Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ಹೇಗಿದೆ RCB ಕ್ವಾಲಿಫೈಯರ್ ಲೆಕ್ಕಾಚಾರ?

ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಕ್ವಾಲಿಫೈಯರ್‌ನಲ್ಲಿ ಆಡುವ ಕನಸು ಕಾಣುತ್ತಿದೆ. ಈ ಪಂದ್ಯದಲ್ಲಿ ಆಡಲು ಆರ್‌ಸಿಬಿ ಮುಂದಿನ ಪಂದ್ಯವನ್ನು ಗೆದ್ದರೆ ಸಾಕಾಗುತ್ತದೆ. ಆರ್‌ಸಿಬಿ ಮುಂದಿನ ಹಾದಿ ಹೇಗಿರಲಿದೆ? ಆರ್‌ಸಿಬಿ ಮುಂದಿನ ಪಂದ್ಯದ ಫಲಿತಾಂಶ ಪ್ಲೇ ಆಫ್‌ ರೇಸ್‌ ಮೇಲೆ ಎಷ್ಟು ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ವರದಿ ಇಲ್ಲಿದೆ.

ಸೋಮವಾರ ಮುಂಬೈ ಇಂಡಿಯನ್ಸ್‌ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ಅಗ್ರ ಸ್ತಾನವನ್ನು ಪಡೆಯುತ್ತದೆ. ಮುಂಬೈ ಇಂಡಿಯನ್ಸ್‌ ಈ ಪಂದ್ಯದಲ್ಲಿ ಜಯ ಸಾಧಿಸಿದರೆ, 18 ಅಂಕಗಳೊಂದಿಗೆ ಅಗ್ರ ಸ್ಥಾನ ಪಡೆಯುತ್ತದೆ. ಕಾರಣ ಗುಜರಾತ್‌ ಟೈಟಾನ್ಸ್‌ಗಿಂತಲೂ ಮುಂಬೈ ರನ್‌ ರೇಟ್‌ ಚೆನ್ನಾಗಿದೆ. ಇನ್ನು ಪಂಜಾಬ್‌ ಕಿಂಗ್ಸ್‌ ಗೆದ್ದಲ್ಲಿ ನೇರವಾಗಿ ಅಗ್ರ ಸ್ಥಾನವನ್ನು ಪಡೆಯುತ್ತದೆ. ಕಾರಣ ಪಂಜಾಬ್‌ ಬುಟ್ಟಿಯಲ್ಲಿ 19 ಅಂಕಗಳು ಆಗುತ್ತವೆ. ಆರ್‌ಸಿಬಿ ಬುಟ್ಟಿಯಲ್ಲಿ 17 ಅಂಕಗಳು ಇದ್ದು 2 ಅಂಕಕ್ಕಾಗಿ ಮಂಗಳವಾರ ಹೋರಾಟವನ್ನು ನಡೆಸಲಿದೆ.

IPL 2025 RCB Eyes Qualifier Spot with Crucial Win Against LSG

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಸ್ಥಿರವಾಗಿದೆ. ಈ ಬಾರಿಯ ಲೀಗ್‌ನಲ್ಲಿ ಎಲ್ಲ ಆಟಗಾರರು ತಮ್ಮ ಜವಾಬ್ದಾರಿ ಮರೆತು ಆಡಿದ್ದು ತಂಡಕ್ಕೆ ವರವಾಗಿದೆ. ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್‌, ಜೋಶ್‌ ಹ್ಯಾಜಲ್‌ವುಡ್‌, ಯಶ್‌ ದಯಾಳ್‌, ಸುಯೇಶ್ ಶರ್ಮಾ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಆಟವಾಡಿದ್ದಾರೆ. ಎಲ್‌ಎಸ್‌ಜಿ ವಿರುದ್ಧ ಜಯ ಸಾಧಿಸಿದರೆ, ಆರ್‌ಸಿಬಿ ಸುಲಭವಾಗಿ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯುತ್ತದೆ.

ಆರ್‌ಸಿಬಿ ಬುಟ್ಟಿಯಲ್ಲಿ ಸದ್ಯ 17 ಅಂಕಗಳಿವೆ. ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಗೆಲ್ಲುವುದು ಆರ್‌ಸಿಬಿಗೆ ಅನಿವಾರ್ಯವಾಗಿದೆ. ಅಂದಾಗ ಮಾತ್ರ ಆರ್‌ಸಿಬಿ ಕ್ವಾಲಿಫೈಯರ್‌ನಲ್ಲಿ ಕಾದಾಟ ನಡೆಸಲಿದೆ. ಮಂಗಳವಾರ ಲಕ್ನೋನಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ಗೆದ್ದಲ್ಲಿ ಮೊದಲೆರೆಡು ಸ್ಥಾನದಲ್ಲಿ ಒಂದು ಸ್ಥಾನ ಫಿಕ್ಸ್ ಆಗುತ್ತದೆ. ಆರ್‌ಸಿಬಿ ತಂಡ ಈ ನಿಟ್ಟಿನಲ್ಲಿ ರಣತಂತ್ರವನ್ನು ರೂಪಿಸಿಕೊಂಡಿದೆ. ಆರ್‌ಸಿಬಿ ತಂಡದ ಗೆಲುವಿನ ಜೋಶ್‌ ಹೆಚ್ಚಿಸಲು ಜೋಶ್‌ ಹ್ಯಾಜಲ್‌ವುಡ್‌ ಸಹ ಪಾರ್ಟಿಗೆ ಜಾಯಿನ್‌ ಆಗಿದ್ದಾರೆ. ಇವರು ತಂಡಕ್ಕೆ ಆಗಮಿಸಿದ್ದರಿಂದ ತಂಡದ ಮನೋಬಲ ಹೆಚ್ಚಿದೆ.

IPL 2025 RCB Eyes Qualifier Spot with Crucial Win Against LSG

ಗೆಲುವೊಂದೆ ಟಾರ್ಗೆಟ್‌

ಆರ್‌ಸಿಬಿ, ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಗೆಲುವೊಂದೆ ಮಾನದಂಡ ಎಂಬಂತೆ ಆಟವಾಡಬೇಕಿದೆ. ಸ್ಟಾರ್ ಆಟಗಾರರು ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಆಡಿದರೆ ಗೆಲುವಿನ ಆಸೆ ಚಿಗುರುತ್ತದೆ. ಆರಂಭಿಕ ಫಿಲ್ ಸಾಲ್ಟ್ ಫಾರ್ಮ್‌ಗೆ ಮರಳಿರುವುದು ತಂಡಕ್ಕೆ ಬೂಸ್ಟ್‌ ನೀಡಿದೆ. ವಿರಾಟ್ ಕೊಹ್ಲಿ, ರಜತ್ ಪಾಟಿದಾರ್‌, ಮಯಾಂಕ್ ಅಗರ್‌ವಾಲ್‌, ಜಿತೇಶ್‌ ಶರ್ಮಾ ತಮ್ಮ ಘನತೆಗೆ ತಕ್ಕ ಆಟವನ್ನು ಆಡಬೇಕಿದೆ. ಇನ್ನು ವೇಗದ ಬೌಲರ್‌ಗಳು ಹಾಗೂ ಸ್ಪಿನ್ ಬೌಲರ್‌ಗಳು ಮಹತ್ವದ ಪಂದ್ಯದಲ್ಲಿ ಸರಿಯಾದ ಸ್ಥಳದಲ್ಲಿ ಬೌಲಿಂಗ್ ನಡೆಸಿದರೆ ಕ್ವಾಲಿಫೈಯರ್‌ಗೆ ಸುಲಭವಾಗಿ ಕ್ವಾಲಿಫೈ ಆಗಬಹುದು.

Story first published: Monday, May 26, 2025, 12:14 [IST]
Other articles published on May 26, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+