IPL 2025: ಶಾರ್ದೂಲ್ ಠಾಕೂರ್ ಅದೃಷ್ಟವನ್ನೇ ಬದಲಿಸಿದ ಆ ಒಂದು ಫೋನ್ ಕರೆ
ಐಪಿಎಲ್ 2025 ರ 7 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತನ್ನ ತವರು ಮೈದಾನದಲ್ಲಿ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕವನ್ನು ಹೊಂದಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಇದು ಐಪಿಎಲ್18ನೇ ಸೀಸನ್‌ನಲ್ಲಿ ಲಕ್ನೋ ತಂಡದ ಮೊದಲ ಗೆಲುವು. ಈ ಅದ್ಭುತ ಗೆಲುವಿನ ಹೀರೋ ಲಾರ್ಡ್ ಖ್ಯಾತಿ ಶಾರ್ದೂಲ್ ಠಾಕೂರ್. ಅವರು 4 ಪ್ರಮುಖ ವಿಕೆಟ್‌ಗಳನ್ನು ಪಡೆಯುವ ಮೂಲಕ ಹೈದರಾಬಾದ್ ತಂಡವನ್ನು ಕಟ್ಟಿ ಹಾಕಿದರು.
ಸನ್‌ರೈಸರ್ಸ್ ಹೈದರಾಬಾದ್ 300 ರನ್‌ಗಳ ಬೃಹತ್ ಮೊತ್ತ ಕಲೆ ಹಾಕುವ ನಿರೀಕ್ಷೆಯಲ್ಲಿತ್ತು. ಆದರೆ ಹೈದರಾಬಾದ್ ತಂಡದ ಎಲ್ಲಾ ಲೆಕ್ಕಚಾರವನ್ನು ಶಾರ್ದೂಲ್ ಠಾಕೂರ್ ಉಲ್ಟಾ ಮಾಡಿದರು. ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ತಮ್ಮ ಮೊದಲ ಪಂದ್ಯದಲ್ಲಿ ಎರಡನೇ ಅತಿ ಹೆಚ್ಚು ಸ್ಕೋರ್ ಗಳಿಸಿದ್ದ ಹೈದರಾಬಾದ್ ತಂಡ, ಶಾರ್ದೂಲ್ ಅವರ ಅದ್ಭುತ ಬೌಲಿಂಗ್‌ನಿಂದಾಗಿ ತವರು ನೆಲದಲ್ಲಿ 200 ರನ್‌ಗಳನ್ನು ಸಹ ತಲುಪಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಶಾರ್ದೂಲ್ 4 ಓವರ್‌ಗಳಲ್ಲಿ 34 ರನ್‌ಗಳಿಗೆ 4 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು.

ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಶಾರ್ದೂಲ್ ಠಾಕೂರ್ ಆನ್ ಸ್ಡೋಲ್ ಆಗಿದ್ದರು. ಆದರೆ ಐಪಿಎಲ್ 2025 ರ ಸೀಸನ್ ಆರಂಭಕ್ಕೂ ಮುನ್ನ ಲಕ್ನೋ ತಂಡ ವೇಗಿ ಮೊಹ್ಸಿನ್ ಖಾನ್ ಗಾಯಗೊಂಡು ಹೊರಗುಳಿಬೇಕಾಯಿತು. ಹೀಗಾಗಿ ಬದಲಿ ಆಟಗಾರನಾಗಿ ಶಾರ್ದೂಲ್ ಠಾಕೂರ್ ಲಕ್ನೋ ತಂಡ ಸೇರುವ ಮೂಲಕ ಐಪಿಎಲ್‌ನಲ್ಲಿ ಅದ್ಭುತ ಪುನರಾಗಮನ ಮಾಡಿದ್ದಾರೆ. ಲಕ್ನೋ ಪರ ಆಡುತ್ತಿರುವ ಅವರು ಈಗ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಗೆದ್ದಿದ್ದಾರೆ.
ಐಪಿಎಲ್ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಬಿಡ್ ಮಾಡದಿದ್ದರೂ, ಶಾರ್ದೂಲ್ ಠಾಕೂರ್ ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಪರ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದರು. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಂತರ, ಶಾರ್ದೂಲ್ ಠಾಕೂರ್ ಎಲ್‌ಎಸ್‌ಜಿ ಸೇರುವ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಗೆ ಆಯ್ಕೆ ಆಗುವ ಚರ್ಚೆಗಳು ನಡೆದಿದ್ದವು.
ಅದೃಷ್ಟ ಬದಲಿಸಿದ ಫೋನ್ ಕರೆ
ದೇಶೀಯ ಕ್ರಿಕೆಟ್ ನಲ್ಲಿ ಮಿಂಚುತ್ತಿದ್ದ ಶಾರ್ದೂಲ್ ಠಾಕೂರ್ ಐಪಿಎಲ್ ನಲ್ಲಿ ಆಡದೇ ಇರುವ ಬಗ್ಗೆ ಚಿಂತಿತರಾಗಿದ್ದರು. ಆದರೆ ಲಕ್ನೋ ತಂಡದ ಮೆಂಟರ್ ಜಹೀರ್ ಖಾನ್ ಅವರ ಫೋನ್ ಕರೆ ಶಾರ್ದೂಲ್ ಅದೃಷ್ಟವನ್ನೇ ಬದಲಾಯಿಸಿತು. ಠಾಕೂರ್ ಇಂಗ್ಲೆಂಡ್‌ಗೆ ಹೋಗಿ ಬೇಸಿಗೆ ರಜೆಯನ್ನು ಎಸೆಕ್ಸ್‌ನೊಂದಿಗೆ ಕಳೆಯಲು ಮತ್ತು ಮೊದಲ ಬಾರಿಗೆ ಕೌಂಟಿ ಕ್ರಿಕೆಟ್ ಆಡಲು ಪ್ಲಾನ್ ಮಾಡಿಕೊಂಡಿದ್ದರು. ಆದರೆ ಎಲ್‌ಎಸ್‌ಎಲ್ ವೇಗಿಗಳಾದ ಮಯಾಂಕ್ ಯಾದವ್, ಆವೇಶ್ ಖಾನ್, ಮೊಹ್ಸಿನ್ ಖಾನ್ ಮತ್ತು ಆಕಾಶ್ ದೀಪ್ ಎಲ್ಲರೂ ಗಾಯಗೊಂಡು ಪಂದ್ಯಗಳಿಗೆ ಆಲಭ್ಯರಾಗಿದ್ದರು. ಆದ್ದರಿಂದ ಜಹೀರ್ ಖಾನ್, ಮೊಹ್ಸಿನ್ ಖಾನ್ ಅವರ ಬದಲಿಯಾಗಿ ಶಾರ್ದೂಲ್ ಠಾಕೂರ್ ಅವರನ್ನು ಮೂಲ ಬೆಲೆ 2 ಕೋಟಿ ರೂ.ಗೆ ತಂಡಕ್ಕೆ ಸೇರಿಸಿಕೊಂಡರು. ಅಂದಿನಿಂದ ಆಡಿರುವ ಎರಡು ಪಂದ್ಯಗಳಲ್ಲಿ ಲಕ್ನೋ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications