Ipl Mega Auction: ಐಪಿಎಲ್ ಮೆಗಾ ಹರಾಜಿನಲ್ಲಿ 409 ವಿದೇಶಿ ಆಟಗಾರರ ಹೆಸರು ನೋಂದಣಿ
ಈ ಬಾರಿ ಐಪಿಎಲ್ ಮೆಗಾ ಹರಾಜಿಗೆ ಭರದ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಬಿಸಿಸಿಐ ಕಾರ್ಯವನ್ನು ಆರಂಭಿಸಿದೆ. ಈ ಮೆಗಾ ಹರಾಜು ನಡೆಯುವ ಸ್ಥಳ ಹಾಗೂ ದಿನಾಂಕವನ್ನು ಐಪಿಎಲ್ ಆಡಳಿತ ಮಂಡಳಿ ಇನ್ನು ಫೈನಲ್ ಮಾಡಿಲ್ಲ. ಒಂದಂತೂ ಸ್ಪಷ್ಟವಾಗಿ ಕಾಣುತ್ತಿದೆ, ಈ ಬಾರಿಯ ಮೆಗಾ ಹರಾಜು ವಿದೇಶದಲ್ಲಿ ನಡೆಯಲಿದೆ. ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಹರಾಜು ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ಇದೇ 24 ರಿಂದ 25 ರಂದು ನಡೆಯುವ ಸಾಧ್ಯತೆ ಇದೆ.
ಈ ಮೆಗಾ ಹರಾಜಿನಲ್ಲಿ ಐಪಿಎಲ್ ಫ್ರಾಂಚಿಸಿಗಳು ಉಳಿಸಿಕೊಂಡ ಆಟಗಾರರನ್ನು ಹೊರತು ಪಡಿಸಿ ಎಲ್ಲ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಹೊಸದಾಗಿ ನೊಂದಾಯಿಸಿಕೊಳ್ಳುವ ಅವಕಾಶವೂ ಇದೆ. ಈ ಮೆಗಾ ಹರಾಜಿನಲ್ಲಿ 16 ವಿವಿಧ ದೇಶಗಳ ಸುಮಾರು 409 ವಿದೇಶಿ ಆಟಗಾರರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ನೊಂದಾಯಿಸಿಕೊಂಡ ಆಟಗಾರರಾಲ್ಲಿ 6 ಅಸೋಸಿಯೇಟ್ಸ್ ದೇಶದ ಆಟಗಾರರು ಸಹ ಸೇರಿದ್ದಾರೆ.

ಯಾವ ದೇಶದಿಂದ ಗರಿಷ್ಠ ಆಟಗಾರರು?
ಈ ಮೆಗಾ ಹರಾಜಿನಲ್ಲಿ ದಕ್ಷಿಣ ಆಫ್ರಿಕಾದಿಂದ ಹೆಚ್ಚಿನ ಆಟಗಾರರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಈ ದೇಶದಿಂದ ಒಟ್ಟು 91 ಆಟಗಾರರು ನೊಂದಾಯಿಸಿಕೊಂಡರೆ, ಕಾಂಗರೂ ನಾಡಿನಿಂದ ಸುಮಾರು 76 ಆಟಗಾರರ ಹೆಸರುಗಳು ಐಪಿಎಲ್ ಹರಾಜಿನಲ್ಲಿ ಕೇಳಿಸಿಕೊಳ್ಳಲಿವೆ. ಈ ಪಟ್ಟಿಯಲ್ಲಿ ಇಂಗ್ಲೆಂಡ್ ಮೂರನೇ ಸ್ಥಾನದಲಿದ್ದು, 52 ಆಟಗಾರರು ಹರಾಜಿನಲ್ಲಿ ಭಾಗವಹಿಸಲಿದ್ದಾರೆ.
ಉಳಿದಂತೆ ಅಫ್ಘಾನಿಸ್ತಾನ 29, ಬಾಂಗ್ಲಾದೇಶ 13, ಐರ್ಲೆಂಡ್ 9, ನ್ಯೂಜಿಲೆಂಡ್ 39, ಶ್ರೀಲಂಕಾ 29, ವೆಸ್ಟ್ ಇಂಡೀಸ್ 33, ಜಿಂಬಾಬ್ವೆ 8 ತಂಡದಿಂದ ಆಟಗಾರರು ಹರಾಜಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ.

ಅಸೋಸೆಯೆಟ್ಸ್ ದೇಶಗಾಳಾದ ಕೆನಡಾದಿಂದ 4, ನೆದರ್ಲ್ಯಾಂಡ್ಸ್‌ನಿಂದ 12, ಸ್ಕಾಟ್ಲೆಂಡ್‌ನಿಂದ 2, ಯುಎಸ್ಎಯಿಂದ 10, ಇದಲ್ಲದೇ, ಯುಎಇ ಮತ್ತು ಇಟಲಿಯಿಂದ ತಲಾ ಒಬ್ಬ ಆಟಗಾರರು ಮೆಗಾ ಹರಾಜಿನಲ್ಲಿ ಭಾಗವಹಿಸಲಿದ್ದಾರೆ.
ಒಂದು ತಂಡದಲ್ಲಿ ಗರಿಷ್ಠ 25 ಆಟಗಾರರು
ಈ ಬಾರಿ ಬಿಸಿಸಿಐ ಐಪಿಎಲ್ ಮಾಲೀಕರಿಗೆ ತಾವು ಉಳಿಸಿಳ್ಳುವ ಆಟಗಾರರು ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ನೀಡುವಂತೆ ಸೂಚಿಸಿತ್ತು. ಅಲ್ಲದೆ ಇದೇ ಅಕ್ಟೋಬರ್ 31 ರೊಳಗೆ ನೀಡುವಂತೆ ಗಡುವು ನೀಡಲಾಗಿತ್ತು.
ಈ ವೇಳೆ ಐಪಿಎಲ್ ಮಾಲೀಕರು ತಮ್ಮ ತಂಡದ ರಿಟೇನ್ಷನ್ ಲೀಸ್ಟ್ ಬಿಸಿಸಿಐಗೆ ಸಲ್ಲಿಕೆ ಮಾಡಿದ್ದಾರೆ. ಒಟ್ಟು 10 ಐಪಿಎಲ್ ತಂಡಗಳು ಗರಿಷ್ಠ 25 ಆಟಗಾರರನ್ನು ತಮ್ಮ ತಂಡದಲ್ಲಿ ಸೇರಿಸಿಕೊಳ್ಳಬಹುದಾಗಿದೆ. ಒಟ್ಟು ಎಲ್ಲ ತಂಡಗಳಿಂದ ಸೇರಿ ಒಟ್ಟು 204 ಸ್ಥಾನಗಳು ಖಾಲಿ ಇವೆ.
ಆರ್‌ಸಿಬಿ ಈ ಹರಾಜಿನಲ್ಲಿ ಗರಿಷ್ಠ 22 ಆಟಗಾರರನ್ನು ಖರೀದಿಸುವ ಅವಕಾಶವನ್ನು ಹೊಂದಿದೆ. ಮೆಗಾ ಹರಾಜಿನಲ್ಲಿ ಆರ್‌ಸಿಬಿ ಒಟ್ಟು 83 ಕೋಟಿ ಹಣವನ್ನು ಹೂಡಬಹುದಾಗಿದೆ. ಈಗಾಗಲೇ ಐಪಿಎಲ್ ಮೆಗಾ ಹರಾಜಿನಲ್ಲಿ ಯಾರಿಗೆ ಮಣೆ ಹಾಕಬೇಕು ಎಂಬ ಲೆಕ್ಕಾಚಾರಗಳು ಆರಂಭವಾಗಿದ್ದು, ಹರಾಜಿನ ರಣ ತಂತ್ರ ಸಿದ್ಧವಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications