ಆಪರೇಷನ್ ಸಿಂಧೂರ್ ಇಂಪ್ಯಾಕ್ಟ್: ಐಪಿಎಲ್ ಪಂದ್ಯ ಶಿಫ್ಟ್
ಭಾರತದಲ್ಲಿ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್‌ಗಳು ನಡೆಯುತ್ತಿವೆ. ಈ ಮಧ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಘ್ನ ಪರಿಸ್ಥಿತಿ ಮುಂದುವರೆದಿದೆ. ಇನ್ನು ಭಾರತ, ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ಉಗ್ರರರು ನಡೆಸಿದ ದಾಳಿಗೆ ಪ್ರತಿಯಾಗಿ ಪಾಕ್‌ನ 9 ಕಡೆಗೆಗಳಲ್ಲಿ ಕ್ಷಿಪಣಿ ದಾಳಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಭಾರತ ಗಡಿಗಳಲ್ಲಿ ಭಾರೀ ಭಧ್ರತೆಯನ್ನು ಹೆಚ್ಚಿಸಲಾಗಿದೆ. ಈ ಆಂಪರೇಷನ್ ಸಿಂಧೂರ್‌ದ ಇಂಪ್ಯಾಕ್ಟ್ ನೇರವಾಗಿ ಕ್ರಿಕೆಟ್ ಮೈದಾನದ ಮೇಲೂ ಬಿದ್ದಿದೆ.
ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯ ಅಹಮದಾಬಾದ್‌ಗೆ ಶಿಫ್ಟ್ ಆಗಿದೆ. ಈ ಪಂದ್ಯ ಮೇ 11 ರಂದು ನಡೆಯಬೇಕಿತ್ತು. ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಅನಿಲ್ ಪಟೇಲ್ ತಿಳಿಸಿದ್ದಾರೆ. ಈ ಬಗ್ಗೆ ಬಿಸಿಸಿಐ ನಮ್ಮಲ್ಲಿ ಕೇಳಿಕೊಂಡಿತ್ತು. ನಾವು ಒಪ್ಪಿಗೆಯನ್ನು ನೀಡಿದ್ದಾಗು ಅನಿಲ್ ಪಟೇಲ್ ಹೇಳಿದ್ದಾರೆ.

ಇನ್ನು ಧರ್ಮಶಾಲಾದಲ್ಲಿ ಪಂದ್ಯ ಸ್ಥಳಾಂತರವಾದಗ ಮುಂಬೈ ವಾಂಖೇಡೆ ಅಂಗಳವನ್ನು ಇನ್ನೊಂದು ಆಯ್ಕೆಯಾಗಿ ಇಟ್ಟುಕೊಳ್ಳಲಾಗಿತ್ತು. ಆದರೆ ಒಂದು ತಂಡಕ್ಕೆ ಇದರಿಂದ ತವರಿನ ಲಾಭ ಸಿಗುತ್ತದೆ ಎಂದು ಭಾವಿಸಿ, ಅಹಮದಾಬಾದ್‌ಗೆ ಶಿಫ್ಟ್ ಮಾಡಲಾಗಿದೆ. ಮೂಲಗಳ ಪ್ರಕಾರ ಪಂಜಾಬ್ ಕಿಂಗ್ಸ್ ನವದೆಹಲಿಗೆ ಬಂದು ಅಲ್ಲಿಂದ ಅಹಮದಾಬಾದ್‌ಗೆ ಪ್ರಯಾಣವನ್ನು ಬೆಳೆಸಲಿದೆ. ಭದ್ರತಾ ಕಾರಣಗಳಿಗಾಗಿ, ಧರ್ಮಶಾಲಾ ವಿಮಾನ ನಿಲ್ದಾಣವನ್ನು ಸದ್ಯಕ್ಕೆ ಮುಚ್ಚಲಾಗಿದೆ, ಅಂದರೆ ತಂಡಗಳು ಧರ್ಮಶಾಲಾವನ್ನು ಸುಲಭವಾಗಿ ತಲುಪಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಈ ಪಂದ್ಯವನ್ನು ಶಿಫ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮೇ 11 ರಂದು ಪಂಜಾಬ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಇದಕ್ಕೂ ಮೊದಲು ಮೇ 8 ರಂದು ಪಂಜಾಬ್ ಡೆಲ್ಲಿ ವಿರುದ್ಧ ಪಂದ್ಯವನ್ನು ಆಡಲಿದೆ. ಈ ಪಂದ್ಯ ಮುಗಿದ ಬಳಿಕ ಉಳಿದ ಪಂದ್ಯಗಳನ್ನು ತಟಸ್ಥ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ. ಅಹಮದಾಬಾದ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ತವರು ಅಲ್ಲ. ಹೀಗಾಗಿ ಈ ಮೈದಾನವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಉಳಿದಂತೆ ಐಪಿಎಲ್ ವೇಳಾಪಟ್ಟಿಯಲ್ಲಿ ಯಾವುದೇ ಹೆಚ್ಚಿನ ಬದಲಾವಣೆ ಮಾಡಲಾಗಿಲ್ಲ. ಆದರೆ ಮುಂದಿನ ಬದಲಾವಣೆಗಳು ಇದ್ದಲ್ಲಿ ಬಿಸಿಸಿಐ ಅಪ್‌ಡೇಟ್ ನೀಡುವುದಾಗಿ ತಿಳಿಸಿದೆ.
ಐಪಿಎಲ್ ರದ್ದಾಗುತ್ತದಾ?
ಭಾರತ ಹಾಗೂ ಪಾಕಿಸ್ತಾನದ ನಡುವಿನ ಉದ್ವಿಘ್ನತೆಯನ್ನು ನೋಡಿದಾಗ ಇಂಡಿಯನ್ ಪ್ರೀಮಿಯರ್ ಲೀಗ್ ರದ್ದಾಗುತ್ತದಾ ಎಂಬ ಸಂಶಯಗಳು ಸಹ ಹೆಚ್ಚಿಕೊಂಡಿವೆ. ಐಪಿಎಲ್ ವೇಳಾಪಟ್ಟಿ ಮೇ 25ರ ವರೆಗೆ ನಡೆಯಲಿದೆ. ಅಂತಿಮ ಪಂದ್ಯವನ್ನು ಮೇ 25 ರಂದು ಆಡಿಸಲು ತೀರ್ಮಾನಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯು ಭದ್ರತಾ ಸಂಸ್ಥೆಗಳು ಮತ್ತು ಬಿಸಿಸಿಐಗೆ ಎಚ್ಚರಿಕೆ ನೀಡಿದೆ. ಈ ಪರಿಸ್ಥಿತಿಯಲ್ಲಿ ಬಿಸಿಸಿಐ ಹಾಗೂ ಐಪಿಎಲ್ ಕಾರ್ಯಕಾರಿಣಿ ಮಂಡಳಿ ಪ್ಲ್ಯಾನ್ ಬಿ ಮೇಲೆ ಕೆಲಸ ಮಾಡುತ್ತಿದೆ.
ಆಟಗಾರರ ಸುರಕ್ಷತೆಯ ಬಗ್ಗೆ ಕಳವಳ
ಇನ್ನು ಐಪಿಎಲ್ ಅಂದರೆ ಬರೀ ಒಂದೇ ದೇಶದ ಆಟಗಾರರು ಆಡುವ ಲೀಗ್ ಅಲ್ಲ. ವಿಶ್ವದ ನಾನಾ ದೇಶಗಳ ಸ್ಟಾರ್ ಆಟಗಾರರು ಈ ಲೀಗ್‌ನಲ್ಲಿ ಭಾಗವಹಿಸುತ್ತಾರೆ. ಹೀಗಾಗಿ ಪರಿಸ್ಥಿತಿ ಹದಗೆಟ್ಟರೆ ವಿದೇಶಿ ಆಟಗಾರರ ಸುರಕ್ಷತೆ ಮೊದಲ ಕರ್ತವ್ಯ ಆಗಿರಲಿದೆ. ಉಭಯ ದೇಶಗಳ ನಡುವೆ ಪರಿಸ್ಥಿತಿ ದಿನೇ ದಿನೇ ಇದೇ ರೀತಿ ಆದರೆ ಹಲವು ದೇಶದ ಆಟಗಾರರ ತವರಿನತ್ತ ಸಹ ಮುಖ ಮಾಡಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications