For Quick Alerts
ALLOW NOTIFICATIONS  
For Daily Alerts
 

Rajat Patidar: ಆರ್‌ಸಿಬಿ ಕ್ಯಾಪ್ಟನ್ ರಜತ್ ಪಾಟಿದಾರ್ ವೈಯಕ್ತಿಕ ಜೀವನ ಹೀಗಿದೆ..

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಟೂರ್ನಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಹೊಸ ನಾಯಕರಾಗಿ ರಜತ್ ಪಾಟಿದಾರ್ ನೇಮಕಗೊಂಡಿದ್ದಾರೆ. ಇದು ಪಾಟಿದಾರ್ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ವಿರಾಟ್ ಕೊಹ್ಲಿ ಮತ್ತೊಮ್ಮೆ ಆರ್‌ಸಿಬಿ ತಂಡಕ್ಕೆ ನಾಯಕತ್ವ ವಹಿಸಬಹುದು ಎಂದು ಊಹಿಸಲಾಗಿತ್ತು. ಆದರೆ, ಆರ್‌ಸಿಬಿ ಫ್ರಾಂಚೈಸಿ ರಜತ್ ಪಟಿದಾರ್ ಅವರನ್ನು 8ನೇ ಹೊಸ ನಾಯಕನನ್ನಾಗಿ ನೇಮಿಸಿದೆ.

ರಜತ್ ಪಾಟಿದಾರ್ ಆರ್‌ಸಿಬಿ ತಂಡದ ನಾಯಕನಾಗುತ್ತಿದ್ದಂತೆ ಅವರ ವೈಯಕ್ತಿಕ ಜೀವನ, ಸಂಪತ್ತು ಮತ್ತು ಆಸ್ತಿಗಳ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ರಜತ್ ಪಾಟಿದಾರ್ ಅವರ ವೈಯಕ್ತಿಕ ಬದುಕಿನ ಬಗ್ಗೆ ಇಲ್ಲಿದೆ ಮಾಹಿತಿ.

IPL 2025 Rajat Patidar Personal Life Wealth and Assets Details

ರಜತ್ ಪಾಟಿದಾರ್ 1 ಜೂನ್ 1993 ರಂದು ಇಂದೋರ್‌ನಲ್ಲಿ ಜನಿಸಿದರು. ರಜತ್ ಪಾಟಿದಾರ್ ಅವರ ತಂದೆಯ ಹೆಸರು ಮನೋಹರ್ ಪಾಟಿದಾರ್. ತಾಯಿ ಗೃಹಿಣಿ. ರಜತ್‌ಗೆ ಮಹೇಂದ್ರ ಪಾಟಿದಾರ್ ಮತ್ತು ಸುನೀತಾ ಪಾಟಿದಾರ್ ಎಂಬ ಇಬ್ಬರು ಸಹೋದರರು ಮತ್ತು ಸಹೋದರಿಯರಿದ್ದಾರೆ. ಮನೋಹರ್ ಪಾಟಿದಾರ್ ಇಂದೋರ್‌ನಲ್ಲಿ ಉದ್ಯಮಿ ಆಗಿದ್ದಾರೆ.

ರಜತ್ ಪಟಿದಾರ್ ತಮ್ಮ ಎಂಟನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ರಜತ್ ಆಫ್-ಸ್ಪಿನ್ ಬೌಲರ್ ಆಗಿದ್ದರು. ಅಂಡರ್-15 ಹಂತದ ನಂತರ ಅವರು ಹೆಚ್ಚು ಬ್ಯಾಟಿಂಗ್ ಕಡೆ ಗಮನ ಹರಿಸಿದರು. ಅವಕಾಶ ಸಿಕ್ಕಗೆಲ್ಲಾ ಅಬ್ಬರಿಸಿದ ಪಾಟಿದಾರ್ ಕಠಿಣ ಪರಿಶ್ರಮದಿಂದ ಟೀಮ್ ಇಂಡಿಯಾದಲ್ಲಿ ಆಡುವ ಕನಸನ್ನು ನನಸಾಗಿಸಿಕೊಂಡರು.

ಪಾಟಿದಾರ್ ಅವರ ಐಪಿಎಲ್ ಪ್ರಯಾಣವು 2021 ರಲ್ಲಿ ಆರ್‌ಸಿಬಿಯೊಂದಿಗೆ ಪ್ರಾರಂಭವಾಯಿತು. ಐಪಿಎಲ್ 2022ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪ್ಲೇ-ಆಫ್‌ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸುವ ಮೂಲಕ ಭಾರೀ ಸದ್ದು ಮಾಡಿದ್ದರು. ಈ ಅದ್ಭುತ ಇನ್ನಿಂಗ್ಸ್ ಅವರನ್ನು ಆರ್‌ಸಿಬಿಯ ಸ್ಟಾರ್ ಆಟಗಾರನನ್ನಾಗಿ ಮಾಡಿತು. ಹೀಗೆ ತಂಡದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಕಾರಣವಾಯಿತು. ತವರಿನಲ್ಲಿ ಇಂಗ್ಲೆಂಡ್ ವಿರುದ್ಧ 2024 ರಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ ಪರ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದರು.

ಐಪಿಎಲ್‌ನಿಂದ ಬಂದಿದ್ದೆಷ್ಟು?

ರಜತ್ ಪಾಟಿದಾರ್ ಕ್ರಿಕೆಟ್ ಆಟದಿಂದ ಕೋಟ್ಯಾಂತರ ರೂಪಾಯಿ ಆದಾಯ ಗಳಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಅವರ ಐಪಿಎಲ್ ವೇತನ ಹೆಚ್ಚುತ್ತಿರುವುದೇ ಇದಕ್ಕೆ ಸಾಕ್ಷಿ. ಐಪಿಎಲ್ 2022ರ ಸಂದರ್ಭದಲ್ಲಿ ರಜತ್ 20 ಲಕ್ಷ ರೂ. ಪಡೆದಿದ್ದರು. ನಂತರ 2023ರ ಆವೃತ್ತಿಯಲ್ಲಿ 20 ಲಕ್ಷ ಮತ್ತು ಐಪಿಎಲ್ 2024ರಲ್ಲಿ 50 ಲಕ್ಷ ರೂ.ಗಳನ್ನು ಗಳಿಸಿದ್ದರು. ಆದರೆ, ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿ ಪಾಟಿದಾರ್ ಅವರಿಗೆ ಸುಮಾರು 11 ಕೋಟಿ ರೂ. ನೀಡಿ ಉಳಿಸಿಕೊಂಡಿತ್ತು. ಇದು ಕೂಡ ಅವರ ಆದಾಯ ಗಳಿಕೆ ಹೆಚ್ಚಲು ಕಾರಣವಾಗಿದೆ. ಬಿಸಿಸಿಐನ ಗ್ರೇಡ್ ಸಿ ಒಪ್ಪಂದದ ಭಾಗವಾಗಿರುವ ರಜತ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ವಾರ್ಷಿಕ 1 ಕೋಟಿ ರೂ. ಗಳಿಸುತ್ತಿದ್ದಾರೆ.

ಮದುವೆ ಮುಂದೂಡಿಕೆ!

ರಜತ್ ಪಾಟಿದಾರ್ ಜುಲೈ 2022 ರಲ್ಲಿ ಮಧ್ಯಪ್ರದೇಶದ ರತ್ಲಂ ಮೂಲದ ಹುಡುಗಿಯನ್ನು ವಿವಾಹವಾದರು. ಮೊದಲು ರಜತ್ ಪಾಟಿದಾರ್ ಮೇ 2022 ರಲ್ಲಿ ಮದುವೆಯಾಗಬೇಕಿತ್ತು. ಆದರೆ ಅದೇ ಸಮಯದಲ್ಲಿ ಅವರನ್ನು ಆರ್‌ಸಿಬಿ ತಂಡದಲ್ಲಿ ಬದಲಿ ಆಟಗಾರನಾಗಿ ಸೇರಿಸಿಕೊಂಡಿತ್ತು. ಆರ್‌ಸಿಬಿಯಿಂದ ಕರೆ ಬಂದ 24 ಗಂಟೆಗಳಲ್ಲಿ ರಜತ್ ಪಾಟಿದಾರ್ ತಮ್ಮ ಮದುವೆಯನ್ನು ಮುಂದೂಡಿದರು. ಆದಾಗ್ಯೂ, ಐಪಿಎಲ್ 2022ರ ಆವೃತ್ತಿ ಮುಗಿದ ಬಳಿಕ ರಜತ್ ಪಟಿದಾರ್ ಜುಲೈ 2022 ರಲ್ಲಿ ವಿವಾಹವಾದರು.

Story first published: Thursday, February 13, 2025, 16:37 [IST]
Other articles published on Feb 13, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+