For Quick Alerts
ALLOW NOTIFICATIONS  
For Daily Alerts
 

IPL 2025: ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ಎಲ್‌ಎಸ್‌ಜಿ, ಪರ್ಪಲ್‌ ಕ್ಯಾಪ್‌ ರೇಸ್‌ನಲ್ಲಿ ಸಿಎಸ್‌ಕೆ ಪ್ಲೇಯರ್ಸ್‌

ಇಂಡಿಯನ್ ಪ್ರೀಮಿಯರ್ ಲೀಗ್‌ ಆರಂಭವಾಗಿದೆ. ಈ ಲೀಗ್‌ನಲ್ಲಿ ಆಟಗಾರರು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಅಂಕ ಪಟ್ಟಿ ದಿನ ಕಳೆದಂತೆ ಏರಿಳಿತವಾಗುತ್ತಿದೆ. ಸ್ಟಾರ್ ಆಟಗಾರರ ಪ್ರದರ್ಶನ ತಂಡದ ಗೆಲುವಿಗೆ ನೆರವಾಗುತ್ತಿದೆ. ಪ್ರತಿ ಐಪಿಎಲ್‌ ತಂಡದ ಆಟಗಾರರು ತಮ್ಮ ತಮ್ಮ ಜವಾಬ್ದಾರಿಯನ್ನು ನಂಬಿ ಆಡುತ್ತಿದ್ದಾರೆ. ಆರ್‌ಸಿಬಿ ಸಹ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ. ಆರ್‌ಸಿಬಿ ಈ ಬಾರಿ ಸಂಘಟಿತ ಆಟದ ಪ್ರದರ್ಶನ ನೀಡಿದ್ದು ಎಲ್ಲರ ಚಿತ್ತ ಕದ್ದಿದೆ.

ಪತ್ರಿ ಬಾರಿಯಂತೆ ಈ ಬಾರಿಯೂ ಅನುಭವಿ ಹಾಗೂ ಯುವ ಆಟಗಾರರು ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿರುವ ಪರ್ಪಲ್‌ ಕ್ಯಾಪ್‌ ಹಾಗೂ ಆರೆಂಜ್‌ ಕ್ಯಾಪ್‌ಮೇಲೆ ಎಲ್ಲರೂ ಒಂದು ಕಣ್ಣು ನೆಟ್ಟಿದ್ದಾರೆ. ಆದರೆ ಈ ತಂಡದ ಆಟಗಾರರು ಮಾತ್ರ ಈ ರೇಸ್‌ನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಿದ್ದರೆ ಯಾವೆಲ್ಲಾ ಆಟಗಾರರು ಯಾವ ಯಾವ ಕ್ಯಾಪ್‌ ಮೇಲೆ ಕಣ್ಣು ನೆಟ್ಟಿದ್ದಾರೆ ಎಂಬ ಬಗ್ಗೆ ವಿವರ ಇಲ್ಲಿದೆ.

IPL 2025 Nicholas Pooran Leads Orange Cap Noor Ahmed Tops Purple Cap Race After 21 Matches

18ನೇ ಆವೃತ್ತಿಯ ಐಪಿಎಲ್‌ನಲ್ಲಿ 21 ಪಂದ್ಯಗಳು ಮುಗಿದಿವೆ. ಈ ವೇಳೆ 688 ಬೌಂಡರಿ, 407 ಸಿಕ್ಸರ್‌ ಸಹ ದಾಖಲಾಗಿವೆ. ಆರ್‌ಸಿಬಿ ತಂಡದ ಸೂಪರ್ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಸಹ ಅದ್ಭುತ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಿಂಚುತ್ತಿದ್ದಾರೆ. ಈ ವೇಳೆ ಇವರು ಆಡಿದ 4 ಪಂದ್ಯಗಳಲ್ಲಿ 2 ಅರ್ಧಶತಕ ಸೇರಿದಂತೆ 164 ರನ್‌ ಸಿಡಿಸಿದ್ದು ಆರೆಂಜ್‌ ಕ್ಯಾಪ್‌ ಮೇಲೆ ಕಣ್ಣು ನೆಟ್ಟಿದ್ದಾರೆ. ಆದರೆ ಈ ರೇಸ್‌ ಲಕ್ನೋ ಸೂಪರ್‌ ಜೈಂಟ್ಸ್ ತಂಡದ ಆಟಗಾರರು ಬಹಳ ಮುಂದೆ ಸಾಗಿದ್ದಾರೆ.

ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ನಿಕೋಲಸ್‌

ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಎಲ್‌ಎಸ್‌ಜಿ ತಂಡದ ನಿಕೋಲಸ್‌ ಪೂರನ್‌ ಮುಂಚೂಣಿಯಲ್ಲಿದ್ದಾರೆ. ಇವರು ಆಡಿದ 5 ಪಂದ್ಯಗಳಲ್ಲಿ 3 ಅರ್ಧಶತಕ ಸೇರಿದಂತೆ 288 ರನ್‌ ಸಿಡಿಸಿದ್ದು ಆರೆಂಜ್‌ ಕ್ಯಾಪ್‌ ಹೊಂದಿದ್ದಾರೆ. ಇವರಿಗೆ ಭಾರೀ ಪೈಪೋಟಿ ನೀಡುತ್ತಿರುವ ಅದೇ ತಂಡದ ಮಿಚೆಲ್ ಮಾರ್ಷ್ 5 ಪಂದ್ಯಗಳಲ್ಲಿ 4 ಅರ್ಧಶತದ ಬಲದಿಂದ 265 ರನ್‌ ಕಲೆ ಹಾಕಿದ್ದಾರೆ. ಮೂರನೇ ಸ್ಥಾನದಲ್ಲಿ ಟಿ20 ಕ್ರಿಕೆಟ್‌ನ ಸೂಪರ್ ಸ್ಟಾರ್‌ ಬ್ಯಾಟರ್‌ ಸೂರ್ಯಕುಮಾರ್‌ ಇದ್ದು, ಇವರು 4 ಪಂದ್ಯಗಳಲ್ಲಿ 199 ರನ್‌ ಸಿಡಿಸಿದ್ದಾರೆ.

ಟಾಪ್‌ 5 ಗರಿಷ್ಠ ರನ್ ಸಾಧಕರು

ನಿಕೋಲಸ್ ಪೂರನ್ (ಎಲ್‌ಎಸ್‌ಜಿ), 5 ಪಂದ್ಯ, 288 ರನ್‌
ಮಿಚೆಲ್ ಮಾರ್ಷ್ (ಎಲ್‌ಎಸ್‌ಜಿ), 5 ಪಂದ್ಯ, 265 ರನ್‌
ಸೂರ್ಯಕುಮಾರ್ ಯಾದವ್ (ಮುಂಬೈ ಇಂಡಿಯನ್ಸ್‌)
ಸಾಯಿ ಸುದರ್ಶನ್ (ಜಿಟಿ), 5 ಪಂದ್ಯ, 191 ರನ್
ಅಜಿಂಕ್ಯ ರಹಾನೆ (ಕೆಕೆಆರ್‌), 5 ಪಂದ್ಯ, 184 ರನ್‌

IPL 2025 Nicholas Pooran Leads Orange Cap Noor Ahmed Tops Purple Cap Race After 21 Matches

ಪರ್ಪಲ್‌ ಕ್ಯಾಪ್‌ ರೇಸ್‌ನಲ್ಲಿ ಸಿಎಸ್‌ಕೆ ಪ್ಲೇಯರ್ಸ್‌

ಪ್ರಸಕ್ತ ಲೀಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್‌ ಬೌಲರ್‌ಗಳು ಪರ್ಪಲ್ ಕ್ಯಾಪ್‌ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ನೂರ್ ಅಹ್ಮದ್‌ 5 ಪಂದ್ಯಗಳಲ್ಲಿ 11 ವಿಕೆಟ್‌ ಪಡೆದಿದ್ದು, ಸದ್ಯ ಈ ಕ್ಯಾಪ್‌ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಇನ್ನು ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಸಹ ಆಡಿದ 4 ಪಂದ್ಯಗಳಲ್ಲಿ 10 ವಿಕೆಟ್‌ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಆರ್‌ಸಿಬಿ ತಂಡದ ಜೋಶ್‌ ಹ್ಯಾಜಲ್‌ವುಡ್ 8 ವಿಕೆಟ್‌ ಪಡೆದು ಎಂಟನೇ ಸ್ಥಾನದಲ್ಲಿದ್ದಾರೆ.

ಅತಿ ಹೆಚ್ಚು ವಿಕೆಟ್‌ 5 ಬೌಲರ್ಸ್‌

ನೂರ್‌ ಅಹ್ಮದ್‌ (ಸಿಎಸ್‌ಕೆ), 5 ಪಂದ್ಯ, 11 ವಿಕೆಟ್‌
ಹಾರ್ದಿಕ್ ಪಾಂಡ್ಯ (ಮುಂಬೈ ಇಂಡಿಯನ್ಸ್‌), 4 ಪಂದ್ಯ, 10 ವಿಕೆಟ್‌
ಖಲೀಲ್‌ ಅಹ್ಮದ್ (ಸಿಎಸ್‌ಕೆ), 5 ಪಂದ್ಯ, 10 ವಿಕೆಟ್‌
ಮಿಚೆಲ್ ಸ್ಟಾರ್ಕ್‌ (ಡಿಸಿ), 3 ಪಂದ್ಯ, 9 ವಿಕೆಟ್‌
ಮೊಹಮ್ಮದ್ ಸಿರಾಜ್ (ಜಿಟಿ), 4 ಪಂದ್ಯ, 9 ವಿಕೆಟ್‌

Story first published: Wednesday, April 9, 2025, 12:03 [IST]
Other articles published on Apr 9, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+