IPL 2025: ಈ ಬಾರಿಯ ಐಪಿಎಲ್‌ನಲ್ಲಿ ಏನೆಲ್ಲಾ ಹೊಸತು?
18ನೇ ಆವೃತ್ತಿಯ ಐಪಿಎಲ್ ಶನಿವಾರ (ಮಾ.22)ರಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಾದಾಟ ನಡೆಸಲಿದೆ. ಈ ಬಾರಿ ಐಪಿಎಲ್ ಆರಂಭಕ್ಕೂ ಮುನ್ನವೇ ಈ ಐಪಿಎಲ್ ಭಾರೀ ಕುತೂಹಲ ಹೆಚ್ಚಿಸಿದೆ. ಇದಕ್ಕೆ ಕಾರಣ ಈ ಬಾರಿಯ ಐಪಿಎಲ್ ಆದ ಕೆಲವು ಬದಲಾವಣೆಗಳು. ಹಾಗಿದ್ರೆ ಈ ಬಾರಿಯ ಐಪಿಎಲ್‌ನಲ್ಲಿ ಏನೆಲ್ಲಾ ಹೊಸದಿದೆ ಎಂಬ ಬಗ್ಗೆ ವರದಿ ಇಲ್ಲಿದೆ.
ಐಪಿಎಲ್ ನಾಯಕರ ಫೋಟೋ ಶೂಟ್ ಇತ್ತೀಚಿಗೆ ಮುಂಬೈನಲ್ಲಿ ನಡೆದಿತ್ತು. ಈ ವೇಳೆ ನಾಯಕರ ಜೊತೆ ಬಿಸಿಸಿಐ ಸಭೆ ನಡೆಸಿದ್ದು ಕೆಲವು ಮಾರ್ಪಡುಗಳನ್ನು ಮಾಡುವುದಾಗಿ ತಿಳಿಸಿದೆ. ಈ ಬದಲಾವಣೆಯಿಂದ ಈ ಬಾರಿಯ ಐಪಿಎಲ್ ರೋಚಕತೆ ಹೆಚ್ಚಿಸಲಿದೆ.

ಐಪಿಎಲ್ 2025ರ ಹೊಸ ನಿಯಮ
1- ಕೋವಿಡ್19 ಸಮಯದಲ್ಲಿ ಹೇರಲಾಗಿದ್ದ ನಿಷೇದ ತೆರವು
ಕೋವಿಡ್ 19 ಸಮಯದಲ್ಲಿ ನಿಷೇಧಿಸಲಾಗಿದ್ದ ಆ ಒಂದು ನಿಯಮವನ್ನು ಬಿಸಿಸಿಐ ಈಗ ತೆಗೆದು ಹಾಕಿದೆ. ಈ ಬಾರಿಯ ಐಪಿಎಲ್‌ನಲ್ಲಿ ಬೌಲರ್‌ಗಳು ಚೆಂಡಿಗೆ ಲಾಲಾರಸವನ್ನು ಬಳಿಸಬಹುದಾಗಿದೆ. ಇದರಿಂದಾಗಿ ಚೆಂಡಿನ ಹೊಳಪನ್ನು ಪಡೆಯಲು ಸಹಾಯಕವಾಗುತ್ತದೆ. ಇದು ನಿಜಕ್ಕೂ ವೇಗದ ಬೌಲರ್‌ಗಳಿಗೆ ವರದಾನವಾಗುವ ಸಾಧ್ಯತೆ ಇದೆ.
2- ಎರಡು ಬೌಲ್
ಈ ಬಾರಿಯ ಐಪಿಎಲ್‌ನಲ್ಲಿ ಪರಿಚಯಿಸಲಾದ ಹೊಸ ನಿಯಮದಲ್ಲಿ ಎರಡು ಬೌಲ್‌ಗಳನ್ನು ಬಳಸಲು ಅವಕಾಶ ನೀಡಲಾಗಿದೆ. ಈ ನಿಯಮ ಸಂಜೆಯ ಪಂದ್ಯಗಳಿಗೆ ತುಂಬ ಅನುಕೂಲವಾಗುತ್ತದೆ. ಎರಡನೇ ಅವಧಿಯಲ್ಲಿ ಬ್ಯಾಟಿಂಗ್ ಮಾಡುವಾಗ ಮಂಜು ಇರುವುದರಿಂದ, ಎರಡನೇ ಬೌಲ್‌ನ ಆಯ್ಕೆಯ ಅಂಪೈರ್‌ಗಳು ಮಾಡಬಹುದಾಗಿದೆ. ಈ ಹೊಸ ಚೆಂಡನ್ನು 12ನೇ ಓವರ್‌ಗೆ ಪಡೆಯಬಹುದು.
3- ಡಿಆರ್‌ಎಸ್ ಬದಲಾವಣೆ
ಈ ಬಾರಿಯ ಐಪಿಎಲ್‌ನಲ್ಲಿ ಹಲವು ನಿಯಗಳು ಬದಲಾವಣೆ ಆಗಲಿದ್ದು, ಅದರಲ್ಲಿ ಡಿಆರ್‌ಎಸ್ ಸಹ ಒಂದಾಗಿದೆ. ಈ ನಿಯಮವನ್ನು ಇನ್ನು ಆಟಗಾರರು ಎತ್ತರದ ವೈಡ್ ಬೌಲ್‌ಗಳು, ಆಫ್ ಸೈಡ್ ವೈಡ್ ಬೌಲ್‌ಗಳು ಬಳಸಬಹುದಾಗಿದೆ. ಇದರಿಂದ ಆಟಗಾರರು ಅಂಪೈರ್‌ಗಳ ತೀರ್ಮಾನವನ್ನು ಪ್ರಶ್ನಿಸಲು ಸಹಾಯವಾಗುತ್ತದೆ.
4- ನಾಯಕರ ಮುಖದಲ್ಲಿ ಮಂದಹಾಸ
ನಿಧಾನಗತಿಯ ಓವರ್ ನಿಯಮದಲ್ಲಿ ಕೊಂಚ ಮಾರ್ಪಾಡು ಮಾಡಲಾಗಿದೆ. ತಂಡಗಳ ನಾಯಕರು ಪಂದ್ಯದ ವೇಳೆ ನಿಧಾನಗತಿಯ ಓವರ್ ರೇಟ್ ನಿಯಮ ಮೀರಿದರೆ ಅವರ ಖಾತೆಗೆ ಡಿಮೆರಿಟ್ ಅಂಕ ಸೇರಿಸಲು ಬಿಸಿಸಿಐ ತೀರ್ಮಾನಿಸಿದೆ. ಇನ್ನು ಪಂದ್ಯದಲ್ಲಿ ತಂಡ ಸ್ಲೋ ಓವರ್ ರೇಟ್ ಮಾಡಿದಲ್ಲಿ ಅದರ ದಂಡ ಅವರ ನಾಯಕನಿಗೆ ಬೀಳಲಿದ್ದು, ಅವರ ಖಾತೆಗೆ ಡಿಮೆರಿಟ್ ಅಂಕಗಳು ದಾಖಲಾಗುತ್ತವೆ.
ಐಪಿಎಲ್‌ನ 7 ತಂಡಗಳಿಗೆ ಹೊಸ ನಾಯಕರು
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)- ರಜತ್ ಪಟೀದಾರ್
ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ)- ಅಕ್ಷರ್ ಪಟೇಲ್,
ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಶ್ರೇಯಸ್ ಅಯ್ಯರ್
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಅಜಿಂಕ್ಯ ರಹಾನೆ
ರಾಜಸ್ಥಾನ ರಾಯಲ್ಸ್ (ಆರ್‌ಆರ್)- ರಿಯನ್ ಪರಾಗ್ (ಸಂಜು ಸ್ಯಾಮ್ಸನ್ ಅವರಿಗೆ ಗಾಯವಾಗಿದ್ದರಿಂದ ಆರಂಭಿಕ ಮೂರು ಪಂದ್ಯಗಳಿಗೆ ಅಲಭ್ಯ)
ಮುಂಬೈ ಇಂಡಿಯನ್ಸ್ (ಎಂಐ)- ಸೂರ್ಯಕುಮಾರ್ ಯಾದವ್ (ಹಾರ್ದಿಕ್ ಪಾಂಡ್ಯ ಅವರು ಕಳೆದ ಆವೃತ್ತಿಯಲ್ಲಿ ನಿಧಾನಗತಿಯ ಬೌಲಿಂಗ್ ನಡೆಸಿದಕ್ಕಾಗಿ ಒಂದು ಪಂದ್ಯ ನಿಷೇಧ)
ಐಪಿಎಲ್ 2025ರ ಪ್ರಮುಖ ಸುದ್ದಿ
ರಿಷಭ್ ಪಂತ್ ದಾಖಲೆ
ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಕೈ ಬಿಟ್ಟ ರಿಷಭ್ ಪಂತ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಲಕ್ನೋ ಸೂಪರ್ ಜೈಂಟ್ಸ್ ಹಣವನ್ನು ನೀರಿನಂತೆ ಪೋಲು ಮಾಡಿದೆ. ಅಲ್ಲದೆ ಇವರಿಗೆ ದಾಖಲೆಯ 27 ಕೋಟಿ ರೂಪಾಯಿ ನೀಡಿ ತಂಡಕ್ಕೆ ಬರಮಾಡಿಕೊಂಡಿದೆ. ಇನ್ನು ಕಳೆದ ಆವೃತ್ತಿಯಲ್ಲಿ ಕೆಕೆಆರ್ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ಕಟ್ಟಿದ್ದ ಶ್ರೇಯಸ್ ಅಯ್ಯರ್ ಅವರಿಗೂ ತಂಡ ಗೇಟ್ ಪಾಸ್ ನೀಡಿತ್ತು. ಶ್ರೇಯಸ್ ಅಯ್ಯರ್ ಸಹ ಹರಾಜಿನಲ್ಲಿ ಭಾರೀ ಮೊತ್ತವನ್ನು ಜೇಬಿಗೆ ಹಾಕಿಕೊಂಡಿದ್ದಾರೆ. ಇವರು 26.75 ಕೋಟಿ ಪಡೆಯುವ ಮೂಲಕ ಪಂಜಾಬ್ ಕಿಂಗ್ಸ್ ಸೇರಿಕೊಂಡಿದ್ದಾರೆ. ಈ ಇಬ್ಬರೂ ಆಟಗಾರರು ಸದ್ಯ ತಮ್ಮ ಹೊಸ ತಂಡವನ್ನು ಮುನ್ನಡೆಸಲಿದ್ದಾರೆ.
ಜಸ್ಪ್ರಿತ್ ಬುಮ್ರಾ ಫಿಟ್ನೆಸ್
ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ಮಿಸ್ ಮಾಡಿಕೊಂಡಿದ್ದ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ ಅವರ ಫಿಟ್ನೆಸ್ ಬಗ್ಗೆ ಇನ್ನು ಪ್ರಶ್ನೆಗಳು ಎದ್ದಿವೆ. ಸದ್ಯ ಇವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರವಸತಿ ಪಡೆಯುತ್ತಿದ್ದಾರೆ. ಈ ವೇಳೆ ಇವರ ಲಭ್ಯತೆ ಮುಂಬೈ ಇಂಡಿಯನ್ಸ್ ಹಾಗೂ ಇಂಗ್ಲೆಂಡ್ ಪ್ರವಾಸದ ವೇಳೆ ಟೀಮ್ ಇಂಡಿಯಾಕ್ಕೂ ಅವಶ್ಯಕವಾಗಿದೆ.
ಧೋನಿ ಕೊನೆಯ ಐಪಿಎಲ್
ಮಹೇಂದ್ರ ಸಿಂಗ್ ಧೋನಿ ಅವರಿಗೆ ಇದು ಕೊನೆಯ ಐಪಿಎಲ್ ಆಗುತ್ತಾ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಇವರು ಟೂರ್ನಿಯಲ್ಲಿ ಮುಂದುವರೆಯುತ್ತಾರಾ? ಅಥವಾ ವಿದಾಯ ಹೇಳುತ್ತಾರಾ? ಎಂಬುದನ್ನು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಟಿ20 ಕ್ರಿಕೆಟ್ ಅಖಾಡಕ್ಕೆ ಸೂಪರ್ ಸ್ಟಾರ್ಸ್
ಬಾರ್ಬಡೋಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಐಪಿಎಲ್‌ನಲ್ಲಿ ಆಡುವುದನ್ನು ನೋಡಬಹುದಾಗಿದೆ.
ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುತ್ತಾ ಕೆಕೆಆರ್
ಹಾಲಿ ಚಾಂಪಿಯನ್ ಕೆಕೆಆರ್ ನವಉತ್ಸಾಹದಲ್ಲಿ ಅಂಗಳಕ್ಕೆ ಪ್ರವೇಶಿಸಲಿದೆ. ಈ ವೇಳೆ ಬಲಿಷ್ಠ ತಂಡವನ್ನು ಕಟ್ಟಿರುವ ಮ್ಯಾನೇಜ್ಮೆಂಟ್ ಟೈಟಲ್ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಚಿತ್ತ ನೆಟ್ಟಿದೆ. ಈ ಬಾರಿ ಕೆಕೆಆರ್ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.
3 ತಂಡಗಳಿಗೆ ನಾಯಕರು
ಐಪಿಎಲ್‌ನ ಮೂರು ತಂಡಗಳನ್ನು ಮುನ್ನಡೆಸಿದ ಖ್ಯಾತಿಯನ್ನು ಅಜಿಂಕ್ಯ ರಹಾನೆ ಹಾಗೂ ಶ್ರೇಯಸ್ ಅಯ್ಯರ್ ಮೊದಲ ಪಂದ್ಯದಲ್ಲಿ ಅಂಗಳಕ್ಕೆ ಇಳಿಯುತ್ತಿದ್ದಂತೆ ಪಡೆಯಲಿದ್ದಾರೆ. ಈ ಮೂಲಕ ಹೊಸ ದಾಖಲೆಯನ್ನು ಈ ಆಟಗಾರರು ನಿರ್ಮಿಸಲಿದ್ದಾರೆ.
ಸಿಬ್ಬಂದಿಗಳ ಬದಲಾವಣೆ
- - ರಿಕ್ಕಿ ಪಾಂಟಿಂಗ್- ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಪಂಜಾಬ್ ಕಿಂಗ್ಸ್ ಹೆಡ್ ಕೋಚ್ ಆಗಿದ್ದಾರೆ.
- - ಹೇಮಂಗ್ ಬದಾನಿ- ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್
- - ಕೇವಿನ್ ಪೀಟರ್ಸನ್- ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್
- - ರಾಹುಲ್ ದ್ರಾವಿಡ್- ರಾಜಸ್ಥಾನ ರಾಯಲ್ಸ್ ತಂಡದ ಹೆಡ್ ಕೋಚ್
- - ಡ್ವೇನ್ ಬ್ರಾವೊ- ಗೌತಮ್ ಗಂಭೀರ್ ಅವರಿಂದ ತೆರವಾಗಿರುವ ಕೆಕೆಆರ್ ಮೆಂಟರ್ ಸ್ಥಾನವನ್ನು ತುಂಬಿದ್ದಾರೆ.
- - ಗೌತಮ್ ಗಂಭೀರ್- ಟೀಮ್ ಇಂಡಿಯಾ ಹೆಡ್ ಕೋಚ್
ಐಪಿಎಲ್ ನಡೆಯುವ ಸ್ಥಳಗಳು
ಹಿಮಾಚಲ ಪ್ರದೇಶ ಕ್ರಿಕೆಟ್ ಮೈದಾನ ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಮೂರು ಪಂದ್ಯಗಳನ್ನು ಆಡಲಿದೆ. ಉಳಿದಂತೆ ಮುಲ್ಲನ್‌ಪುರ ಅಂಗಳ ಪಂಜಾಬ್ ತಂಡದ ತವರು ಮೈದಾನವಾಗಿರಲಿದೆ.
- ರಾಜಸ್ಥಾನ ತಂಡ ತನ್ನ ತವರಿನ ಎರಡು ಪಂದ್ಯಗಳನ್ನು ಗುವಹಾಟಿಯಲ್ಲಿ ಆಡಲಿದೆ.
- ಡೆಲ್ಲಿ ಕ್ಯಾಪಿಟಲ್ಸ್ ಸಹ ತವರಿನ ಕೆಲವು ಪಂದ್ಯಗಳನ್ನು ವೈಜಾಗ್‌ನಲ್ಲಿ ಆಡಲಿದೆ.
- ಐಪಿಎಲ್ 2025 ಪ್ಲೇ ಆಫ್ ಪಂದ್ಯಗಳು ಹೈದರಾಬಾದ್ ಹಾಗೂ ಕೋಲ್ಕತ್ತಾದಲ್ಲಿ ನಡೆಯಲಿವೆ. ಇನ್ನು ಮೇ 25 ರಂದು ಕೋಲ್ಕತ್ತಾದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications