Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

PBKS Retention: ಕ್ಯಾಪ್ಡ್‌ ಪ್ಲೇಯರ್ಸ್‌ಗೆ ಇಲ್ಲ ಸ್ಥಾನ: ಇಬ್ಬರು ಅನ್‌ಕ್ಯಾಪ್ಡ್‌ ಪ್ಲೇಯರ್‌ ರಿಟೇನ್‌

ಪಂಜಾಬ್‌ ಕಿಂಗ್ಸ್‌ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದೆ. ಇನ್ನು ಈ ತಂಡ ಯಾವುದೇ ಕ್ಯಾಪ್ಡ್‌ ಪ್ಲೇಯರ್‌ನ್ನು ಉಳಿಸಿಕೊಳ್ಳುವಲ್ಲಿ ಮನಸ್ಸು ಮಾಡಿಲ್ಲ. ಅನ್‌ಕ್ಯಾಪ್ಡ್‌ ಆಟಗಾರರ ಪಟ್ಟಿಯಲ್ಲಿ ಇಬ್ಬರನ್ನು ತಂಡ ಉಳಿಸಿಕೊಂಡಿದೆ. ಶಶಾಂಕ್‌ ಸಿಂಗ್‌ ಹಾಗೂ ಪ್ರಭಾಸಿಮ್ರಾನ್ ಸಿಂಗ್ ಅವರನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಉಳಿದಂತೆ ಸ್ಟಾರ್ ಆಟಗಾರರನ್ನು ಪಂಜಾಬ್‌ ಹರಾಜಿಗೆ ಬಿಟ್ಟಿದೆ.

ಪಂಜಾಬ್‌ ತಂಡದಲ್ಲಿದ್ದ ಸ್ಟಾರ್ ವೇಗದ ಬೌಲರ್‌ ಹರ್ಷಲ್‌ ಪಟೇಲ್‌, ಸ್ಯಾಮ್‌ ಕರನ್‌, ಅರ್ಷದೀಪ್‌ ಸಿಂಗ್, ಲಿಯಾಮ್‌ ಲೀವಿಂಗ್‌ ಸ್ಟೋನ್‌, ಕಗಿಸೋ ರಬಾಡ ಮಾಲೀಕರ ಚಿತ್ತವನ್ನು ಕದಿಯುವಲ್ಲಿ ವಿಫಲರಾಗಿದ್ದಾರೆ.

IPL 2025 PBKS Retention Uncapped Players PBKS Strategy Player Choices and Shashank Singh s Value

ಎಲ್ಲರ ಚಿತ್ತವನ್ನು ಕದ್ದಿದ್ದ ಪಂಜಾಬ್ ಕಿಂಗ್ಸ್ ತಂಡದ ರಿಟೇನ್ಷನ್ ಲೀಸ್ಟ್‌ ಫೈನಲಿ ರಿಲೀಸ್ ಆಗಿದೆ. ಎಲ್ಲ ಸ್ಟಾರ್‌ ಆಟಗಾರರನ್ನು ಹರಾಜು ಅಂಗಳಕ್ಕೆ ಬಿಟ್ಟಿರುವ ಪಂಜಾಬ್‌ ಕಿಂಗ್ಸ್‌ ಅತ್ಯಂತ ಶ್ರೀಮಂತ ಫ್ರಾಂಚೈಸಿ ಎಂಬ ಹಣೆ ಪಟ್ಟವನ್ನು ಹೊಂದಿದೆ.

ಪಂಜಾಬ್ ಕಿಂಗ್ಸ್ ಐಪಿಎಲ್ 2025 ರ ಮೆಗಾ ಹರಾಜಿನ ಮೊದಲು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ಕೇವಲ ಇಬ್ಬರು ಆಟಗಾರರಿಗೆ ಸ್ಥಾನ ನೀಡಲಾಗಿದೆ. ಇಬ್ಬರು ಅನ್‌ ಕ್ಯಾಪ್ಡ್‌ ಪ್ಲೇಯರ್‌ಗೆ ಅವಕಾಶ ನೀಡಲಾಗಿದೆ. ಪಂಜಾಬ್ ತಂಡವು ಪ್ರಭಾಸಿಮ್ರಾನ್ ಸಿಂಗ್ ಮತ್ತು ಶಶಾಂಕ್ ಸಿಂಗ್ ಅವರನ್ನು ಉಳಿಸಿಕೊಂಡಿದೆ. ಪಂಜಾಬ್ ಕಿಂಗ್ಸ್ 5.5 ಕೋಟಿ ರೂ.ಗೆ ಶಶಾಂಕ್ ಸಿಂಗ್ ಮತ್ತು 4 ಕೋಟಿ ರೂ.ಗೆ ಪ್ರಭಾಸಿಮ್ರಾನ್ ಸಿಂಗ್ ಅವರನ್ನು ಉಳಿಸಿಕೊಂಡಿದೆ.

ಶ್ರೀಮಂತ ತಂಡ

ಪ್ರಭಾಸಿಮ್ರಾನ್ ನಾವು ಹೂಡಿಕೆ ಮಾಡಿದ ಮತ್ತು ಹೆಚ್ಚಿನ ನಿರೀಕ್ಷೆಯ ಆಟಗಾರ ಎಂದು ಮುಖ್ಯ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದಾರೆ. ಶಶಾಂಕ್ ಅವರ ಕೌಶಲ್ಯ ಮತ್ತು ಅದ್ಭುತ ಪ್ರದರ್ಶನವನ್ನು ಕಂಡು ಅವರನ್ನು ಉಳಿಸಿಕೊಳ್ಳಲಾಗಿದೆ ಎಂದು ಕೋಚ್ ತಿಳಿಸಿದ್ದಾರೆ.

ಐಪಿಎಲ್ 2024 ರಲ್ಲಿ ಪಂಜಾಬ್ ಕಿಂಗ್ಸ್ ಪರ 14 ಪಂದ್ಯಗಳಲ್ಲಿ 354 ರನ್ ಗಳಿಸಿ 164.65 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿದ ಶಶಾಂಕ್ ಮಾಲೀಕರ ಚಿತ್ತ ಕದ್ದಿದ್ದರು. ಇನ್ನು ಪ್ರಭಾಸಿಮ್ರಾನ್ ಸಹ ತಮ್ಮ ಕ್ಲಾಸಿಕ್ ಆಟದಿಂದ ಫ್ರಾಂಚೈಸಿ ಮನ ಗೆದ್ದಿದ್ದಾರೆ.

ಪಂಜಾಬ್‌ ಹೊಸ ಕೋಚ್‌ನೊಂದಿಗೆ ಹೊಸ ತಂಡವನ್ನು ಕಟ್ಟುವ ಇರಾದೆಯನ್ನು ಹೊಂದಿದೆ. ಉಳಿದ ಎಲ್ಲ ಸ್ಟಾರ್ ಆಟಗಾರರನ್ನು ರಿಲೀಸ್‌ ಮಾಡಿದೆ. ಈ ಬಾರಿ ಹರಾಜನಿನಲ್ಲಿ ಎಲ್ಲರ ಚಿತ್ತ ಈ ತಂಡದ ಮೇಲೆ ನೆಟ್ಟಿರಲಿದೆ.

Story first published: Thursday, October 31, 2024, 18:11 [IST]
Other articles published on Oct 31, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+