IPL 2025: ಆರು ಆಟಗರಾರರ ರಿಟೇನ್‌ಗೆ ಅವಕಾಶ, ಪರ್ಸ್ ಗಾತ್ರ ಹೆಚ್ಚಳ: ಇಲ್ಲಿದೆ ಕಂಪ್ಲೀಟ್ ಮಾಹಿತಿ
ಇಂಡಿಯನ್ ಪ್ರೀಮಿಯರ್ ಲೀಗ್‌ನ 18 ನೇ ಆವೃತ್ತಿಗೆ ಭರದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ವರ್ಷ ಮೆಗಾ ಹರಾಜು ನಡೆಯಲಿದ್ದು, ಎಲ್ಲರ ಚಿತ್ತ ಈ ಹರಾಜಿನ ಮೇಲೆ ನೆಟ್ಟಿರಲಿದೆ. ಇನ್ನು ಬಿಸಿಸಿಐ ಬಿಡುಗಡೆ ಮಾಡುವ ರಿಟೇನ್ಶನ್ ಪಾಲೀಸಿ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಇದಕ್ಕೆ ಸಂಬಂಧಿಸಿದಂತೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ಮೆಗಾ ಹರಾಜಿನ ಮೊದಲು, ಎಲ್ಲಾ ತಂಡಗಳು ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವನ್ನು ನೀಡಲಾಗಿದೆ.
ಈ ಬಾರಿ ರಿಟೇನ್ಶನ್ ಪಾಲಿಸಿಯ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಈ ಬಾರಿ ಯಾವೆಲ್ಲಾ ನಿಯಮಗಳು ಇರಲಿವೆ? ಎಷ್ಟು ಆಟಗಾರರಿಗೆ ತಂಡದಲ್ಲಿ ಉಳಿಸಿಕೊಳ್ಳುವ ಅವಕಾಶ ನೀಡಲಾಗುತ್ತದೆ ಎಂಬೆಲ್ಲಾ ಚರ್ಚೆಗಳು ನಡೆದಿದ್ದವು. ಅಲ್ಲದೆ ರೈಟ್ ಟು ಮ್ಯಾಚ್ ಕಾರ್ಡ್ ಅವಕಾಶ ಇದೆಯೋ ಇಲ್ಲವೋ ಎಂಬ ಬಗ್ಗೆಯೋ ಮಾತುಕತೆಗಳು ನಡೆದಿದ್ದವು. ಈಗ ಈ ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಇನ್ನು ಬೆಂಗಳೂರಿನಲ್ಲಿ ನಡೆದ ಐಪಿಎಲ್ ಸಭೆಯಲ್ಲಿ 2027 ರ ವರೆಗೆ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.

ಶನಿವಾರ ಐಪಿಎಲ್ ಗೌರ್ವನಿಂಗ್ ಕೌನ್ಸಿಲ್ ಮೀಟಿಂಗ್ ಬೆಂಗಳೂರಿನಲ್ಲಿ ನಡೆಯಿತು. ಈ ವೇಳೆ ಆರು ಆಟಗಾರರಿಗೆ ತಂಡದಲ್ಲಿ ಉಳಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಇದರಲ್ಲಿ ಒಬ್ಬ ಅನ್‌ಕ್ಯಾಪ್ಡ್ ಪ್ಲೇಯರ್ ಉಳಿಸಿಕೊಳ್ಳಬೇಕು. ಇನ್ನು ಈ ಬಾರಿ ಹರಾಜಿಗೆ ಫ್ರಾಂಚೈಸಿ ಪರ್ಸ್ ಮೌಲ್ಯ 120 ಕೋಟಿ ಆಗಿರಲಿದೆ.
ಮಾಲೀಕರು ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬಹುದು?
ಪ್ರತಿ ಫ್ರಾಂಚೈಸಿ ಬರೋಬ್ಬರಿ ಆರು ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವ ಅವಕಾಶವನ್ನು ಹೊಂದಿರುತ್ತಾರೆ. ನೀವು ಇದರಲ್ಲಿ ರಿಟೇನ್ ಆಗಿಯಾದರೂ ಆಟಗಾರರಿಗೆ ಅವಕಾಶ ನೀಡಬಹುದು. ಇಲ್ಲವೇ ಅವರನ್ನು ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ಪಡೆದುಕೊಳ್ಳಬಹುದು.

ಐಪಿಎಲ್ ಫ್ರಾಂಚೈಸಿಗಳು ತಮ್ಮ ರಿಟೇನ್ ಹಾಗೂ ರೈಟ್ ಟು ಮ್ಯಾಚ್ ಕಾರ್ಡ್ ಕಾಂಬಿನೇಷನ್ ತಾವೇ ಸಿದ್ಧ ಪಡಿಸಿಕೊಳ್ಳಬೇಕು. ಈ ಆರು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ಗರಿಷ್ಠ ಐವರು ಕ್ಯಾಪ್ಡ್ ಆಟಗಾರರು, ಇಬ್ಬರು ಅನ್‌ಕ್ಯಾಪ್ಡ್ ಆಟಗಾರರಿಗೆ ಅವಕಾಶ ನೀಡಬಹುದು.
ಈ ಬಾರಿ ಪರ್ಸ್ ಗಾತ್ರ ಏನಿರಲಿದೆ?
ಐಪಿಎಲ್ 2025 ಹರಾಜಿಗೆ ಮಾಲೀಕರ ಪರ್ಸ್ ಸೈಜ್ ಡಿಸೈಡ್ ಮಾಡಲಾಗಿದ್ದು, 120 ಕೋಟಿ ರೂ. ಹಣವನ್ನು ವ್ಯಯಮಾಡಬಹುದಾಗಿದೆ.
ಆಟಗಾರರಿಗೆ ನೀಡುವ ಪಂದ್ಯದ ಶುಲ್ಕ ಎಷ್ಟು?
ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮ್ಯಾಚ್ ಫೀ ಪರಿಚಯಿಸಲಾಗಿದೆ. ಪ್ರತಿ ಆಟಗಾರರು ಪಂದ್ಯದ ಶುಲ್ಕವನ್ನು ಪಡೆಯಲಿದ್ದಾರೆ. ಪ್ರತಿ ಪಂದ್ಯಕ್ಕೆ ಆಟಗಾರ 7.5 ಲಕ್ಷ ಮ್ಯಾಚ್ ಫೀ ಪಡೆಯಲಿದ್ದು, ಈ ಮೊತ್ತ ಅವರ ಒಪ್ಪಂದದ ಮೊತ್ತಕ್ಕೆ ಸೇರುತ್ತದೆ.
ಆವೃತ್ತಿಗೂ ಮುನ್ನ ಐಪಿಎಲ್‌ನಿಂದ ಹಿಂದೆ ಸರೆದರೆ..
ಆಟಗಾರರ ಹರಾಜಿನಲ್ಲಿ ನೊಂದಾಯಿಸಿಕೊಂಡ ಬಳಿಕ, ಯಾವುದೇ ಆಟಗಾರ ಹರಾಜಿನಲ್ಲಿ ಬಿಕರಿ ಆದ ಬಳಿಕ ತಾನು ಈ ಆವೃತ್ತಿಗೆ ಅಲಭ್ಯ ಎಂದು ಘೋಷಿಸಿದಲ್ಲಿ, ಆ ಆಟಗಾರರನ್ನು ಎರಡು ಆವೃತ್ತಿಗಳಿಗೆ ನಿಷೇಧ ಹೇರಲಾಗುತ್ತದೆ.
ಹಳೆಯ ನಿಮಯಕ್ಕೆ ಮಣೆ
ಈ ಬಾರಿ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಮತ್ತೆ ಹಳೆಯ ನಿಯಮವನ್ನು ಸೇರಿಸಿಕೊಂಡಿದೆ. ಈ ನಿಯಮದಂತೆ ಭಾರತೀಯ ಆಟಗಾರನು ಕಳೆದ 5 ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡದಿದ್ದರೆ, ಅವರನ್ನು ಅನ್‌ಕ್ಯಾಪ್ಡ್ ಆಟಗಾರ ಎಂದು ಪರಿಗಣಿಸಲಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications