PBKS vs LSG IPL 2025: ಧರ್ಮಶಾಲಾದಲ್ಲಿ ಪಂಜಾಬ್, ಲಕ್ನೋ ಕದಾಟ: ಪಂತ್ ಮೇಲೆ ಎಲ್ಲರ ಚಿತ್ತ
ಇಂಡಿಯನ್ ಪ್ರೀಮಿಯರ್ ಲೀಗ್ ರೋಚಕ ಘಟ್ಟದತ್ತ ಮುಖ ಮಾಡಿದೆ. ಈಗ ಎಲ್ಲ ತಂಡಗಳು ಪ್ಲೇ ಆಫ್ ಲೆಕ್ಕಾಚಾರವನ್ನು ಆರಂಭಿಸಿವೆ. ಭಾನವುರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಪ್ಲೇ ಆಫ್‌ಗೆ ಹತ್ತಿರವಾಗಲು ಪಂಜಾಬ್ ಪ್ಲ್ಯಾನ್ ಮಾಡಿಕೊಂಡರೆ, ಲಕ್ನೋ ಈ ಪಂದ್ಯದಲ್ಲಿ ಜಯ ಸಾಧಿಸಿ ಮುಂದಿನ ಹಂತದ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಇರಾದೆಯನ್ನು ಹೊಂದಿದೆ.
ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದು ರೋಚಕತೆ ಹೆಚ್ಚಿಸಿದೆ. ಪಂಜಾಬ್ ಕಿಂಗ್ಸ್ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಹೊಂದಿದೆ. ಆಡಿದ 10 ಪಂದ್ಯಗಳಲ್ಲಿ 6 ಜಯ ಸಾಧಿಸಿದ್ದು, 13 ಅಂಕ ಕಲೆ ಹಾಕಿದೆ. ಇನ್ನು ಲಕ್ನೋ ತಂಡ 10 ಪಂದ್ಯಗಳಲ್ಲಿ 10 ಅಂಕ ಕಲೆ ಹಾಕಿದೆ. ಲಕ್ನೋ ತಂಡಕ್ಕೆ ಪ್ಲೇ ಆಫ್‌ಗೆ ಪ್ರವೇಶಿಸಲು ಈ ಪಂದ್ಯ ಮಹತ್ವದಾಗಿದೆ.

ಪಂಜಾಬ್‌ಗೆ ಯುವಕರೇ ಆಸರೆ
ಪಂಜಾಬ್ ಕಿಂಗ್ಸ್ ತಂಡಕ್ಕೆ ಯುವ ಆಟಗಾರರೇ ಆಸರೆ ಆಗಿದ್ದಾರೆ. ಪ್ರಿಯಾಂಶ್ ಆರ್ಯ ಈಗಾಗಲೇ ಟೂರ್ನಿಯಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದಾರೆ. ಇನ್ನು ಪ್ರಭಸಿಮ್ರನ್ ಸಿಂಗ್ ಸಹ ಸ್ಥಿರವಾಗಿ ರನ್‌ಗಳನ್ನು ಕಲೆ ಹಾಕುತ್ತಿದ್ದು ಭರವಸೆ ಮೂಡಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್, ನೇಹಾಲ್ ವಧೇರಾ, ಶಶಾಂಕ್ ಸಿಂಗ್, ಜೋಶ್ ಇಂಗ್ಲಿಷ್, ತಮ್ಮ ಘನತೆಗೆ ತಕ್ಕ ಆಟವನ್ನು ಆಡಿದ್ದೇ ಆದಲ್ಲಿ ದೊಡ್ಡ ಮೊತ್ತದ ಕನಸು ಕಾಣಬಹುದಾಗಿದೆ.
ಪಂಜಾಬ್ ತಂಡದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಲಯದಲ್ಲಿದ್ದಾರೆ. ಇವರು ಎದುರಾಳಿ ಬ್ಯಾಟರ್‌ಗಳಿಗೆ ಪವರ್ ಪ್ಲೇನಲ್ಲಿ ಕಾಟ ನೀಡುವ ಕ್ಷಮತೆಯನ್ನು ಹೊಂದಿದ್ದಾರೆ. ಇನ್ನು ಮಾರ್ಕೋ ಜಾನ್ಸನ್ ಸಹ ತಮ್ಮ ಬಿಗುವಿನ ದಾಳಿಯ ಮೂಲಕ ಬ್ಯಾಟರ್‌ಗಳಿಗೆ ಕಾಡಬಲ್ಲರು. ಸ್ಪಿನ್ ಬೌಲರ್ ಯುಜುವೇಂದ್ರ ಚಹಾಲ್ ಲಯಕ್ಕೆ ಮರಳಿದ್ದು, ಮ್ಯಾನೇಜ್ಮೆಂಟ್ ಟೆನ್ಷನ್ ದೂರ ಮಾಡಿದೆ. ಉಳಿದ ಬೌಲರ್‌ಗಳು ಇವರಿಗೆ ಉತ್ತಮ ಸಾಥ್ ನೀಡಿದ್ದೇ ಆದಲ್ಲಿ ಗೆಲುವಿನ ಆಸೆ ಫಲಿಸುತ್ತದೆ.

ಅನುಭವಿಗಳೇ ಆದಾರ
ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಅನುಭವಿಗಳೇ ಆಧಾರ. ಐಡೇನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್ ತಂಡಕ್ಕೆ ಭರ್ಜರಿ ಓಪನಿಂಗ್ ನೀಡಬಲ್ಲರು. ಇನ್ನು ಮಧ್ಯಮ ಕ್ರಮಾಂಕದ ಆಧಾರ ಸ್ಥಂಬ ನಿಕೋಲಸ್ ಪೂರನ್ ರನ್‌ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಪ್ಲೇಯರ್. ಇನ್ನು ಮಿಡ್ಲ್ ಓವರ್‌ಗಳಲ್ಲಿ ಆಯುಷ್ ಬದೋನಿ ಸಹ ಕಮಾಲ್ ಮಾಡಬಲ್ಲ ಆಟಗಾರ. ತಂಡದ ಉಳಿದ ಆಟಗಾರರು ಸ್ಥಿರ ಪ್ರದರ್ಶನದ ಮೇಲೆ ಒತ್ತು ನೀಡಿದರೆ ಎರಡು ಪೂರ್ಣ ಅಂಕ ಕಲೆ ಹಾಕಬಹುದು. ಇನ್ನು ರವಿ ಬಿಷ್ಣೋಯಿ ಹಾಗೂ ದಿಗ್ವೇಶ್ ರಾಠಿ ಸ್ಪಿನ್ ಜಾದು ನಡೆಸಬೇಕಿದೆ. ವೇಗದ ಬೌಲಿಂಗ್ ವಿಭಾಗದಲ್ಲಿ ಮಯಾಂಕ್ ಯಾದವ್, ಆವೇಶ್ ಖಾನ್, ಪ್ರಿನ್ಸ್ ಯಾದವ್ ಬಿಗುವಿನ ದಾಳಿ ನಡೆಸಿ ಎದುರಾಳಿಗಳಿಗೆ ಕಾಟ ನೀಡಬೇಕಿದೆ. ಅಂದಾಗ ಗೆಲುವಿನ ಆಸೆ ಚಿಗುರುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications