Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Turning Point: ಸೂರ್ಯಕುಮಾರ್ ಯಾದವ್ ಅದ್ಭುತ ಇನ್ನಿಂಗ್ಸ್ ವ್ಯರ್ಥ

ಐಪಿಎಲ್ 2025 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ತವರು ನೆಲದಲ್ಲಿ ಮೊದಲ ಗೆಲುವು ಸಾಧಿಸಿದೆ. ಐಪಿಎಲ್ 2025 ರ 16 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 12 ರನ್‌ಗಳಿಂದ ಜಯಗಳಿಸಿತು. ಮೊದಲ ಬ್ಯಾಟಿಂಗ್ ಮಾಡಿದ ಲಕ್ನೋ 8 ವಿಕೆಟ್‌ಗಳ ನಷ್ಟಕ್ಕೆ 203 ರನ್ ಗಳಿಸಿತು. ಇದೇ ಮೊದಲ ಬಾರಿಗೆ ಲಕ್ನೋ ತಂಡ ತನ್ನ ತವರು ನೆಲದಲ್ಲಿ 200 ರನ್‌ಗಳ ಗಡಿ ದಾಟಿದೆ. ಈ ಗುರಿ ಬೆನ್ನಟ್ಟಿದ ಮುಂಬೈ ತಂಡವು ಉತ್ತಮ ಆರಂಭವನ್ನು ಪಡೆಯಿತು. ಹೀಗಾಗಿ ಪಂದ್ಯದ ಬಹುತೇಕ ಮುಂಬೈ ಕೈಯಲ್ಲಿತ್ತಿ. ಆದರೆ ಕೊನೆಯಲ್ಲಿ ಲಕ್ನೋ ಪುನರಾಗಮನ ಮಾಡಿ ರೋಚಕ ಜಯ ಸಾಧಿಸಿತು.

ಮುಂಬೈ ಇಂಡಿಯನ್ಸ್ ತಂಡದ ಗೆಲುವಿಗಾಗಿ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಏಕಾಂಗಿ ಹೋರಾಟ ನಡೆಸಿದರು. ಆದರೆ ಸೂರ್ಯಕುಮಾರ್ ಯಾದವ್ ಅವರ ಅದ್ಭುತ ಇನ್ನಿಂಗ್ಸ್ ವ್ಯರ್ಥವಾಯಿತು. ಅವರು ಔಟ್ ಆಗುತ್ತಿದ್ದಂತೆ ಮುಂಬೈ ತಂಡ ಸೋಲಿನ ಕಡೆಗೆ ಸಾಗಿತು. ತಂಡದಲ್ಲಿ ಬಿಗ್ ಹಿಟರ್ಸ್ ಇದ್ದರೂ ಲಕ್ನೋ ಬೌಲರ್‍‌ಗಳನ್ನು ಎದುರಿಸುವಲ್ಲಿ ವಿಫಲವಾದರು.

IPL 2025 Mumbai Indians vs Lucknow Super Giants match turning point

ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಎಲ್‌ಎಸ್‌ಜಿ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 203 ರನ್ ಗಳಿಸಿತು. ಮಿಚೆಲ್ ಮಾರ್ಷ್ 31 ಎಸೆತಗಳಲ್ಲಿ 60 ರನ್ ಗಳಿಸಿದರು ಮತ್ತು ಐಡೆನ್ ಮಾರ್ಕ್ರಾಮ್ 38 ಎಸೆತಗಳಲ್ಲಿ 53 ರನ್ ಗಳಿಸಿ ಅರ್ಧಶತಕ ಗಳಿಸುವ ಮೂಲಕ ಮಿಂಚಿದರು. ಟಿ20ಯಲ್ಲಿ ಚೊಚ್ಚಲ ಐದು ವಿಕೆಟ್ ಗೊಂಚಲು ಪಡೆದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಅವರ ಅದ್ಭುತ ಬೌಲಿಂಗ್ ಪ್ರದರ್ಶನದ ಹೊರತಾಗಿಯೂ, ಎಲ್‌ಎಸ್‌ಜಿ ಸವಾಲಿನ ಗುರಿಯನ್ನು ನೀಡುವಲ್ಲಿ ಯಶಸ್ವಿಯಾಯಿತು.

ಇದಕ್ಕೆ ಪ್ರತಿಯಾಗಿ ಮುಂಬೈ ತಂಡವು ಆರಂಭದಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಆಘಾತಕ್ಕೊಳಗಾಯಿತು. ಸೂರ್ಯಕುಮಾರ್ ಯಾದವ್ 43 ಎಸೆತಗಳಲ್ಲಿ 67 ರನ್ ಗಳಿಸಿ ಅತ್ಯುತ್ತಮ ಪ್ರದರ್ಶನ ನೀಡಿದರು. ಆದಾಗ್ಯೂ, ಎಲ್‌ಎಸ್‌ಜಿ ತಂಡದ ಶಿಸ್ತುಬದ್ಧ ಬೌಲಿಂಗ್, ವಿಶೇಷವಾಗಿ ಡೆತ್ ಓವರ್‌ಗಳಲ್ಲಿ ನಿರ್ಣಾಯಕ ಪಾತ್ರವಹಿಸಿತು. ಕೊನೆಯ ಓವರ್‌ಗಳಲ್ಲಿ ಎಂಐ ತಂಡದ ಬ್ಯಾಟರ್‍‌ಗಳು ಬೌಂಡರಿಗಳನ್ನು ಗಳಿಸಲು ಹೆಣಗಾಡಿದರು. ಕೊನೆಯ ಓವರ್‌ನಲ್ಲಿ ಆವೇಶ್ ಖಾನ್ ಅದ್ಭುತ ಬೌಲಿಂಗ್ ಮಾಡಿ ಲಕ್ನೋ ತಂಡಕ್ಕೆ ಗೆಲುವು ತಂದುಕೊಟ್ಟರು.

ಟರ್ನಿಂಗ್ ಪಾಯಿಂಟ್

ಲಕ್ನೋ ಸೂಪರ್ ಜೈಂಟ್ಸ್ ಪರ ದಿಗ್ವೇಶ್ ರಾಠಿ ಅದ್ಭುತ ಪ್ರದರ್ಶನ ನೀಡಿ ನಮನ್ ಧೀರ್ ವಿಕೆಟ್ ಪಡೆದರು. ಆದರೆ ಸೂರ್ಯಕುಮಾರ್ ಯಾದವ್ ಅವರ ವಿಕೆಟ್ ಪಂದ್ಯದ ನಿಜವಾದ ತಿರುವು ಪಡೆದುಕೊಂಡಿತು. ಬಿರುಸಿನ ಬ್ಯಾಟಿಂಗ್ ಮೂಲಕ ಸೂರ್ಯ ಮುಂಬೈ ತಂಡಕ್ಕೆ ಗೆಲುವು ತಂದುಕೊಡಲು ಹೋರಾಟ ನಡೆಸಿದರು. ಆದರೆ, ಮುಂಬೈ ಇಂಡಿಯನ್ಸ್ ತಂಡದ ಇನ್ನಿಂಗ್ಸ್‌ನ 16.1 ಓವರ್‍‌ನಲ್ಲಿ ಅವೇಶ್ ಖಾನ್ ಎಸೆತದಲ್ಲಿ ಸೂರ್ಯಕುಮಾರ್ ಔಟ್ ಆದರು. ಇದಾದ ನಂತರ ಮುಂಬೈ ಸಂಪೂರ್ಣ ಮಂಕಾಯಿತು. ಒಂದು ವೇಳೆ ಸೂರ್ಯಕುಮಾರ್ ಅಬ್ಬರಕ್ಕೆ ಅವೇಶ್ ಖಾನ್ ಬ್ರೇಕ್ ಹಾಕದಿದ್ದರೆ, ಮುಂಬೈ ಗೆಲುವು ಸಾಧಿಸುತ್ತಿತ್ತು.

Story first published: Saturday, April 5, 2025, 1:27 [IST]
Other articles published on Apr 5, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+