IPL 2025: ಈ ತಂಡಗಳೇ ಪ್ಲೇ ಆಫ್ ಪ್ರವೇಶಿಸುತ್ತವೆ: ಮಾಜಿ ಆಟಗಾರರ ಭವಿಷ್ಯ
ಇನ್ನು ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಹವಾ ಆರಂಭವಾಗಲಿದೆ. ಈ ಟೂರ್ನಿಯ ಉದ್ಘಾಟನಾ ಪಂದ್ಯ ಶನಿವಾರ ಕೋಲ್ಕತ್ತಾದ ಈಡನ್ ಗಾರ್ಡನ್ ಅಂಗಳದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ತಂಡಗಳು ಕಾದಾಟ ನಡೆಸಲಿವೆ. ಈ ಮೆಗಾ ಟೂರ್ನಿಗೂ ಮುಂಚಿತವಾಗಿಯೇ ಮಾಜಿ ಆಟಗಾರರು ತಮ್ಮ ತಮ್ಮ ಭವಿಷ್ಯವಾಣಿಯನ್ನು ನುಡಿದಿದ್ದಾರೆ.
ಒಂದು ಮೆಗಾ ಟೂರ್ನಿ ಆರಂಭವಾಗುವದಕ್ಕೂ ಮೊದಲು ಮಾಜಿ ಆಟಗಾರರು ಈ ನಾಲ್ಕು ತಂಡಗಳು ಸೆಮಿಫೈನಲ್ ತಲುಪುತ್ತವೆ. ಈ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸುತ್ತದೆ ಎಂದು ಭವಿಷ್ಯ ನುಡಿಯುತ್ತಾರೆ. ಹಾಗೆ ಐಪಿಎಲ್ ಆರಂಭವಾಗುವುದಕ್ಕೂ ಮುನ್ನವೇ ಮಾಜಿ ಆಟಗಾರರು ಪ್ಲೇ ಆಫ್ ಪ್ರವೇಶಿಸುವ ತಂಡಗಳನ್ನು ಹೆಸರಿಸಿದ್ದಾರೆ. ಯಾವೆಲ್ಲಾ ಮಾಜಿ ಆಟಗಾರರು ಏನೇನು ಹೇಳಿದ್ದಾರೆ ಇಲ್ಲಿದೆ. ಮಾಹಿತಿ.

ಸೆಹ್ವಾಗ್ ಹೇಳಿದ್ದೇನು?
ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಈ ಟೂರ್ನಿಯ ಆರಂಭಕ್ಕೂ ಮುನ್ನವೇ ಪ್ಲೇ ಆಫ್ ಪ್ರವೇಶಿಸಬಹುದಾದ ನಾಲ್ಕು ತಂಡಗಳನ್ನು ಹೆಸರಿಸಿದ್ದಾರೆ. ಕ್ರಿಕ್ ಬಜ್ ಜೊತೆ ಮಾತನಾಡುವ ಸೆಹ್ವಾಗ್, ಪ್ಲೆ ಆಫ್ ಪ್ರವೇಶಿಸಬಹುದಾದ ನಾಲ್ಕು ತಂಡಗಳುನ್ನು ಹೆಸರಿಸಿದ್ದಾರೆ. ಮಾಜಿ ಸ್ಫೋಟಕ ಆಟಗರಾನ ಪ್ರಕಾರ, ಮುಂಬೈ ಇಂಡಿಯನ್ಸ್, ಎಸ್‌ಆರ್‌ಎಚ್, ಪಂಜಾಬ್ ಕಿಂಗ್ಸ್, ಎಲ್‌ಎಸ್‌ಜಿ ತಂಡಗಳು ಮುಂದಿನ ಹಂತವನ್ನು ಪ್ರವೇಶಿಸಬಹುದು ಎಂದು ತಿಳಿಸಿದ್ದಾರೆ.
ಖ್ಯಾತ ಕ್ರಿಕೆಟ್ ವಿಶ್ಲೇಷಕ ಹರ್ಷಾ ಬೋಗ್ಲೆ ಅವರು ಸಹ ತಮ್ಮ ಆಯ್ಕೆ ನಾಲ್ಕು ತಂಡಗಳನ್ನು ಹೆಸರಿಸಿದ್ದಾರೆ. ಇವರ ಆಯ್ಕೆಯ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ, ಕೆಕೆಆರ್, ಎಸ್‌ಆರ್‌ಎಚ್ ಎಂದು ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಆಡಂ ಗಿಲ್‌ಕ್ರಿಸ್ಟ್ ಸಹ ಐಪಿಎಲ್‌ನ ಪ್ಲೇ ಆಫ್‌ಗೆ ಪ್ರವೇಶಿಸುವ ತಂಡಗಳ ಹೆಸರನ್ನು ಬಹಿಂರಗ ಪಡಿಸಿದ್ದಾರೆ. ಇವರ ಪ್ರಕಾರ ಪಂಜಾಬ್ ಕಿಂಗ್ಸ್, ಮುಂಬೈ, ಹೈದರಾಬಾದ್, ಜಿಟಿ ತಂಡಗಳು ಅಂಕ ಪಟ್ಟಿಯಲ್ಲಿ ಅಗ್ರ 4 ಸ್ಥಾನವನ್ನು ಪಡೆಯುತ್ತವೆ ಎಂದು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ವೇಗದ ಬೌಲರ್ ಶಾನ್ ಪೋಲಾಕ್ ಮುಂಬೈ, ಸಿಎಸ್‌ಕೆ, ಎಸ್‌ಆರ್‌ಎಚ್, ಪಂಜಾಬ್ ತಂಡಗಳು ಮುಂದಿನ ಹಂತಕ್ಕೆ ಕ್ವಾಲಿಫೈ ಆಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ಖ್ಯಾತ ಕ್ರಿಕೆಟ್ ಆಟಗಾರ ಸುನಿಲ್ ಗವಾಸ್ಕರ್ ಪುತ್ರ ರೋಹನ್ ಗವಾಸ್ಕರ್, ಆರ್‌ಸಿಬಿ, ಎಸ್‌ಆರ್‌ಎಚ್, ಡಿಸಿ, ಮುಂಬೈ ತಂಡಗಳು ಅಂಕ ಪಟ್ಟಿಯಲ್ಲಿ ಟಾಪ್ 4 ಸ್ಥಾನ ಪಡೆದು ಮುಂದಿನ ಹಂತ ಪ್ರವೇಶಿಸಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಆರ್‌ಸಿಬಿ ತಂಡದಲ್ಲಿ ನವ ಉತ್ಸಾಹ
18ನೇ ಆವೃತ್ತಿಗೆ ಆರ್‌ಸಿಬಿ ತಂಡ ಸಹ ಭರ್ಜರಿ ತಯಾರಿ ನಡೆಸಿದೆ. ಈ ಬಾರಿ ತಂಡವನ್ನು ಯುವ ಆಟಗಾರ ರಜತ್ ಪಾಟಿದಾರ್ ಅವರು ಮುನ್ನಡೆಸಲಿದ್ದಾರೆ. ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ಚೊಚ್ಚಲ ಪ್ರಶಸ್ತಿಯ ಕನಸಿನೊಂದಿಗೆ ಅಂಗಳ ಪ್ರವೇಶಿಸಲಿದೆ. ಈ ಬಾರಿ ಆರ್‌ಸಿಬಿ ಸೇರಿದಂತೆ ಬಹಳಷ್ಟು ತಂಡಗಳು ತಮ್ಮ ನಾಯಕರನ್ನು ಬದಲಾವಣೆ ಮಾಡಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications