ಜುಲೈ 21 ಭಾನುವಾರ, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗಾಗಿ
ಈ ವರ್ಷ ಮೆಗಾ ಹರಾಜು ನಡೆಯಲಿದೆ. ಅದಕ್ಕೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳುವ ಕುರಿತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿಯಮಗಳನ್ನು ಹೊರಡಿಸಬೇಕಿದೆ.
ಬಿಸಿಸಿಐ ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳೊಂದಿಗೆ ಮಾತುಕತೆ ನಡೆಸಿದೆ. ಆದರೆ ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಈ ಬಾರಿಯ ಮೆಗಾ ಹರಾಜಿನಿಂದಾಗಿ ಹಲವು ಪ್ರಮುಖ ಬದಲಾವಣೆಗಳು ಕಂಡುಬರಲಿವೆ.

ಆಟಗಾರರು ಖಂಡಿತವಾಗಿಯೂ ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಬದಲಾಗಲಿದ್ದಾರೆ. ಇದರೊಂದಿಗೆ ಕೆಲವು ತಂಡಗಳ ನಾಯಕರೂ ಬದಲಾಗುವ ಸಾಧ್ಯತೆ ಇದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಕೂತಹಲ ಹೆಚ್ಚಿಸಿದೆ.
ಕಳೆದ ವರ್ಷ ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡಿತ್ತು. ತಂಡದ ಪ್ರದರ್ಶನ ಕಳಪೆಯಾಗಿದ್ದು, 10ನೇ ಸ್ಥಾನಕ್ಕೇರಿತು. ಇದರ ಹೊರತಾಗಿಯೂ, ಫ್ರಾಂಚೈಸ್ ಹಾರ್ದಿಕ್ ಅವರನ್ನು ನಾಯಕನಾಗಿ ಮುಂದುವರೆಸಲು ನಿರ್ಧಾರಿಸಿದೆ ಎನ್ನಲಾಗುತ್ತಿದೆ.
ಆದರೆ ಕಳೆದ ಕೆಲವು ದಿನಗಳಲ್ಲಿ ಎಲ್ಲವೂ ಬದಲಾಗಿದೆ. ಸೂರ್ಯಕುಮಾರ್ ಯಾದವ್ ಭಾರತಕ್ಕೆ ಟಿ20 ನಾಯಕರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸೂರ್ಯ ಕೂಡ ಮುಂಬೈ ತಂಡದ ನಾಯಕನಾಗುವ ಸಾಧ್ಯತೆ ಇದೆ.
ಇದಕ್ಕೂ ಈ ಬಾರಿ ಎಂಐ ಫ್ರಾಂಚೈಸಿ ಯಾವೆಲ್ಲಾಆಟಗಾರರನ್ನು ತಂಡದಿಂದ ಹೊರ ಇಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಒಂದು ವೇಳೆ ಹಾರ್ದಿಕ್ ಅವರನ್ನು ನಾಯಕನಾಗಿ ಇರಿಸಿದರೆ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ತೆಗೆದುಹಾಕಬೇಕಾಗಬಹುದು. ಹಾರ್ದಿಕ್ ಅವರನ್ನು ಬಿಟ್ಟರೆ ಸೂರ್ಯಕುಮಾರ್ ಮುಂಬೈಗೆ ನಾಯಕನಾಗಬಹುದು.
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಸ್ಟಾರ್ ವಿಕೆಟ್‌ಕೀಪರ್- ಬ್ಯಾಟರ್ ರಿಷಬ್ ಪಂತ್ ಜೊತೆಗೆ ಸಂತೋಷವಾಗಿಲ್ಲ. ಪಂತ್ ಅವರನ್ನು ಉಳಿಸಿಕೊಳ್ಳಬೇಕೇ ಅಥವಾ ಬೇಡವೇ ಎಂದು ತಂಡ ಯೋಚಿಸುತ್ತಿದೆ.
ಆದರೂ ಪಂತ್‌ಗೆ ಡೆಲ್ಲಿ ತಂಡದ ನಿರ್ದೇಶಕ ಸೌರವ್ ಗಂಗೂಲಿ ಬೆಂಬಲ ಸಿಕ್ಕಿದೆ. ಪಂತ್ ಅವರನ್ನು ನಾಯಕನಾಗಿ ಇರಲು ದಾದಾ ಬೆಂಬಲ ನೀಡಿದ್ದಾರೆ. ಈಗ ಡೆಲ್ಲಿ ತಂಡ ಪಂತ್ ಅವರನ್ನು ನಾಯಕರನ್ನಾಗಿ ಇರಿಸುತ್ತದೆಯೇ ಅಥವಾ ಅವರನ್ನು ಕೈಬಿಡುತ್ತದೆಯೇ ಎಂಬುದು ಅನುಮಾನವಾಗಿದೆ.
ಲಕ್ನೋದಂತೆ ಡೆಲ್ಲಿ ಫ್ರಾಂಚೈಸಿ ಕೂಡ ರೋಹಿತ್ ಶರ್ಮಾ ಅವರನ್ನು ನಾಯಕನಾಗಿ ನೋಡಲು ಬಯಿಸುತ್ತಿದೆ. ಈಗ ಹಿಟ್‌ಮ್ಯಾನ್ ಡೆಲ್ಲಿ ಪರ ಆಡಲು ಸಾಧ್ಯವೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.
ಡೆಲ್ಲಿ ಕ್ಯಾಪಿಟಲ್ಸ್‌ನಂತೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೂಡ ನಾಯಕನನ್ನು ಬದಲಾಯಿಸಲು ಯೋಚಿಸುತ್ತಿದೆ. ಲಕ್ನೋ ನಾಯಕ ಕೆಎಲ್ ರಾಹುಲ್ ತಂಡವನ್ನು ತೊರೆದು ಬೇರೆ ತಂಡ ಸೇರಬಹುದು ಎನ್ನಲಾಗುತ್ತಿದೆ.
ಲಕ್ನೋ ಫ್ರಾಂಚೈಸಿ ಮತ್ತು ರಾಹುಲ್ ನಡುವಿನ ಸಂಬಂಧ ಈಗ ಉತ್ತಮವಾಗಿಲ್ಲ. ಕಳೆದ ಋತುವಿನಲ್ಲಿ ತಂಡದ ಮಾಲೀಕ ಸಂಜೀವ್ ಗೊಯೆಂಕಾ ಮತ್ತು ರಾಹುಲ್ ನಡುವೆ ಮೈದಾನದಲ್ಲಿಯೇ ತೀವ್ರ ವಾಗ್ವಾದ ನಡೆದಿತ್ತು.
ಈ ವಿಡಿಯೋ ಕೂಡ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಲಕ್ನೋ ತಂಡ ರೋಹಿತ್ ಶರ್ಮಾ ಮೇಲೆ ಕಣ್ಣಿಟ್ಟಿದೆ. ಮುಂಬೈ ತಂಡ ಅವರನ್ನು ಉಳಿಸಿಕೊಳ್ಳದಿದ್ದರೆ, ಲಕ್ನೋ ರೋಹಿತ್ ಅವರನ್ನು ಖರೀದಿಸಲು ದೊಡ್ಡ ಮೊತ್ತವನ್ನು ನೀಡಬಹುದು.
ಐಪಿಎಲ್‌ನಲ್ಲಿ ಕ್ರೇಜ್ ಹುಟ್ಟಿ ಹಾಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಂಬರುವ ಆವೃತ್ತಿಯಲ್ಲಿ ಹೊಸ ನಾಯಕನೊಂದಿಗೆ ಪ್ರವೇಶಿಸಬಹುದು. ಫಾಫ್ ಡುಪ್ಲೆಸಿಸ್ ನಾಯಕತ್ವದಲ್ಲಿಯೂ ತಂಡಕ್ಕೆ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ.
ಹೀಗಾಗಿ ಫ್ರಾಂಚೈಸಿಯು ಭಾರತೀಯ ಆಟಗಾರರನ್ನು ತಂಡದ ನಾಯಕನ್ನಾಗಿ ಮಾಡಲು ನೋಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಎಲ್ ರಾಹುಲ್ ತಂಡಕ್ಕೆ ಅತ್ಯುತ್ತಮ ಆಯ್ಕೆಯಾಗಿದ್ದಾರೆ.
ಕನ್ನಡಿಗ ರಾಹುಲ್ ಅವರು ಕರ್ನಾಟಕದವರೆ ಆಗಿದ್ದು, ಈ ಹಿಂದೆ ಆರ್‌ಸಿಬಿ ಪರ ಆಡಿದ್ದಾರೆ. ಅಷ್ಟೇ ಅಲ್ಲದೆ ರಾಹುಲ್ ಮಾಜಿ ನಾಯಕ ವಿರಾಟ್ ಕೊಹ್ಲಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಒಂದು ವೇಳೆ ರಾಹುಲ್ ಆರ್‌ಸಿಬಿ ನಾಯಕನಾದರೆ ಅಭಿಮಾನಿಗಳಲ್ಲಿ ಮತ್ತಷ್ಟು ಸಂಭ್ರಮ ಮನೆ ಮಾಡಲಿದೆ.