For Quick Alerts
ALLOW NOTIFICATIONS  
For Daily Alerts
 

RCB ಪರ ಕಣಕ್ಕೆ ಇಳಿಯಲಿರುವ ಮೊದಲ ಆಯ್ಕೆ ವಿದೇಶಿ ಆಟಗಾರರು ಇವರೇ

ಸೌದಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ತಂಡವನ್ನು ಕಟ್ಟಿದೆ. ಅಲ್ಲದೆ ಈ ಬಾರಿಯ ತಂಡ ಬ್ಯಾಲೆನ್ಸಡ್ ಆಗಿದೆ. ಆರ್‌ಸಿಬಿ ಮ್ಯಾನೇಜ್ಮೆಂಟ್‌ ತಂಡವನ್ನು ಕಟ್ಟು ನಿಟ್ಟಾಗಿ ಕಟ್ಟಿದೆ. ಆರ್‌ಸಿಬಿ ತನ್ನ ಸಾಂಪ್ರದಾಯಿಕ ಟಾಪ್‌ ಆರ್ಡರ್‌ ಬ್ಯಾಟಿಂಗ್ ಲೈನ್‌ ಅಪ್‌ ಟಾರ್ಗೆಟ್‌ ಮಾಡುವುದನ್ನು ಬಿಟ್ಟು, ಸಂಘಟಿತ ತಂಡವನ್ನು ಕಟ್ಟಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ ಎರಡೂ ವಿಭಾಗದಲ್ಲಿ ಈ ಬಾರಿ ಸ್ಟಾರ್‌ ಆಟಗಾರರು ತಂಡದಲ್ಲಿದ್ದು, ಕಪ್‌ ಗೆಲುವಿನ ಭರವಸೆ ಮೂಡಿಸಿದ್ದಾರೆ.

ಆರ್‌ಸಿಬಿ ಬ್ಯಾಟಿಂಗ್‌ ಜೊತೆಗೆ ಈ ಬಾರಿ ಬೌಲಿಂಗ್‌ ವಿಭಾಗಕ್ಕೂ ಒತ್ತು ನೀಡಿದೆ. ಈ ಬಾರಿ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ಬೌಲರ್ಸ್‌ ತಂಡಕ್ಕೆ ಎಲ್ಲ ಸಮಯದಲ್ಲಿ ಅಗತ್ಯ ಕಾಣಿಕೆ ನೀಡಬಲ್ಲವರಾಗಿದ್ದಾರೆ ಎಂದು ಅವರ ಅಂಕಿ ಅಂಶಗಳು ಹೇಳುತ್ತಿವೆ. ಇದರ ಜೊತೆಗೆ ಆರ್‌ಸಿಬಿ ಅಳೆದು ತೂಗಿ ವಿದೇಶಿ ಆಟಗಾರರಿಗೆ ಮಣೆ ಹಾಕಿದೆ. ಹೀಗಾಗಿ ಈ ಬಾರಿ ಆರ್‌ಸಿಬಿ ಮೈದಾನಕ್ಕೆ ಇಳಿಸುವಲ್ಲಿ ಹೆಚ್ಚು ಚಿಂತಿಸುವ ಅಗತ್ಯವಿಲ್ಲ.

IPL 2025 Predicted 4 Overseas Players in RCB s Starting XI

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ಯಾರು ಎಂದು ಇನ್ನು ಘೋಷಣೆ ಆಗಿಲ್ಲ. ಆದರೆ ಟೀಮ್ ಮ್ಯಾನೇಜ್ಮೆಂಟ್ ನಾಯಕನ ಕೆಲಸವನ್ನು ಹರಾಜಿನಲ್ಲಿ ಸುಲಭ ಮಾಡಿದೆ. ಹಾಗಿದ್ದರೆ ಈ ಬಾರಿ ಆರ್‌ಸಿಬಿ ಪರ ಕಾಣಿಸಿಕೊಳ್ಳಲಿರುವ ಮೊದಲ ಆಯ್ಕೆಯ ವಿದೇಶಿ ಆಟಗಾರರ ಪಟ್ಟಿ ಇಲ್ಲಿದೆ.

ಜೋಶ್‌ ಹ್ಯಾಜಲ್‌ವುಡ್

ಆರ್‌ಸಿಬಿ ತನ್ನ ಆಡುವ 12ರ ಬಳಗದಲ್ಲಿ ಮೊದಲ ಆಯ್ಕೆಯ ಬೌಲರ್‌ ಆಗಿ ಜೋಶ್‌ ಹ್ಯಾಜಲ್‌ವುಡ್‌ರನ್ನು ಕಣಕ್ಕೆ ಇಳಿಸಲಿದೆ. ಇವರು ಈಗಾಗಲೇ ಆರ್‌ಸಿಬಿ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೆ ಇವರು ಹೊಸ ಚೆಂಡಿನಿಂದ ಪರಿಣಾಮಕಾರಿ ಬೌಲಿಂಗ್‌ ನಡೆಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಇವರು ಪವರ್‌ ಪ್ಲೇ ಹಾಗೂ ಡೆತ್‌ನ ಕೆಲವು ಓವರ್‌ಗಳಲ್ಲಿ ಬೌಲಿಂಗ್‌ ಮಾಡಿ ತಂಡಕ್ಕೆ ಆಧಾರವಾಗಬಲ್ಲರು.

IPL 2025 Predicted 4 Overseas Players in RCB s Starting XI

ಲಿಯಾಮ್‌ ಲಿವಿಂಗ್‌ಸ್ಟೋನ್‌

ಆರ್‌ಸಿಬಿ ಈ ಬಾರಿ ಇಂಗ್ಲೆಂಡ್‌ ತಂಡದ ಸ್ಟಾರ್ ಆಲ್‌ರೌಂಡರ್‌ ಲಿಯಾಮ್‌ ಲಿವಿಂಗ್‌ಸ್ಟೋನ್‌ಗೆ ಮಣೆ ಹಾಕಿದೆ. ಇವರು ಆರ್‌ಸಿಬಿ ತಂಡಕ್ಕೆ ಮಿಡ್ಲ್‌ ಅರ್ಡರ್‌ನಲ್ಲಿ ತಂಡಕ್ಕೆ ಆಧಾರವಾಗಬಲ್ಲ ಪ್ಲೇಯರ್‌. ಅಲ್ಲದೆ ದಿನೇಶ್‌ ಕಾರ್ತಿಕ್‌ ರಿಂದ ತೆರವಾದ ಫಿನಿಷರ್‌ ರೋಲ್‌ಗೆ ಇವರು ಸೂಕ್ತ ಆಟಗಾರ. ಇವರು ಪವರ್‌ ಫುಲ್‌ ಹಿಟ್ಟಿಂಗ್‌ಗೆ ಹೆಸರುವಾಸಿ. ಇವರು ಮಿಡ್ಲ್‌ ಓವರ್‌ಗಳಲ್ಲಿ ಸ್ಪಿನ್ ದಾಳಿಯನ್ನು ಸಹ ನಡೆಸಬಲ್ಲರು. ಹೀಗಾಗಿ ಆರ್‌ಸಿಬಿ ಇವರಿಗೆ ಮಣೆ ಹಾಕಲಿದೆ.

ವೆಸ್ಟ್‌ ಇಂಡೀಸ್ ಆಟಗಾರನಿಗೆ ಆದ್ಯತೆ

ಆರ್‌ಸಿಬಿ ಈ ಬಾರಿಯ ಹರಾಜಿನಲ್ಲಿ ವಿಂಡೀಸ್‌ ತಂಡದ ರೋಮಿಯೊ ಶೆರ್ಫಡ್‌ ಅವರಿಗೆ ಮಣೆ ಹಾಕಿದೆ. ಇವರು ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ. ವಿಂಡೀಸ್‌ ಪ್ಲೇಯರ್‌ ಹಾಗೂ ಟೀಮ್ ಡೇವಿಡ್‌ ನಡುವೆ ಒಂದು ಸ್ಥಾನಕ್ಕಾಗಿ ಫೈಟ್‌ ನಡೆಯಬಹುದು. ಟೀಮ್ ಡೇವಿಡ್‌ ಒಳ್ಳೆಯ ಆಲ್‌ರೌಂಡರ್‌. ಆದರೆ ಇವರಿಗಿಂತ ಕೊಂಚ ಹೆಚ್ಚಿನ ಕ್ಷಮತೆಯನ್ನು ರೋಮಿಯೋ ಹೊಂದಿದ್ದಾರೆ. ಇವರು ಪವರ್‌ ಹಿಟ್ಟಿಂಗ್‌ ಜೊತೆಗೆ ಡೆತ್‌ ಓವರ್‌ನಲ್ಲಿ ಬೌಲ್‌ ಮಾಡಬಲ್ಲರು. ಹೀಗಾಗಿ ಆರ್‌ಸಿಬಿ ಮೊದಲ ಆಯ್ಕೆಯ ಆಟಗಾರರು ಇವರೇ ಆಗುವ ಸಂಭವವಿದೆ.

ಫಿಲ್‌ ಸಾಲ್ಟ್‌

ಆರ್‌ಸಿಬಿ ಈ ಬಾರಿ ಹರಾಜಿನಲ್ಲಿ ಖರೀದಿಸಿದ ಒಬ್ಬ ಒಳ್ಳೆಯ ಆಟಗಾರ ಎಂದರೆ ಅದು ಫಿಲ್ ಸಾಲ್ಟ್. ಇವರು ಕಳೆದ ಆವೃತ್ತಿಯಲ್ಲಿ ಕೆಕೆಆರ್‌ ಪರ ಆಡಿ ಸೈ ಎನಿಸಿಕೊಂಡಿದ್ದರು. ಇವರಿಗೆ ಭಾರೀ ಮೊತ್ತವನ್ನು ನೀಡಿ ಆರ್‌ಸಿಬಿ ತಂಡಕ್ಕೆ ಸೇರಿಸಿಕೊಂಡಿದೆ. ಇವರು ವಿರಾಟ್‌ ಕೊಹ್ಲಿ ಜೊತೆಗೆ ಇನಿಂಗ್ಸ್‌ ಆರಂಭಿಸಬಲ್ಲರು. ಅಲ್ಲದೆ ಇವರು ವಿಕೆಟ್‌ ಕಾಯ್ದುಕೊಂಡು ಆಡುವ ಕ್ಷಮತೆಯನ್ನು ಹೊಂದಿದ್ದಾರೆ.

Story first published: Saturday, December 7, 2024, 9:00 [IST]
Other articles published on Dec 7, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+