2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಗೆ ಮುಂಚಿತವಾಗಿ ಕರ್ನಾಟಕದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಅವರು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಫ್ರಾಂಚೈಸಿಯಿಂದ ತವರಿನ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ (ಆರ್‌ಸಿಬಿ) ಫ್ರಾಂಚೈಸಿಗೆ ಮರಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇದರ ಸುತ್ತಲಿನ ಮಾತುಕತೆಯು ಪ್ರಸ್ತುತ ಬಹಳ ಆರಂಭಿಕ ಹಂತದಲ್ಲಿದೆ ಮತ್ತು ಭವಿಷ್ಯದಲ್ಲಿ ಏನಾಗಬಹುದು ಎಂದು ಯಾರಿಗೂ ತಿಳಿದಿಲ್ಲ ಎಂದು ಮೂಲಗಳು ತಿಳಿಸಿವೆ.

ಕೆಎಲ್ ರಾಹುಲ್ 2022ರಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮೊದಲ ಎರಡು ವರ್ಷ ಪ್ಲೇಆಫ್ ಪ್ರವೇಶಿಸಿದ್ದರೆ, ಆದರೆ 2024ರ ಐಪಿಎಲ್‌ನಲ್ಲಿ ಎಲ್‌ಎಸ್‌ಜಿ ತಂಡವು ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕಿಳಿಯಿತು.
ಕೆಎಲ್ ರಾಹುಲ್ 2013 ಮತ್ತು 2016ರಲ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ್ದಾರೆ. 2016ರ ಐಪಿಎಲ್‌ನಲ್ಲಿ ಆಡಿದ 14 ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಅರ್ಧ ಶತಕಗಳನ್ನು ಒಳಗೊಂಡಂತೆ 397 ರನ್ ಗಳಿಸುವುದರೊಂದಿಗೆ, ಆರ್‌ಸಿಬಿ ತಂಡವು ಆ ವರ್ಷ ರನ್ನರ್-ಅಪ್ ಆಗಿ ಮುಗಿಸಿತ್ತು.
ಮೂಲಗಳ ಪ್ರಕಾರ, ತಮ್ಮ ತಂಡದಲ್ಲಿ ಸ್ಥಳೀಯ ಆಟಗಾರನನ್ನು ಹೊಂದಲು ಆರ್‌ಸಿಬಿ ಉತ್ಸುಕವಾಗಿದೆ. ಜೊತೆಗೆ ಮುಂಬರುವ ಆವೃತ್ತಿಗೆ ನಾಯಕತ್ವದ ಜವಾಬ್ದಾರಿ ತೆಗೆದುಕೊಳ್ಳಬಹುದಾದ ಆಟಗಾರನನ್ನು ಹೊಂದಿದ್ದು, ಪ್ರಸ್ತುತ ವಿಕೆಟ್ ಕೀಪಿಂಗ್ ಅನ್ನು ಸಹ ಕೆಎಲ್ ರಾಹುಲ್ ನಿಭಾಯಿಸಬಲ್ಲರು.

ಮತ್ತೊಂದೆಡೆ, ಐಪಿಎಲ್ 2025ರ ಮೆಗಾ ಹರಾಜಿಗೆ ಮುಂಚಿತವಾಗಿ ರಿಷಭ್ ಪಂತ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಹೋಗುವ ಸಾಧ್ಯತೆಯಿದೆ ಎಂಬ ಊಹಾಪೋಹಗಳಿಗೆ ವಿರುದ್ಧವಾಗಿ, ವಿಕೆಟ್ ಕೀಪರ್-ಬ್ಯಾಟರ್ ಫ್ರಾಂಚೈಸಿಯೊಂದಿಗೆ ಉಳಿಯುತ್ತಾರೆ ಎಂದು ಮೂಲಗಳು ತಿಳಿಸಿವೆ.
ಶನಿವಾರ ಬೆಳಿಗ್ಗೆಯಿಂದ, ವಿವಿಧ ಮಾಧ್ಯಮಗಳು ಡೆಲ್ಲಿ ಕ್ಯಾಪಿಟಲ್ಸ್ ನಾಯಕರೂ ಆಗಿರುವ ರಿಷಭ್ ಪಂತ್ ಅವರು ಫ್ರಾಂಚೈಸಿಯನ್ನು ತೊರೆಯುವ ಸಾಧ್ಯತೆಯಿದೆ ಎಂದು ವರದಿ ಮಾಡಿದ್ದವು.
ಲೆಜೆಂಡ್ ಎಂಎಸ್ ಧೋನಿ ಅವರ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಕ್ಕೆ ಹೋಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಮೂಲಗಳ ಪ್ರಕಾರ, ರಿಷಭ್ ಪಂತ್ ಇನ್ನೂ ಡೆಲ್ಲಿ ಕ್ಯಾಪಿಟಲ್ಸ್ ಜೊತೆಯಲ್ಲಿದ್ದಾರೆ.
ಕಳೆದ ಕೆಲವು ಸೀಸನ್‌ಗಳಲ್ಲಿ ತಂಡಕ್ಕೆ ಪ್ರಮುಖರಾಗಿರುವ ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅವರೊಂದಿಗೆ ರಿಷಭ್ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಅವರನ್ನು ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
ಬಾಂಗ್ಲಾದೇಶದಲ್ಲಿ ನಡೆದ ಪುರುಷರ ಅಂಡರ್-19 ವಿಶ್ವಕಪ್ ಕ್ವಾರ್ಟರ್‌ಫೈನಲ್‌ನಲ್ಲಿ ನಮೀಬಿಯಾ ವಿರುದ್ಧ 197 ರನ್‌ಗಳ ಗೆಲುವು ಸಾಧಿಸಿದ ದಿನದಂದು ಭಾರತದ ಪರ 96 ಎಸೆತಗಳಲ್ಲಿ 111 ರನ್ ಗಳಿಸಿದರು. 2016ರಲ್ಲಿ ನಡೆದ ಹರಾಜಿನಲ್ಲಿ ರಿಷಭ್ ಪಂತ್ ಅವರು ಫ್ರಾಂಚೈಸಿಯೊಂದಿಗೆ ಸಹಿ ಹಾಕಿದರು.
ಅಲ್ಲಿಂದೀಚೆಗೆ, ರಿಷಭ್ ಪಂತ್ ಆಡಿದ 111 ಪಂದ್ಯಗಳಲ್ಲಿ 148.93ರ ಸ್ಟ್ರೈಕ್ ರೇಟ್ ಮತ್ತು 35.31ರ ಸರಾಸರಿಯಲ್ಲಿ 3284 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 18 ಅರ್ಧಶತಕಗಳನ್ನು ಬಾರಿಸಿದ್ದಾರೆ. ಫ್ರಾಂಚೈಸಿ ಅಭಿಮಾನಿ ಬಳಗದಿಂದ ಪಂತ್ ಅಪಾರ ಅನುಯಾಯಿಗಳನ್ನು ಗಳಿಸಿದ್ದಾರೆ.
ರಿಷಭ್ ಪಂತ್ ಐಪಿಎಲ್ 2021, 2022 ಮತ್ತು 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದಾರೆ. ಇನ್ನು ರಿಕಿ ಪಾಂಟಿಂಗ್ ನಿರ್ಗಮನದ ನಂತರ ಹೊಸ ಮುಖ್ಯ ಕೋಚ್‌ಗಾಗಿ ಹುಡುಕಾಟ ನಡೆಸುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ 75 ಕ್ಯಾಚ್ ಮತ್ತು 38 ಸ್ಟಂಪಿಂಗ್‌ಗಳನ್ನು ವಿಕೆಟ್‌ಕೀಪರ್ ಆಗಿ ಮಾಡಿದ್ದಾರೆ.
ಆಟಗಾರರ ಬಿಡುಗಡೆ ಜೊತೆಗೆ ಉಳಿಸಿಕೊಂಡ ಆಟಗಾರರ ಸಂಬಳ ಮತ್ತು ಒಟ್ಟಾರೆ ಪರ್ಸ್ ಮೌಲ್ಯ ಅಥವಾ ರೈಟ್ ಟು ಮ್ಯಾಚ್ (ಆರ್‌ಟಿಎಂ) ಆಯ್ಕೆಯು ಮೆಗಾ ಹರಾಜಿನಲ್ಲಿ ಲಭ್ಯವಿರುತ್ತದೆಯೇ ಎಂಬುದರ ಕುರಿತು ಇನ್ನೂ ಯಾವುದೇ ಅಧಿಕೃತ ಮಾತುಗಳಿಲ್ಲ.
ಸದ್ಯಕ್ಕೆ ಎಲ್ಲ ಕಣ್ಣುಗಳು ಈ ತಿಂಗಳ ಕೊನೆಯಲ್ಲಿ (ಜುಲೈ 30ರಂದು) ಬಿಸಿಸಿಐ ಜೊತೆಗಿನ ಎಲ್ಲಾ ಹತ್ತು ಫ್ರಾಂಚೈಸಿ ಮಾಲೀಕರ ಸಭೆಯ ಮೇಲೆ ಇರುತ್ತದೆ. ನಂತರ ಉಳಿಸಿಕೊಂಡಿರುವ ಆಟಗಾರರ ಸಲ್ಲಿಕೆ ಗಡುವು ಮತ್ತು ವ್ಯಾಪಾರದ ಅವಧಿಯವರೆಗೆ ನಂತರದ ತಿಂಗಳುಗಳ ಬಿರುಸಿನ ಚಟುವಟಿಕೆಗಳು ನಡೆಯಲಿವೆ.