IPL 2025: ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ಉಳಿಸಿಕೊಳ್ಳುವ 3 ಸಂಭಾವ್ಯ ಆಟಗಾರರು
2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಾರಂಭವಾದಾಗಿನಿಂದ ಇರುವ ಫ್ರಾಂಚೈಸಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕೂಡ ಒಂದು.
ತಂಡದಲ್ಲಿ ಘಟಾನುಘಟಿ ಆಟಗಾರರು ಬಂದು ಹೋದರೂ, ಈವರೆಗೆ ಪ್ರಶಸ್ತಿ ವಂಚಿತ ಕೆಲವೇ ತಂಡಗಳಲ್ಲಿ ಆರ್‌ಸಿಬಿ ಕೂಡಾ ಒಂದಾಗಿದೆ. 2009, 2011 ಮತ್ತು 2016ರಲ್ಲಿ ಮೂರು ಬಾರಿ ಫೈನಲ್ ತಲುಪಿತ್ತು.

ಇತ್ತೀಚಿಗೆ 2024ರ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಟಕೀಯ ಋತುವನ್ನು ಹೊಂದಿತ್ತು. ಅಂಕಪಟ್ಟಿಯ ಕೆಳಗಿನ ಸ್ಥಾನದಿಂದ ಆರಂಭವಾಗಿ, ಪ್ಲೇ-ಆಫ್‌ಗೆ ಅರ್ಹತೆ ಪಡೆಯುವವರೆಗೆ, ಆರ್‌ಸಿಬಿ ಪ್ರಯಾಣವು ಯಾವುದೇ ಸ್ಕ್ರಿಪ್ಟ್‌ಗಿಂತ ಕಡಿಮೆಯೇನಿರಲಿಲ್ಲ.
ಆದರೆ, ಆಟಗಾರರ ಪೂರ್ಣ ಹೃದಯದ ಪ್ರಯತ್ನದ ನಂತರವೂ, ಆರ್‌ಸಿಬಿ ತಂಡವು ಪ್ರತಿಷ್ಠಿತ ಐಪಿಎಲ್ ಟ್ರೋಫಿ ಎತ್ತಿಹಿಡಿಯಲು ಸಾಧ್ಯವಾಗಲಿಲ್ಲ. ಅಭಿಮಾನಿಗಳ ಮಟ್ಟಿಗೆ ಅವರ ಚೊಚ್ಚಲ ಟ್ರೋಫಿ ಗೆಲುವಿಗಾಗಿ ಕಾಯುವಿಕೆ ಇದೀಗ 17 ವರ್ಷಗಳವರೆಗೆ ವಿಸ್ತರಿಸಿದೆ.
ಇತರ ತಂಡಗಳಂತೆ, 2025ರ ಆವೃತ್ತಿಗೂ ಮುನ್ನ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಕೂಡ ತಮ್ಮ ತಂಡವನ್ನು ಮರುನಿರ್ಮಾಣ ಮಾಡಲು ನೋಡುತ್ತದೆ. ಆದರೆ 2024ರ ಋತುವಿನಲ್ಲಿ ಆಡಿದ ಕೆಲವು ಆಟಗಾರರು ಈ ಪುನರ್‌ನಿರ್ಮಾಣದ ಭಾಗವಾಗಿರಬಹುದು.

2025ರ ಐಪಿಎಲ್‌ಗಾಗಿ ನಡೆಯುವ ಮೆಗಾ ಹರಾಜಿನ ಮೊದಲು ಆರ್‌ಸಿಬಿ ಉಳಿಸಿಕೊಳ್ಳುವ ಮೂವರು ಆಟಗಾರರ ಪಟ್ಟಿ ಇಲ್ಲಿದೆ.
1. ವಿರಾಟ್ ಕೊಹ್ಲಿ
ಅಲ್ಲದೆ, 2025ರ ಐಪಿಎಲ್‌ಗಾಗಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ಮೊದಲ ಹೆಸರು ವಿರಾಟ್ ಕೊಹ್ಲಿ. ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭದಿಂದಲೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆರ್‌ಸಿಬಿ ಫ್ರಾಂಚೈಸಿಯ ಅವಿಭಾಜ್ಯ ಅಂಗವಾಗಿದ್ದಾರೆ.
ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ಪರ ಮತ್ತು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿ ಆಟಗಾರನಾಗಿ ತಮ್ಮ ದಾಖಲೆ ಕಾಯ್ದುಕೊಂಡಿದ್ದಾರೆ.
ಭಾರತೀಯ ಬ್ಯಾಟಿಂಗ್ ಲೆಜೆಂಡ್ ಇದೀಗ ಆರ್‌ಸಿಬಿ ಫ್ರಾಂಚೈಸಿಯ ಅನಿವಾರ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದ್ದಾರೆ. ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರಾಟ್ ಕೊಹ್ಲಿಯನ್ನು ತಮ್ಮ ಮೊದಲ ಆಯ್ಕೆಯಾಗಿ ಉಳಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.
2. ವಿಲ್ ಜ್ಯಾಕ್ಸ್
2024ರ ಐಪಿಎಲ್‌ನಲ್ಲಿ ಇಂಗ್ಲೆಂಡ್ ಆಲ್‌ರೌಂಡರ್ ವಿಲ್ ಜ್ಯಾಕ್ಸ್ ಉತ್ತಮ ಆರಂಭವನ್ನು ಹೊಂದಿರಲಿಲ್ಲ. ಆದರೆ, ಪಂದ್ಯಾವಳಿಯು ಮುಂದುವರೆದಂತೆ, ವಿಲ್ ಜ್ಯಾಕ್ಸ್ ತನ್ನ ಫಾರ್ಮ್ ಪ್ರದರ್ಶಿಸಿದರು ಮತ್ತು ಆಡುವ 11ರ ಬಳಗದ ಪ್ರಮುಖ ಭಾಗವಾದರು.
ಆರ್‌ಸಿಬಿ ಮ್ಯಾನೇಜ್‌ಮೆಂಟ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವಿಲ್ ಜ್ಯಾಕ್ಸ್ ನಡುವೆ ತಮ್ಮ ಉಳಿಸಿಕೊಳ್ಳುವ ಆಟಗಾರರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ. ಐದು ಆಯ್ಕೆಗಳಿದ್ದರೆ, ಅವರು ಈ ಇಬ್ಬರೂ ಆಟಗಾರರನ್ನು ಉಳಿಸಿಕೊಳ್ಳಬಹುದು.
ಆದಾಗ್ಯೂ, ಭವಿಷ್ಯದ ತಂಡವನ್ನು ನಿರ್ಮಿಸಲು ಬಯಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೊದಲ ಆಯ್ಕೆಯ ರೀಟೆನ್ ಸ್ಫೋಟಕ ಬ್ಯಾಟರ್ ವಿಲ್ ಜ್ಯಾಕ್ಸ್ ಆಗಿರಲಿದ್ದಾರೆ.
3. ರಜತ್ ಪಾಟಿದಾರ್
ವಿಲ್ ಜ್ಯಾಕ್ಸ್ ಅವರಂತೆಯೇ, ರಜತ್ ಪಾಟಿದಾರ್ ಕೂಡ ಐಪಿಎಲ್ 2024ರಲ್ಲಿ ಉತ್ತಮ ಆರಂಭವನ್ನು ಹೊಂದಿರಲಿಲ್ಲ. ಆದರೆ, ಪಂದ್ಯಾವಳಿಯ ದ್ವಿತೀಯಾರ್ಧದಲ್ಲಿ ಫಾರ್ಮ್ ಮರಳಿ ಪಡೆಯಲು ಪ್ರಾರಂಭಿಸಿದರು ಮತ್ತು ಬ್ಯಾಟ್‌ನೊಂದಿಗೆ ಅವರ ಕೊಡುಗೆಗಳು ಆರ್‌ಸಿಬಿ ತಂಡದ ನಾಟಕೀಯ ಓಟದ ಹಿಂದಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
ಭಾರತೀಯ ಮಧ್ಯಮ ಕ್ರಮಾಂಕದ ಬ್ಯಾಟರ್ ಲೀಗ್‌ನಲ್ಲಿ ಅಮೂಲ್ಯ ಆಸ್ತಿಯಾಗಿರುವುದರಿಂದ, ಆರ್‌ಸಿಬಿ ಖಂಡಿತವಾಗಿಯೂ ರಜತ್ ಪಾಟಿದಾರ್ ಅವರನ್ನು ತಮ್ಮ ಕೋರ್ ತಂಡದ ಭಾಗವಾಗಿ ಇರಿಸಿಕೊಳ್ಳಲು ಪ್ರಯತ್ನಿಸುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications