ಮುಂಬೈ ಇಂಡಿಯನ್ಸ್‌ಗೆ ಐಪಿಎಲ್ 2025ರ ಟ್ರೋಫಿ ಗೆಲ್ಲುವುದು ಕಷ್ಟದ ಕೆಲಸವಲ್ಲ. ಏಕೆಂದರೆ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಅಳೆದು ತೂಗಿ ಸ್ಟಾರ್ ಆಟಗಾರರನ್ನು ಬಿಡ್ ಮಾಡುವ ಮೂಲಕ ಬಲಿಷ್ಠ ತಂಡವನ್ನು ಕಟ್ಟಿದೆ. ಈಗ ಮಂಬೈ ತಂಡಕ್ಕೆ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಫೋಟಕ ಆಲ್‌ರೌಂಡರ್ ಎಂಟ್ರಿ ಕೊಟ್ಟಿದ್ದಾರೆ.
ಮುಂಬೈ ಕ್ಯಾಂಪ್ ಸೇರಿರುವ ಆರ್‌ಸಿಬಿ ಆಲ್‌ರೌಂಡರ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅತ್ಯಂತ ಅಪಾಯಕಾರಿ. ಈ ಆಟಗಾರನ ಆಗಮನದೊಂದಿಗೆ ಮುಂಬೈ ಇಂಡಿಯನ್ಸ್ ಆರನೇ ಐಪಿಎಲ್ ಟ್ರೋಫಿ ಖಚಿತವಾದಂತಿದೆ. ಈ ಸ್ಫೋಟಕ ಆಲ್‌ರೌಂಡರ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಹೊಸ ಶಕ್ತಿ ತುಂಬಲಿದ್ದಾರೆ. 2024ರಲ್ಲಿ ಈ ಆಟಗಾರ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಕಳೆದ ಆವೃತ್ತಿಯಲ್ಲಿ ಈ ಆಟಗಾರ ಆರ್‌ಸಿಬಿ ಪರ ಬಿರುಸಿನ ಬ್ಯಾಟಿಂಗ್ ಮಾಡುವ ಮೂಲಕ ಶತಕ ಬಾರಿಸಿ ಮಿಂಚಿದ್ದರು. ಈಗ ಮುಂಬೈ ಪರ ಅಬ್ಬರಿಸಲು ಸಜ್ಜಾಗಿದ್ದಾರೆ.

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಇಂಗ್ಲೆಂಡ್‌ನ ಅಪಾಯಕಾರಿ ಆಲ್‌ರೌಂಡರ್ ವಿಲ್ ಜ್ಯಾಕ್ಸ್ ಅವರನ್ನು 5.25 ಕೋಟಿ ರೂ.ಗೆ ಖರೀದಿಸಿದೆ. ವಿಲ್ ಜ್ಯಾಕ್ಸ್ ಐಪಿಎಲ್ 2024ರಲ್ಲಿ ಆರ್‌ಸಿಬಿ ಆಡಿದ್ದರು. ಆದರೆ, ಅವರನ್ನು ಆರ್‌ಸಿಬಿ ಉಳಿಸಿಕೊಂಡಿರಲಿಲ್ಲ. ಹೀಗಾಗಿ ಮೆಗಾ ಹರಾಜಿನಲ್ಲಿ ವಿಲ್ ಜ್ಯಾಕ್ಸ್ ಅವರನ್ನು ಬಿಡ್ ಮಾಡುವಲ್ಲಿ ಮುಂಬೈ ಇಂಡಿಯನ್ಸ್ ಯಶಸ್ವಿಯಾಯಿತು. ವಿಲ್ ಜ್ಯಾಕ್ಸ್ ಆಗಮನದಿಂದ ಮುಂಬೈ ಇಂಡಿಯನ್ಸ್‌ನ ಬಲಾಬಲ ಹತ್ತು ಪಟ್ಟು ಹೆಚ್ಚಾಗಿದೆ.
ಐಪಿಎಲ್ 2024ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ವಿಲ್ ಜ್ಯಾಕ್ಸ್ ಕೇವಲ 41 ಎಸೆತಗಳಲ್ಲಿ 5 ಬೌಂಡರಿ ಮತ್ತು 10 ಸಿಕ್ಸರ್ ನೆರವಿನಿಂದ 100 ರನ್ ಗಳಿಸಿದ್ದರು. ಆರ್‌ಸಿಬಿ ಪರ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ವಿಲ್ ಜ್ಯಾಕ್ಸ್ ಬಿರುಸಿನ ಶತಕವನ್ನು ಸಿಡಿಸಿದ್ದರು. ವಿಲ್ ಜ್ಯಾಕ್ಸ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಇದುವರೆಗೆ 8 ಪಂದ್ಯಗಳನ್ನು ಆಡಿದ್ದು, 175.57 ಸ್ಟ್ರೈಕ್ ರೇಟ್ ಮತ್ತು 32.86 ರ ಸರಾಸರಿಯಲ್ಲಿ 230 ರನ್ ಗಳಿಸಿದ್ದಾರೆ. ಇದಲ್ಲದೆ, 2 ವಿಕೆಟ್ ಅನ್ನು ಪಡೆದಿದ್ದಾರೆ.
ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ತಿಲಕ್ ವರ್ಮಾ, ಟ್ರೆಂಟ್ ಬೌಲ್ಟ್, ನಮನ್ ಧೀರ್, ರಾಬಿನ್ ಮಿಂಜ್, ಕರ್ಣ್ ಶರ್ಮಾ, ರಿಯಾನ್ ರಿಕಲ್ಟನ್, ದೀಪಕ್ ಚಾಹರ್, ಅಲ್ಲಾ ಘಜನ್ಫರ್, ವಿಲ್ ಜಾಕ್ವೆಸ್, ಅಶ್ವಿನಿ ಕುಮಾರ್, ಮಿಚೆಲ್ ಸ್ಯಾಂಟ್ನರ್, ರೀಸ್ ಟೋಪ್ಲಿ, ರಾಜ್ ಅಂಗದ್ ಬಾವಾ, ಸತ್ಯನಾರಾಯಣ ರಾಜು, ಬೆವನ್ ಜೇಕಬ್ಸ್, ಅರ್ಜುನ್ ತೆಂಡೂಲ್ಕರ್.