For Quick Alerts
ALLOW NOTIFICATIONS  
For Daily Alerts
 

Rajat Patidar: ರಜತ್ ಎಷ್ಟನೇ ಆರ್‌ಸಿಬಿ ನಾಯಕ?; ಅತಿಹೆಚ್ಚು ವರ್ಷ ತಂಡ ಮುನ್ನಡೆಸಿದ್ಯಾರು?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಟೂರ್ನಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಯಾರು ಮುನ್ನಡೆಸುತ್ತಾರೆ ಎಂಬುದು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿತ್ತು. ಆರ್‌ಸಿಬಿ ತಂಡದ ನಾಯಕನ ಸ್ಥಾನಕ್ಕೆ ಹಲವು ಸ್ಟಾರ್ ಆಟಗಾರರ ಕೇಳಿ ಬಂದಿತ್ತು. ವಿರಾಟ್ ಕೊಹ್ಲಿ ಮತ್ತೊಮ್ಮೆ ಆರ್‌ಸಿಬಿ ತಂಡಕ್ಕೆ ನಾಯಕತ್ವ ವಹಿಸುತ್ತಾರೆ ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಆದರೆ ಪ್ರತಿ ಬಾರಿಯೂ ಅಚ್ಚರಿ ನಿರ್ಧಾರಗಳನ್ನು ತೆಗೆದುಕೊಳ್ಳವಲ್ಲಿ ಹೆಸರುವಾಸಿಯಾಗಿರುವ ಆರ್‌ಸಿಬಿ ಫ್ರಾಂಚೈಸಿ ಹೊಸ ಪ್ರತಿಭೆಗೆ ಮಣೆ ಹಾಕಿದೆ.

ಐಪಿಎಲ್ 2025 ರಲ್ಲಿ ಆರ್‌ಸಿಬಿ ತಂಡವನ್ನು ನಾಯಕನಾಗಿ ಮುನ್ನಡೆಸಲು ಫ್ರಾಂಚೈಸಿ ರಜತ್ ಪಟಿದಾರ್ ಅವರನ್ನು ಆಯ್ಕೆ ಮಾಡಿದೆ.ರಜತ್ ಪಾಟಿದಾರ್ ಆರ್‌ಸಿಬಿಯ ಹೊಸ ನಾಯಕನಾಗುತ್ತಿದ್ದಂತೆ ಭಾರೀ ಸದ್ದು ಮಾಡುತ್ತಿದ್ದಾರೆ. ಅಷ್ಟಕ್ಕೂ ರಜತ್ ಪಾಟಿದಾರ್ ಆರ್‌ಸಿಬಿಗೆ ಎಷ್ಟನೇ ನಾಯಕ ಗೊತ್ತಾ?. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

IPL 2025 RCB Team Captain List

ಆರ್‌ಸಿಬಿ ಪಾಲಿಗೆ 2025ರ ಐಪಿಎಲ್ ಮಹತ್ವದಾಗಿದೆ. ಈ ಬಾರಿಯ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಬಲಿಷ್ಠ ತಂಡವನ್ನು ಕಟ್ಟಿದ್ದು, ಕಪ್ ಗೆಲ್ಲಲು ರಣತಂತ್ರ ರೂಪಿಸುತ್ತಿದೆ. ಇದರ ಮೊದಲ ಹೆಜ್ಜೆಯೇ ನಾಯಕನಾಗಿ ರಜತ್ ಪಾಟಿದಾರ್ ನೇಮಕಗೊಂಡಿರುವುದು. ಆರ್‌ಸಿಬಿಗೆ ರಜತ್ ಪಟಿದಾರ್ 8ನೇ ಹೊಸ ನಾಯಕನಾಗಿದ್ದಾರೆ. ಇದಕ್ಕೂ ಮುನ್ನ ಆರ್‌ಸಿಬಿ ತಂಡವನ್ನು ದಿಗ್ಗಜ ಆಟಗಾರರು ಮುನ್ನಡೆಸಿದ್ದಾರೆ. ಇದರಿಂದ ಆರ್‌ಸಿಬಿ ತನ್ನ ಬ್ರ್ಯಾಂಡ್ ಅನ್ನು ಸ್ವಲ್ಪ ಹೆಚ್ಚಿಸಿಕೊಂಡಿದೆ.

ಐಪಿಎಲ್ ಚೊಚ್ಚಲ ಆವೃತ್ತಿ 2008ರಲ್ಲಿ ಆರಂಭವಾಯಿತು. ಈ ಮೊದಲ ಆವೃತ್ತಿಯಲ್ಲಿ ಟೀಮ್ ಇಂಡಿಯಾ ಮಾಜಿ ಹೆಡ್‌ಕೋಚ್ ರಾಹುಲ್ ಡ್ರಾವಿಡ್ ಆರ್‌ಸಿಬಿ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ನಂತರ ಕೆವಿನ್ ಪೀಟರ್ಸನ್ 2009 ರಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿದರು. ಇದಾದ ಒಂದು ವರ್ಷ ಟೀಮ್ ಇಂಡಿಯಾ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಸಾರಥ್ಯದಲ್ಲಿ ಆರ್‌ಸಿಬಿ ಆಡಿತ್ತು. ಇನ್ನು ಡೇನಿಯಲ್ ವೆಟ್ಟೋರಿ ಸತತ ಎರಡು 2011 ರಿಂದ 2012 ರವರೆಗೆ ಆರ್‌ಸಿಬಿ ನಾಯಕನಾಗಿದ್ದರು.

ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನಾಯಕತ್ವ ವಹಿಸಿಕೊಂಡ ಮೇಲೆ ಆರ್‌ಸಿಬಿ ತಂಡದ ವರ್ಚುಸ್ ಹೆಚ್ಚಾಯ್ತು. ಕೊಹ್ಲಿ ಬರೋಬ್ಬರಿ 13 ವರ್ಷಗಳ ವರೆಗೆ ಆರ್‌ಸಿಬಿ ತಂಡದ ನಾಯಕರಾಗಿದ್ದರು. ಜೊತೆಗೆ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದರು . ಇದಕ್ಕೂ ಮುನ್ನ 20l7ರಲ್ಲಿ ಶೇನ್ ವ್ಯಾಟ್ಸನ್ ಆರ್‌ಸಿಬಿ ತಂಡಕ್ಕೆ ಒಮ್ಮೆ ನಾಯಕತ್ವ ವಹಿಸಿದ್ದರು. ಇದಾದ ಮೇಲೆ ಫಾಫ್ ಡು ಪ್ಲೆಸಿಸ್ ಕಳೆದರೆಡು ವರ್ಷಗಳಿಂದ ಅರ್‌ಸಿಬಿ ತಂಡದ ಪರ ಮಿಂಚಿದ್ದರು. ಇದೀಗ ಐಪಿಎಲ್ 20025 ರಲ್ಲಿ ರಜತ್ ಪಾಟಿದಾರ್ ಆರ್‌ಸಿಬಿ ಮುನ್ನಡೆಸಲಿದ್ಧಾರೆ.

ಆರ್‌ಸಿಬಿ ನಾಯಕರು

ರಾಹುಲ್ ದ್ರಾವಿಡ್ (ಭಾರತ) - 2008-2008

ಕೆವಿನ್ ಪೀಟರ್ಸನ್ (ಇಂಗ್ಲೆಂಡ್) - 2009-2009

ಅನಿಲ್ ಕುಂಬ್ಳೆ (ಭಾರತ) - 2009-2010

ಡೇನಿಯಲ್ ವೆಟ್ಟೋರಿ (ನ್ಯೂಜಿಲೆಂಡ್) - 2011-2012

ವಿರಾಟ್ ಕೊಹ್ಲಿ (ವಿರಾಟ್ ಕೊಹ್ಲಿ) - 2011-2023

ಶೇನ್ ವ್ಯಾಟ್ಸನ್ (ಆಸ್ಟ್ರೇಲಿಯಾ) - 2017-2017

ಫಾಫ್ ಡು ಪ್ಲೆಸಿಸ್ (ದಕ್ಷಿಣ ಆಫ್ರಿಕಾ) - 2022-2024

ರಜತ್ ಪಾಟಿದಾರ್ (ಭಾರತ) 2025-

Story first published: Thursday, February 13, 2025, 14:15 [IST]
Other articles published on Feb 13, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+