ಐಪಿಎಲ್ 2025: ಮೆಗಾ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಮಹತ್ವದ ನಿರ್ಧಾರ; ಹಾರ್ದಿಕ್ ಪಾಂಡ್ಯ ಫೇವರಿಟ್ ಔಟ್!
2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೂ ಮುನ್ನ ಎಲ್ಲಾ ತಂಡಗಳು ಭರ್ಜರಿ ತಯಾರಿ ಆರಂಭಿಸಿವೆ. ಮುಂದಿನ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಿದ್ಧತೆ ನಡೆಸುತ್ತಿದೆ.
ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಬಿಸಿಸಿಐ ಹೊರಡಿಸಿದೆ. ಜೊತೆಗೆ ಮೆಗಾ ಹರಾಜು ಪ್ರಕ್ರಿಯೆಯನ್ನು ಸೌದಿ ಅರೇಬಿಯಾ ಅಥವಾ ಸಿಂಗಾಪುರದಲ್ಲಿ ಆಯೋಜಿಸಬಹುದು ಎಂದು ಮೂಲಗಳು ತಿಳಿಸಿವೆ. ಈ ನಡುವೆ ಮುಂಬೈ ಇಂಡಿಯನ್ಸ್ ಪಾಳಯದಿಂದ ದೊಡ್ಡ ಸುದ್ದಿ ಹೊರಬಿದ್ದಿದೆ. ಫ್ರಾಂಚೈಸಿ ತಮ್ಮ ಮುಖ್ಯ ಕೋಚ್ ಮಾರ್ಕ್ ಬೌಚರ್ ಅವರನ್ನು ವಜಾಗೊಳಿಸಿದ್ದಾರೆ.

ಮಾರ್ಕ್ ಬೌಚರ್ ಬದಲಿಗೆ ಯಾರು?
ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಾರ್ಕ್ ಬೌಚರ್ ಬದಲಿಗೆ ಶ್ರೀಲಂಕಾದ ಮಾಜಿ ದಿಗ್ಗಜ ಆಟಗಾರ ಮಹೇಲಾ ಜಯವರ್ಧನೆ ಅವರನ್ನು ಕೋಚ್ ಆಗಿ ನೇಮಿಸಿದೆ. ಜಯವರ್ಧನೆ ಈ ಹಿಂದೆ 2017 ರಿಂದ 2022 ರವರೆಗೆ ಮುಂಬೈ ತಂಡದ ಕೋಚ್ ಆಗಿದ್ದರು. ಈ ಅವಧಿಯಲ್ಲಿ ಮುಂಬೈ 3 ಬಾರಿ ಚಾಂಪಿಯನ್ ಆಗಿದೆ. ಜಯವರ್ಧನೆ ಮತ್ತು ರೋಹಿತ್ ಶರ್ಮಾ ಉತ್ತಮ ಸಂಬಂಧ ಹೊಂದಿದ್ದಾರೆ. ರೋಹಿತ್ ನಾಯಕತ್ವದಲ್ಲಿ ತಂಡ 5 ಬಾರಿ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಕಳೆದ ಋತುವಿನಲ್ಲಿ ರೋಹಿತ್ ಶರ್ಮಾ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿತ್ತು.
ಹಾರ್ದಿಕ್ ಪಾಂಡ್ಯ ಫೇವರಿಟ್ ಔಟ್
ಕಳೆದ ಋತುವಿನ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಅವರು ಗುಜರಾತ್ ಟೈಟಾನ್ಸ್ ತೋರಿಯುವ ಮೂಲಕ ಮುಂಬೈ ಸೇರಿದ್ದರು. ಗುಜರಾತ್ ತಂಡದಲ್ಲಿರುವ ಅವರು ತಮ್ಮ ನಾಯಕತ್ವದಲ್ಲಿ ತಂಡವನ್ನು ಚಾಂಪಿಯನ್ ಮಾಡಿದ್ದರು.ನಂತರದ ಆವೃತ್ತಿಯಲ್ಲಿ ತಂಡವನ್ನು ಫೈನಲ್‌ಗೆ ಕರೆದುಕೊಂಡು ಹೋಗಿದ್ದರು. ಇದಾದ ನಂತರ 2024ರ ಐಪಿಎಲ್ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯತ ಮರಳಿ ಮುಂಬೈಗೆ ಬಂದಿದ್ದರು. ಹಾರ್ದಿಕ್ ಮುಂಬೈಗೆ ಬಂದಾಗ ಸಾಕಷ್ಟು ಟ್ರೋಲ್ ಆಗಿದ್ದರು. ಈ ಸಮಯದಲ್ಲಿ, ಮುಖ್ಯ ಕೋಚ್ ಮಾರ್ಕ್ ಬೌಚರ್ ಅವರನ್ನು ಸಮರ್ಥಿಸಿಕೊಂಡಿದ್ದರು. ಜೊತೆಗೆ ಟೂರ್ನಿಯುದಕ್ಕೂ ಬೌಚರ್ ಮತ್ತು ಹಾರ್ದಿಕ್ ನಡುವಿನ ಹೊಂದಾಣಿಕೆ ಚೆನ್ನಾಗಿತ್ತು. ಈಗ ಜಯವರ್ಧನೆ ಜೊತೆಗಿನ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಅವರ ಸಂಬಂಧ ಹೇಗಿದೆ ಎಂಬುದನ್ನು ಕಾದು ನೋಡಬೇಕಿದೆ.
ಎಂಐ ಫ್ರಾಂಚೈಸಿ ಸಂತಸ
ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಾಲೀಕರಾದ ಆಕಾಶ್ ಅಂಬಾನಿ ಮಹೇಲಾ ಜಯವರ್ಧನೆ ಮತ್ತೆ ಕೋಚ್ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. 'ಮಹೇಲಾ ಮತ್ತೆ ಮುಂಬೈ ಇಂಡಿಯನ್ಸ್‌ನ ಮುಖ್ಯ ಕೋಚ್ ಆಗಿರುವುದು ನಮಗೆ ಸಂತಸ ತಂದಿದೆ. ಅವರನ್ನು ಮತ್ತೆ ಎಂಐಗೆ ಕರೆತರುವ ಅವಕಾಶ ಸಿಕ್ಕಿದೆ. ಅವರ ನಾಯಕತ್ವ ಮತ್ತು ಆಟದ ಉತ್ಸಾಹವು ಯಾವಾಗಲೂ ಐಎಂಗೆ ಪ್ರಯೋಜನಕಾರಿ ಆಗಿದೆ. ಕಳೆದ ಎರಡು ಋತುಗಳಲ್ಲಿ ಮಾರ್ಕ್ ಬೌಚರ್ ಅವರ ಕೊಡುಗೆಗಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅವರು ಈಗ ಎಂಐ ಕುಟುಂಬದ ಅವಿಭಾಜ್ಯ ಸದಸ್ಯರಾಗಿದ್ದಾರೆ ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications