Nicholas Pooran: ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ವಿಶೇಷ ಕ್ಲಬ್ ಸೇರಿದ ನಿಕೋಲಸ್ ಪೂರನ್
ಐಪಿಎಲ್ 2025 ರಲ್ಲಿ ರಿಷಭ್ ಪಂತ್ ಮುನ್ನಡೆಸುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಪಂದ್ಯದಲ್ಲಿಯೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ತಂಡ ಸೋಲನ್ನು ಎದುರಿಸಬೇಕಾಯಿತು. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಲಕ್ನೋ ಫ್ರಾಂಚೈಸಿ ರಿಷಭ್ ಪಂತ್ ಅವರನ್ನು 27 ಕೋಟಿ ರೂ.ಗೆ ಖರೀದಿಸಿತ್ತು. ಈ ಮೂಲಕ ಅವರು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದರು. ಆದರೆ, ತಂಡಕ್ಕೆ ಮೊದಲ ಪಂದ್ಯದಲ್ಲಿ ಅವರಿಂದ ಯಾವುದೇ ಪ್ರಯೋಜನವಾಗಲಿಲ್ಲ.
ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ರಿಷಭ್ ಪಂತ್ 5 ಎಸೆತಗಳನ್ನು ಎದುರಿಸಿದರೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇದಾದ ನಂತರ ಅವರು ಕೊನೆಯ ಓವರ್‌ನಲ್ಲಿ ಮೋಹಿತ್ ಶರ್ಮಾ ಅವರ ಸ್ಟಂಪಿಂಗ್ ಅನ್ನು ಮಿಸ್ ಮಾಡಿದರು. ಇದರಿಂದಾಗಿ ತಂಡ ಸೋಲನ್ನು ಎದುರಿಸಬೇಕಾಯಿತು. ಒಂದು ವೇಳೆ ಮೋಹಿತ್ ಶರ್ಮಾ ಅವರನ್ನು ಸ್ಟಂಪ್ ಔಟ್ ಮಾಡಿದ್ದರೆ, ಲಕ್ನೋ ಪಂದ್ಯವನ್ನು ಸುಲಭವಾಗಿ ಗೆಲ್ಲುತ್ತಿತ್ತು.

ಷಭ್ ಪಂತ್ ಕೈಕೊಟ್ಟರೂ, ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ನಿಕೋಲಸ್ ಪೂರನ್ ಲಕ್ನೋ ತಂಡಕ್ಕೆ ಆಸರೆಯಾದರು. ಈ ಪಂದ್ಯದಲ್ಲಿ ನಿಕೋಲಸ್ ಪೂರನ್ ಅಬ್ಬರು ಇನ್ನಿಂಗ್ಸ್ ಆಡಿದರು. ಅವರು 30 ಎಸೆತಗಳಲ್ಲಿ 6 ಬೌಂಡರಿ ಮತ್ತು 7 ಸಿಕ್ಸರ್ ನೆರವಿನಿಂದ 75 ರನ್ ಗಳಿಸಿದ್ದರು. ಇದೊಂದಿಗೆ ಅವರು ಟಿ20 ಕ್ರಿಕೆಟ್‌ನಲ್ಲಿ ಹೊಸ ಸಾಧನೆ ಮಾಡಿದ್ದಾರೆ.
ಪೂರನ್ ಏಳು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ದಾಖಲೆ ಸೃಷ್ಟಿಸಿದರು. ಅವರು ಟಿ20 ಕ್ರಿಕೆಟ್‌ನಲ್ಲಿ 600 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದರು. ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ಬ್ಯಾಟರ್ ಎನಿಸಿಕೊಂಡರು. ಕಾಕತಾಳೀಯವೆಂದರೆ, ಈವರೆಗೆ ಅತಿಹೆಚ್ಚು ಸಿಕ್ಸರ್ ಬಾರಿಸಿರುವವರೆಲ್ಲರೂ ವೆಸ್ಟ್ ಇಂಡೀಸ್‌ನವರು. ಪೂರನ್ ಗಿಂತ ಮೊದಲು, ಕ್ರಿಸ್ ಗೇಲ್, ಕೀರನ್ ಪೊಲಾರ್ಡ್ ಮತ್ತು ಆಂಡ್ರೆ ರಸೆಲ್ ಟಿ20 ಕ್ರಿಕೆಟ್‌ನಲ್ಲಿ 600 ಸಿಕ್ಸರ್‌ಗಳನ್ನು ಪೂರೈಸಿದ ದಾಖಲೆ ಮಾಡಿದ್ದಾರೆ. ಈಗ ಈ ವಿಶೇಷ ಕ್ಲಬ್‌ಗೆ ಪೂರಾನ್ ಹೆಸರೂ ಸೇರಿದೆ.
ಮಿಚೆಲ್ ಮಾರ್ಷ್ ಮತ್ತು ರಿಷಭ್ ಪಂತ್ ವಿಕೆಟ್ ಕಳೆದುಕೊಂಡು ಲಕ್ನೋ ತಂಡ ಸಂಕಷ್ಟದಲ್ಲಿತ್ತು. ಇಂತಹ ಪರಿಸ್ಥಿತಿಯಲ್ಲಿಯೂ ಪೂರನ್ ಅಬ್ಬರ ನಿಲ್ಲಲಿಲ್ಲ. ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್ ಬಾರಿಸಿದರು. ಡೆಲ್ಲಿ ಬೌಲರ್ಸ್ ಬೆವರಿಳಿಸಿದ ಪೂರನ್ ಲಕ್ನೋ ತಂಡದ ಸ್ಕೋರ್ ಹೆಚ್ಚಿಸಿದರು. ಹೀಗಾಗಿ ಅವರು ಟಿ20 ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ತಲುಪಿದರು.
ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ಸಿಕ್ಸರ್ ಬಾರಿಸಿದವರು
- ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) : 463 ಪಂದ್ಯಗಳು- 1056 ಸಿಕ್ಸರ್‌ಗಳು
- ಕೀರನ್ ಪೊಲಾರ್ಡ್ (ವೆಸ್ಟ್ ಇಂಡೀಸ್) : 695 ಪಂದ್ಯಗಳು- 908 ಸಿಕ್ಸರ್‌ಗಳು
- ಆಂಡ್ರೆ ರಸೆಲ್ (ವೆಸ್ಟ್ ಇಂಡೀಸ್) : 539 ಪಂದ್ಯಗಳು- 733 ಸಿಕ್ಸರ್‌ಗಳು
- ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್) : 385 ಪಂದ್ಯಗಳು- 606 ಸಿಕ್ಸರ್‌ಗಳು
- ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್) : 494 ಪಂದ್ಯಗಳು- 552 ಸಿಕ್ಸರ್‌ಗಳು
- ಕಾಲಿನ್ ಮುನ್ರೊ (ನ್ಯೂಜಿಲೆಂಡ್) : 434 ಪಂದ್ಯಗಳು- 550 ಸಿಕ್ಸರ್‌ಗಳು
- ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ) : 459 ಪಂದ್ಯಗಳು- 529 ಸಿಕ್ಸರ್‌ಗಳು
- ರೋಹಿತ್ ಶರ್ಮಾ (ಭಾರತ) : 449 ಪಂದ್ಯಗಳು- 525 ಸಿಕ್ಸರ್‌ಗಳು
- ಜೋಸ್ ಬಟ್ಲರ್ (ಇಂಗ್ಲೆಂಡ್) : 434 ಪಂದ್ಯಗಳು- 515 ಸಿಕ್ಸರ್‌ಗಳು
- ಡೇವಿಡ್ ಮಿಲ್ಲರ್ (ದಕ್ಷಿಣ ಆಫ್ರಿಕಾ) : 520 ಪಂದ್ಯಗಳು- 504 ಸಿಕ್ಸರ್‌ಗಳು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications