MS Dhoni: 19 ರನ್ ಬಾರಿಸುತ್ತಿದ್ದ ದಾಖಲೆ ನಿರ್ಮಿಸಲಿರುವ ಮಾಹಿ
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಐದು ವರ್ಷಗಳೇ ಕಳೆದಿವೆ. ಈಗ ಮಾಹಿ ಬರೀ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಾತ್ರ ಆಡುತ್ತಾರೆ. ಇವರ ಆಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾತುರದಿಂದ ಕಾಯುತ್ತಿರುತ್ತಾರೆ. ಈ ಬಾರಿಯೂ ಧೋನಿ ಮ್ಯಾಜಿಕ್ ಮಾಡಲು ಅಂಗಳಕ್ಕೆ ಇಳಿಯಲಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಧೋನಿ ಅಂಗಳ ಪ್ರವೇಶಿಸಲಿದ್ದಾರೆ.
ಈಗಾಗಲೇ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಬೌಂಡರಿ ಸಿಕ್ಸರ್‌ಗಳ ಸಹಾಯದಿಂದ ಅಭಿಮಾನಿಗಳನ್ನು ರಂಜಿಸಿದ್ದ ಮಹೇಂದ್ರ ಸಿಂಗ್ ಧೋನಿ, ತಮ್ಮ ಅಸಲಿ ಕರಾಮತ್ತು ತೋರಿಸಲು ಭಾನುವಾರ ಕಣಕ್ಕೆ ಇಳಿಯಲಿದ್ದಾರೆ. ಈ ವೇಳೆ ಇವರು ದೊಡ್ಡ ದಾಖಲೆಯನ್ನು ಬರೆಯುವ ಪ್ಲ್ಯಾನ್ ಹಾಕಿಕೊಂಡಿದ್ಧಾರೆ. ಮೊದಲ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಬ್ಯಾಟ್ ಮಾಡಲು ಇಳಿದಾಗ ರೆಕಾರ್ಡ್ ಮೇಲೆ ಧೋನಿ ಕಣ್ಣು ನೆಟ್ಟಿರಲಿವೆ.

ಮುಂಬೈ ವಿರುದ್ಧ ಪಂದ್ಯದಲ್ಲಿ ಧೋನಿ ಕೇವಲ 19 ರನ್ ಗಳಿಸುವ ಮೂಲಕ ಧೋನಿ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹಿರಿಮೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಮಾಹಿ ಈ ವರೆಗೆ ಚೆನ್ನೈ ಪರ 234 ಪಂದ್ಯಗಳನ್ನು ಆಡಿದ್ದು 22 ಅರ್ಧಶತಕಗಳೊಂದಿಗೆ 4669 ರನ್ ಸಿಡಿಸಿದ್ದಾರೆ. ಈ ಮೂಲಕ ಚೆನ್ನೈ ಪರ ಅತಿ ಹೆಚ್ಚು ರನ್ ಬಾರಿಸಿದ ಎರಡನೆ ಆಟಗಾರ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
ಅಗ್ರ ಸ್ಥಾನದಲ್ಲಿ ರೈನಾ
ಚೆನ್ನೈ ಪರ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಸುರೇಶ್ ರೈನಾ ಅಗ್ರ ಸ್ಥಾನದಲ್ಲಿದ್ದಾರೆ. ಇವರು ಆಡಿದ 200 ಐಪಿಎಲ್ ಪಂದ್ಯಗಳನ್ನು ಆಡಿದ್ದು 2 ಶತಕ ಹಾಗೂ 38 ಅರ್ಧಶತಕಗಳೊಂದಿಗೆ 5529 ರನ್ ಸಿಡಿಸಿದ್ದಾರೆ. ಈ ವೇಳೆ 494 ಬೌಂಡರಿ ಹಾಗೂ 219 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಇನ್ನು 19 ರನ್ ಬಾರಿಸುತ್ತಿದ್ದಂತೆ ಮಾಹಿ ಇವರ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ.

ಸಿಎಸ್‌ಕೆ ಪರ ಅತಿ ಹೆಚ್ಚು ರನ್ ಸಿಡಿಸಿದ ಟಾಪ್ 5 ಪ್ಲೇಯರ್ಸ್
- ಸುರೇಶ್ ರೈನಾ, 200 ಪಂದ್ಯ, 4687 ರನ್
- ಮಹೇಂದ್ರ ಸಿಂಗ್ ಧೋನಿ, 258 ಪಂದ್ಯ, 4669 ರನ್
- ಫಾಫ್ ಡು ಪ್ಲೆಸಿಸ್, 100 ಪಂದ್ಯ, 2721 ರನ್
- ರುತುರಾಜ್ ಗಾಯಕ್ವಾಡ್, 66 ಪಂದ್ಯ, 2380 ರನ್
- ಅಂಬಟಿ ರಾಯುಡು, 64 ಪಂದ್ಯ, 932 ರನ್
ಮಹೇಂದ್ರ ಸಿಂಗ್ ಧೋನಿ ಪ್ರಸಕ್ತ ಐಪಿಎಲ್‌ನಲ್ಲಿ ಏಳು ಅಥವಾ ಎಂಟನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು. ಇವರು ಡೆತ್ ಓವರ್‌ಗಳಲ್ಲಿ ರನ್ ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಪ್ಲೇಯರ್. ಇವರ ವಯಸ್ಸು 43. ಆದ್ರೆ ಇವರಿಗೆ ಏಜ್ ಇಸ್ ಜಸ್ಟ್ ಒನ್ ನಂಬರ್. ಇವರು ಕೆಲವೇ ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಆಟಗಾರ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications