IPL 2025: ನಿಕೋಲಸ್ ಪೂರನ್ ಪವರ್ ಹಿಟಿಂಗ್‌ಗೆ ಅಭಿಮಾನಿ ತಲೆ ಡ್ಯಾಮೇಜ್
ಐಪಿಎಲ್ 2025 ರ 26 ನೇ ಪಂದ್ಯವು ಏಪ್ರಿಲ್ 12 ರ ಶನಿವಾರ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ, ನಿಕೋಲಸ್ ಪೂರನ್ ಅವರ ಅದ್ಭುತ ಬ್ಯಾಟಿಂಗ್‌ನಿಂದ ಲಕ್ನೋ 6 ವಿಕೆಟ್‌ಗಳಿಂದ ಜಯಗಳಿಸಿತು. ಆದರೆ, ನಿಕೋಲಸ್ ಪೂರನ್ ಹೊಡೆದ ಭರ್ಜರಿ ಸಿಕ್ಸರ್‍ನಿಂದ ಅಭಿಮಾನಿಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ತವರಿನಲ್ಲಿ ಅಬ್ಬರಿಸಿದ ನಿಕೋಲಸ್ ಪೂರನ್ ಅಭಿಮಾನಿಗಳು ಹುಚ್ಚೆದು ಕುಣಿಯುವಂತೆ ಮಾಡಿದರು. ದುರದೃಷ್ಟಕರ ಪೂರನ್ ಹೊಡೆದ ಸಿಕ್ಸ್ ಅಭಿಮಾನಿಯೊಬ್ಬರ ತಲೆಗೆ ಬಡಿದು ತೀವ್ರವಾಗಿ ಗಾಯಗೊಂಡರು. ಮೈದಾನದಲ್ಲಿ ಅವರ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಯಿತು.

ನಿಕೋಲಸ್ ಪೂರನ್ ಹೊಡೆದ ಸಿಕ್ಸ್‌ನಿಂದ ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಿ ಎಂಟು ಹೊಲಿಗೆಗಳನ್ನು ಹಾಕಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಗಾಯಗೊಂಡ ಅಭಿಮಾನಿ ತಲೆಗೆ ಬ್ಯಾಂಡೇಜ್ ಕಟ್ಟಿಕೊಂಡು ಕಾಣಿಸಿಕೊಂಡಿದ್ದಾರೆ.
ಅಚ್ಚರಿಯ ವಿಷಯವೆಂದರೆ ಗಾಯಗೊಂಡ ನಂತರವೂ ಅಭಿಮಾನಿ ಸ್ಟೇಡಿಯಂಗೆ ಪಂದ್ಯವನ್ನು ವೀಕ್ಷಿಸಲು ಹಿಂತಿರುಗಿದರು. ಶನಿವಾರ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ನಿಕೋಲಸ್ ಪೂರನ್ 7 ಸಿಕ್ಸರ್‌ಗಳನ್ನು ಬಾರಿಸಿದರು. ಅದರಲ್ಲಿ ಒಂದು ಅಭಿಮಾನಿ ತಲೆಗೆ ಬಡಿದಿದೆ.
ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ನಿಕೋಲಸ್ ಪೂರನ್ 179.41 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಅವರು 34 ಎಸೆತಗಳಲ್ಲಿ 1 ಬೌಂಡರಿ ಮತ್ತು 7 ಸಿಕ್ಸರ್‌ಗಳ ನೆರವಿನಿಂದ 61 ರನ್ ಗಳಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಲಕ್ನೋ ಸೂಪರ್ ಜೈಂಟ್ಸ್ 19.3 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 186 ರನ್ ಗಳಿಸಿ 6 ವಿಕೆಟ್‌ಗಳ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು.
ಪಂದ್ಯದ ನಂತರ ಮಾತನಾಡಿದ ನಿಕೋಲಸ್ ಪೂರನ್, ಇಂದು ಪಿಚ್ ಬ್ಯಾಟಿಂಗ್‌ಗೆ ತುಂಬಾ ಸಹಾಯಕವಾಗಿತ್ತು. ಇದರ ಬಗ್ಗೆ ಹೆಚ್ಚು ಮಾತುಕತೆ ನಡೆಯಲಿಲ್ಲ. ಒಂದು ತಂಡವಾಗಿ, ನಮಗೆ ಬ್ಯಾಟಿಂಗ್‌ನಲ್ಲಿ ಉತ್ತಮ ಬಲ ಎಂದು ತಿಳಿದಿತ್ತು. ನಾವು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದೇವೆ. ಒಳ್ಳೆಯ ವಿಷಯವೆಂದರೆ ಉತ್ತಮ ಜೊತೆಯಾಟ ಇತ್ತು ಮತ್ತು ಐಡೆನ್ ಮಾರ್ಕ್ರಾಮ್ ಆಟ ಮುಂದುವರೆಸಿದರು. ದುರದೃಷ್ಟವಶಾತ್, ಮಿಚೆಲ್ ಮಾರ್ಷ್ ಇಂದು ಆಡಲಿಲ್ಲ. ರಿಷಭ್ ಆರಂಭಿಕನಾಗಿ ಬಂದರು ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications