ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಮಾರ್ಚ್22 ರಿಂದ ಐಪಿಎಲ್ 2025ರ ಟೂರ್ನಿ ಶುರುವಾಗುತ್ತಿದ್ದು, ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಎದುರಿಸಲಿದೆ. ಐಪಿಎಲ್ 2025ರಲ್ಲಿ ಆರ್‌ಸಿಬಿ ತಂಡದ ಮೇಲೆ ಅಭಿಮಾನಿಗಳು ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.
ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಎದುರು ಕಣಕ್ಕಿಳಿಯಲಿರುವ ಹಾಲಿ ಚಾಂಪಿಯನ್ಕೆಕೆಆರ್ ಕೂಡ ಬಲಿಷ್ಠವಾಗಿದೆ. ಕೆಕೆಆರ್ ತಂಡವನ್ನು ಕಟ್ಟಿ ಹಾಕುವುದು ಆರ್‍ಸಿಬಿ ತಂಡಕ್ಕೂ ಸವಾಲಾಗಬಹುದು. ಆದರೆ ಆರ್‍ಸಿಬಿ ಎದುರು ಕೆಕೆಆರ್ ಗೆಲುವು ಸುಲಭವಿಲ್ಲ. ಕೆಕೆಆರ್ ಮಣಿಸಲು ಆರ್ಸಿಬಿ ಪ್ಲೇಯಿಂಗ್-11 ಹೀಗಿದೆ.

ಐಪಿಎಲ್‌ನಲ್ಲಿ ಮೊದಲ ಬಾರಿಗೆ ಆರ್‍ಸಿಬಿ ತಂಡವನ್ನು ಮುನ್ನಡೆಸಲು ರಜತ್ ಪಾಟಿದಾರ್ ಸಜ್ಜಾಗಿದ್ದಾರೆ. ರಜತ್ ಪಾಟಿದಾರ್ ಅವರಿಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಬೆಂಬಲವಿದೆ. ಇದರೊಂದಿಗೆ ಆರ್‍ಸಿಬಿ ತಂಡ ಈ ಬಾರಿ ಚಾಂಪಿಯನ್ ಆಗುವ ನಿರೀಕ್ಷೆಯಲ್ಲಿದೆ. ಈ ವರ್ಷ ಹೊಸ ಆರ್‍ಸಿಬಿ ತಂಡದಲ್ಲಿ ಅನುಭವಿ ಆಟಗಾರರ ದಂಡೇ ಇದೆ.
ಆರ್‍ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ಸ್ಟಾರ್ ವಿಕೆಟ್‌ಕೀಪರ್ಬ್ಯಾಟರ್ ಫಿಲ್ ಸಾಲ್ಟ್ಇನ್ನಿಂಗ್ಸ್ ತೆರೆಯಲು ರೆಡಿಯಾಗಿದ್ದಾರೆ. ನಾಯಕ ರಜತ್ ಪಾಟಿದಾರ್ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಬಲಿಷ್ಠ ಮಿಡಲ್ಆರ್ಡರ್ ಹೊಂದಿರುವ ಆರ್‍ಸಿಬಿ ತಂಡದಲ್ಲಿಬಿಗ್ ಹಿಟ್ಟರ್ಸ್ ಇದ್ದಾರೆ. ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್ ಮತ್ತು ಕೃನಾಲ್ ಪಾಂಡ್ಯ ಆರ್‍ಸಿಬಿ ತಂಡಕ್ಕೆ ಫಿನಿಶರ್ ಪಾತ್ರ ನಿರ್ವಹಿಸಬಹುದು. ಇನ್ನೂ ಆರ್‍ಸಿಬಿ ಪರ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಜಿತೇಶ್ ಶರ್ಮಾ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಬಹುದು.
ಆರ್‍ಸಿಬಿ ಬಲಿಷ್ಠ ಬ್ಯಾಟಿಂಗ್ ಲೈನ್ ಆಫ್ ಹೊಂದಿದ್ದರೂ, ಬೌಲಿಂಗ್ ವೀಕ್ ಆಗಿತ್ತು. ಆದರೆ ಐಪಿಎಲ್ 2025ರ ಟೂರ್ನಿಗೆ ಆರ್‍ಸಿಬಿ ಅಮೋಘ ಬೌಲಿಂಗ್ ಲೈನ್ ಅನ್ನು ಹೊಂದಿದೆ. ಆರ್‍ಸಿಬಿ ಬೌಲಿಂಗ್ವಿಭಾಗವನ್ನು ವೇಗಿ ಭುವನೇಶ್ವರ್ ಕುಮಾರ್ ಮುನ್ನಡೆಸಲಿದ್ದಾರೆ. ಭುವಿಗೆ ಜೋಶ್ಹೇಜಲ್ವುಡ್ ಕೂಡ ಸಾಥ್ ನೀಡಲಿದ್ದು, ಇವರಿಗೆ ಯುವ ವೇಗಿಗಳಾದ ಯಶ್ ದಯಾಳ್ ಮತ್ತು ರಸಿಕ್ ಸಲಾಂ ಜೊತೆಯಾಗಲಿದ್ದಾರೆ. ಇದಲ್ಲದೆ, ಆಲ್‌ರೌಂಡರ್ ಕೃನಾಲ್ ಪಾಂಡ್ಯಾ ಜೊತೆಗೆ ಸುಯಾಶ್ ಶರ್ಮಾ ಸ್ಪಿನ್ ದಾಳಿ ನಡೆಸಲು ತಂತ್ರ ರೂಪಿಸಿದ್ದಾರೆ.
ಆರ್‍ಸಿಬಿ ಪ್ಲೇಯಿಂಗ್-11: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ಹೇಜಲ್‌ವುಡ್, ಸುಯಾಶ್ ಶರ್ಮಾ.
ವಿರಾಟ್ ಕೊಹ್ಲಿ ಆರ್‌ಸಿಬಿ ತಂಡವನ್ನು ಮೊದಲ ಬಾರಿಗೆ ಚಾಂಪಿಯನ್ ಮಾಡಲು ಉತ್ಸುಕರಾಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಆರ್‍ಸಿಬಿ ತಂಡ ಮೂರು ಬಾರಿ ಫೈನಲ್ ತಲುಪಿದೆ, ಒಂದೇ ಒಂದು ಟ್ರೋಫಿಯನ್ನು ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ. ಮೂರು ಬಾರಿಯೂ ರನ್ನರ್ ಅಪ್ ಆಗಿ ತೃಪ್ತಿಪಡಬೇಕಾಯಿತು. ಐಪಿಎಲ್ 2024ರಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಇದಕ್ಕಾಗಿ ಅವರು ಆರೆಂಜ್ ಕ್ಯಾಪ್ ಪ್ರಶಸ್ತಿಯನ್ನು ಸಹ ಗೆದ್ದಿದ್ದರು. ಕೊಹ್ಲಿ 15 ಪಂದ್ಯಗಳಲ್ಲಿ 61.75 ಸರಾಸರಿಯಲ್ಲಿ 741 ರನ್ ಗಳಿಸಿದ್ದರು, ಇದರಲ್ಲಿ 1 ಶತಕ ಮತ್ತು 5 ಅರ್ಧಶತಕಗಳು ಸೇರಿವೆ.