಎಲ್ 2025 ಹರಾಜಿನ ಪ್ರಸಾರಕರ ಮನವಿಯ ನಂತರ ಮೆಗಾ ಹರಾಜು ಪ್ರಕ್ರಿಯೆಯನ್ನು ನವೆಂಬರ್ 24 ರಂದು ಮಧ್ಯಾಹ್ನ 3.30 ಗಂಟೆಗೆ ಆರಂಭಿಸಲು ಬಿಸಿಸಿಐ ನಿರ್ಧಾರಿಸಿದೆ.
ನವೆಂಬರ್ 22 ರಿಂದ 26 ರವರೆಗೆ ಪರ್ತ್‌ನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಪಂದ್ಯದೊಂದಿಗೆ ಹೊಂದಿಕೆಯಾಗುವ ಐಪಿಎಲ್ 2025ರ ಮೆಗಾ ಹರಾಜಿನ ಬಗ್ಗೆ ಪ್ರಸಾರಕರು ಕಳವಳ ವ್ಯಕ್ತಪಡಿಸಿದ್ದರು. ಟೆಸ್ಟ್ ಪಂದ್ಯವು ಪ್ರತಿದಿನ ಭಾರತೀಯ ಕಾಲಮಾನ ಮಧ್ಯಾಹ್ನ 2:50 ಗಂಟೆಗೆ ಕೊನೆಗೊಳ್ಳುವ ನಿರೀಕ್ಷೆಯಿದೆ. ಒಂದು ವೇಳೆ ಹವಾಮಾನ ವೈಪರೀತ್ಯ ಅಥವಾ ಬೇರೆ ಕಾರಣಕ್ಕಾಗಿ ಆಟವನ್ನು ದೀರ್ಘಗೊಳಿಸಬಹುದು. ಆದ್ದರಿಂದ ಯಾವುದೇ ರೀತಿಯಲ್ಲೂ ಮೆಗಾ ಹರಾಜಿಗೆ ಸಮಸ್ಯೆಯಾಗದಂತೆ ಪ್ರಸಾರಕರು ಹರಾಜಿನ ಪ್ರಾರಂಭದ ಸಮಯದಲ್ಲಿ ಅರ್ಧ ಗಂಟೆ ವಿಳಂಬವನ್ನು ಕೋರಿದ್ದರು. ಈಗ ಇದಕ್ಕೆ ಬಿಸಿಸಿಐ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಐಪಿಎಲ್ 2025ರ ಹರಾಜು ಪ್ರಕ್ರಿಯೆ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೇರ ಪ್ರಸಾರವಾಗಲಿದೆ. ಅಲ್ಲದೆ, ಮೆಗಾ ಹರಾಜಿನ ಲೈವ್ ಸ್ಟ್ರೀಮಿಂಗ್ ಅನ್ನು ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಮಾಡಲಾಗುತ್ತದೆ. ಕ್ರಿಕೆಟ್ ಅಭಿಮಾನಿಗಳಿ ಉಚಿತವಾಗಿ ಲೈವ್ ಸ್ಟ್ರೀಮ್ ವಿಕ್ಷೀಸಿಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications