Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ಕೆಕೆಆರ್ ವಿರುದ್ಧ ಪಂದ್ಯಕ್ಕೂ ಮುನ್ನ ಪಂಜಾಬ್ ವೇಗಿ ಔಟ್

ಐಪಿಎಲ್ 18ನೇ ಸೀಸನ್‌ನ ಉತ್ಸಾಹ ಅಭಿಮಾನಿಗಳಲ್ಲಿ ಮುಂದುವರೆದಿದೆ. ಈ ಬಾರಿ ಆನೇಕ ಆಟಗಾರರು ಲೀಗ್‌ನ ಮಧ್ಯದಲ್ಲಿ ಗಾಯದಿಂದ ಮರಳಿದರೆ, ಕೆಲವರು ಹೊರಗುಳಿದಿದ್ದಾರೆ. ಈಗ ಪಂಜಾಬ್ ಕಿಂಗ್ಸ್ ತಂಡಕ್ಕೆ ಗಾಯದ ಸಮಸ್ಯೆ ಕಾಡಿದ್ದು, ಸ್ಟಾರ್ ವೇಗದ ಬೌಲರ್ ಲೀಗ್‌ನಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ವರದಿಗಳಾಗಿವೆ.

ಇಂದು ಅಂದರೆ, ಮಂಗಳವಾರ ಐಪಿಎಲ್ 2025 ರ 31ನೇ ಪಂದ್ಯದಲ್ಲಿ ಕೋಲ್ಕತ್ತಾ ನೈರ್ಟ್ ರೈಡರ್ಸ್ ತಂಡವನ್ನು ಪಂಜಾಬ್ ಕಿಂಗ್ಸ್ ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ತನ್ನ ಸ್ಟಾರ್ ವೇಗದ ಬೌಲರ್ ಅನ್ನು ಕಳೆದುಕೊಂಡಿದೆ. ಈ ಬಗ್ಗೆ ಪಂಜಾಬ್ ಕಿಂಗ್ಸ್ ಬೌಲಿಂಗ್ ಕೋಚ್ ಜೇಮ್ಸ್ ಹೋಪ್ಸ್ ಮಾಹಿತಿ ನೀಡಿದ್ದಾರೆ.

IPL 2025 Punjab Kings fast bowler out before match against Kolkata Knight Riders

ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಪಂಜಾಬ್ ತಂಡದ ವೇಗದ ಬೌಲರ್ ಲಾಕಿ ಫರ್ಗುಸನ್ ಗಾಯಗೊಂಡಿದ್ದಾರೆ. ಇದರಿಂದಾಗಿ ಅವರು ಐಪಿಎಲ್ 2025 ರಲ್ಲಿ ಮತ್ತೆ ಆಡುವುದನ್ನು ಕಾಣದಿರಬಹುದು ಎಂದು ಜೇಮ್ಸ್ ಹೋಪ್ಸ್ ಹೇಳಿದ್ದಾರೆ. ಪಂಜಾಬ್ ಕಿಂಗ್ಸ್ ತಂಡವು ಫರ್ಗುಸನ್ ಅವರಿಗೆ ನಿರಂತರವಾಗಿ ಅವಕಾಶಗಳನ್ನು ನೀಡುತ್ತಿತ್ತು. ಆದರೆ ಈಗ ಫರ್ಗುಸನ್ ಅವರಿಗೆ ಬದಲಿ ಆಟಗಾರರನ್ನು ಪಂಜಾಬ್ ಹುಡುಕಬೇಕಾಗಿದೆ.

ಕಳೆದ ವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಫರ್ಗುಸನ್ ಕೇವಲ ಎರಡು ಎಸೆತಗಳನ್ನು ಎಸೆದು ಮೈದಾನದಿಂದ ಹೊರಗುಳಿದಿದ್ದರು. ಅವರು ತಮ್ಮ ಎಡಗಾಲಿಗೆ ಗಾಯ ಮಾಡಿಕೊಂಡಿದ್ದರು. ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೋಚ್ ಗಾಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಫರ್ಗುಸನ್ ಅವರನ್ನು ಮಿಸ್ ಮಾಡಿಕೊಂಡಿತು. ಪರಿಣಾಮ ಪಂಜಾಬ್ ತಂಡವು 245 ರನ್ ಗಳಿಸಿದ ನಂತರವೂ ಸೋಲನ್ನು ಎದುರಿಸಬೇಕಾಯಿತು.

ಲಾಕಿ ಫರ್ಗುಸನ್ ಲೀಗ್ ಕೊನೆಯ ಹಂತದಲ್ಲೂ ತಂಡಕ್ಕೆ ಮರಳುವ ಭರವಸೆ ಕಡಿಮೆ. ಅವರಿಗೆ ತೀವ್ರವಾಗಿ ಗಾಯವಾಗಿದೆ. ಕೊನೆಯ ಪಂದ್ಯ ನಮಗೆ ನಿರಾಶಾದಾಯಕವಾಗಿತ್ತು. ಇದರಲ್ಲಿ ಬಹಳಷ್ಟು ರನ್ ಗಳಿಸಲಾಗುತ್ತದೆ ಎಂದು ನಮಗೆ ತಿಳಿದಿತ್ತು, ನಾವು ಕೂಡ ದೊಡ್ಡ ಸ್ಕೋರ್ ಗಳಿಸಿದ್ದೇವೆ. ಆದರೆ ಕ್ಯಾಚ್‌ಗಳನ್ನು ಕೈಬಿಟ್ಟ ಕಾರಣ ಸೋಲನ್ನು ಎದುರಿಸಬೇಕಾಯಿತು. ನಾವು ಇಲ್ಲಿಯವರೆಗೆ 12 ಕ್ಯಾಚ್‌ಗಳನ್ನು ಕೈಬಿಟ್ಟಿದ್ದೇವೆ. ಅವರು ಕ್ಯಾಚ್‌ಗಳನ್ನು ಹಿಡಿದಿದ್ದರೆ ಪಂದ್ಯ ಗೆಲ್ಲುತ್ತಿದ್ದವು ಎಂದು ಜೇಮ್ಸ್ ಹೋಪ್ಸ್ ತಿಳಿಸಿದ್ದಾರೆ.

Story first published: Tuesday, April 15, 2025, 9:02 [IST]
Other articles published on Apr 15, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+