IPL 2025, LSG vs DC: ಲಕ್ನೋ ತಂಡಕ್ಕೆ ಆಸರೆಯಾದ ಮಾರ್ಷ್-ಪೂರನ್; ಸೊನ್ನೆ ಸುತ್ತಿದ ಪಂತ್
ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರೀಡಾಂಗಣದಲ್ಲಿ ಐಪಿಎಲ್ 2025ರ ನಾಲ್ಕನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಅಕ್ಸರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ರಿಷಭ್ ಪಂತ್ ಮುನ್ನಡೆಸುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ ಮೊದಲು ಬ್ಯಾಟಿಂಗ್ ಇಳಿಯಿತು. ಲಕ್ನೋ ಪರ ಟಾಪ್ ಆರ್ಡರ್‍ನಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ಕಂಡು ಬಂತು.
ಮಿಚೆಲ್ ಮಾರ್ಷ್ ಮತ್ತು ಐಡೆನ್ ಮಾರ್ಕ್ರಾಮ್ ಜೋಡಿ ಲಕ್ನೋ ತಂಡಕ್ಕೆ ಅದ್ಭುತ ಆರಂಭ ನೀಡಿದರು. ಲಕ್ನೋ ತಂಡ ಮೊದಲ ವಿಕೆಟ್‌ಗೆ 4.4 ಓವರ್‌ಗಳಲ್ಲಿ 46 ರನ್ ಗಳಿಸಿತು. ಐಡೆನ್ ಮಾರ್ಕ್ರಾಮ್ 13 ಎಸೆತಗಳಲ್ಲಿ 15 ರನ್ ಗಳಿಸಿ ಔಟಾದರು. ಇದಾದ ನಂತರ, ಒಂದಾದ ನಿಕೋಲಸ್ ಪೂರನ್ ಮತ್ತು ಮಾರ್ಷ್ ಅಬ್ಬರಿಸಿದರು.

ಬಿರುಸಿನ ಬ್ಯಾಟಿಂಗ್ ಮಾಡಿದ ಪೂರನ್ ಮತ್ತು ಮಾರ್ಷ್ ಲಕ್ನೋ ತಂಡಕ್ಕೆ ಟಾಪ್ ಆರ್ಡರ್‍ನಲ್ಲಿ ಉತ್ತಮ ರನ್ ಕಲೆ ಹಾಕಿದರು. ಪೂರಾನ್ ಮತ್ತು ಮಾರ್ಷ್ ಎರಡನೇ ವಿಕೆಟ್‌ಗೆ 42 ಎಸೆತಗಳಲ್ಲಿ 87 ರನ್ ಸೇರಿಸಿದರು. ಮಾರ್ಷ್ 36 ಎಸೆತಗಳಲ್ಲಿ 6 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ 72 ರನ್ ಗಳಿಸಿ ಔಟಾದರು.
ಮಾರ್ಷ್ ಔಟಾದ ನಂತರ ನಾಯಕ ರಿಷಭ್ ಪಂತ್ ಕ್ರೀಸ್‌ಗೆ ಬಂದರು. ಅವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಕೇವಲ 5 ಎಸೆತಗಳನ್ನು ಎದುರಿಸಿದ ಪಂತ್ ಖಾತೆ ತೆರೆಯುವಲ್ಲಿ ವಿಫಲವಾದರು. ಕುಲದೀಪ್ ಯಾದವ್ ಎಸೆತದಲ್ಲಿ ಮಿಡ್-ಆಫ್‌ನಲ್ಲಿ ಸಿಕ್ಸರ್ ಹೊಡೆಯಲು ಪ್ರಯತ್ನಿಸಿದ ಪಂತ್
ಫಾಫ್ ಡು ಪ್ಲೆಸಿಸ್‌ಗೆ ಕ್ಯಾಚ್ ನೀಡಿದರು.
ಮಾರ್ಷ್ ಮತ್ತು ಪಂತ್ ವಿಕೆಟ್ ಕಳೆದುಕೊಂಡರು, ಪೂರನ್ ಅಬ್ಬರ ನಿಲ್ಲಲಿಲ್ಲ. ಡೆಲ್ಲಿ ಬೌಲರ್‍ಗಳ ಬೆವರಿಳಿಸಿದ ಪೂರನ್ ಕೇವಲ 30 ಎಸೆತಗಳಲ್ಲಿ 6 ಬೌಂಡರಿ ಮತ್ತು 7 ಸಿಕ್ಸರ್ ನೆರವಿನಿಂದ 75 ರನ್ ಬಾರಿಸಿದರು. ಒಂದು ಹಂತದಲ್ಲಿ 4 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿದ್ದ ಎಲ್‌ಎಸ್‌ಜಿ ತಂಡವು 194 ರನ್‌ಗಳಿಗೆ 8ನೇ ವಿಕೆಟ್ ಕಳೆದುಕೊಂಡಿತು.
ಕೊನೆಯಲ್ಲಿ ಡೇವಿಡ್ ಮಿಲ್ಲರ್ 19 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 27 ರನ್ ಗಳಿಸಿದರು. ಈ ಮೂಲಕ ಎಲ್‌ಎಸ್‌ಜಿ 8 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಲು ಸಾಧ್ಯವಾಯಿತು. ಮಿಚೆಲ್ ಸ್ಟಾರ್ಕ್ 3 ವಿಕೆಟ್ ಪಡೆದರೆ, ಕುಲದೀಪ್ ಯಾದವ್ 2 ವಿಕೆಟ್ ಕಬಳಿಸಿದರು. ಮುಖೇಶ್ ಕುಮಾರ್ ಒಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications