Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025 RCB: ಆರ್‌ಸಿಬಿ ತಂಡದ ಸಂಪೂರ್ಣ ವೇಳಾಪಟ್ಟಿ ಹೀಗಿದೆ..

ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2025ರ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಭಾನುವಾರ ಸಂಜೆ ಬಿಡುಗಡೆಯಾಗಿದೆ. ಐಪಿಎಲ್ 2025ರ ಪಂದ್ಯಗಳು ಮಾರ್ಚ್ 22 ರಿಂದ ಆರಂಭವಾಗಲಿದ್ದು, ಮೇ 25 ರಂದು ಫೈನಲ್ ಪಂದ್ಯ ನಡೆಯಲಿದೆ. ಉದ್ಘಾಟನಾ ಪಂದ್ಯಕ್ಕೆ ಕೋಲ್ಕತಾದ ಈಡನ್ ಗಾರ್ಡನ್ಸ್‌ ಆತಿಥ್ಯವಹಿಸಿದ್ದು, ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ರೋಚಕ ಪಂದ್ಯ ನಡೆಯಲಿದೆ.

ಐಪಿಎಲ್‌ 2024ರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಆರ್‌ಸಿಬಿ ಉದ್ಘಾಟನಾ ಪಂದ್ಯವನ್ನು ಆಡಿತ್ತು. ಈ ಬಾರಿಯೂ ಆರ್‌ಸಿಬಿ ಆರಂಭಿಕ ಪಂದ್ಯವನ್ನು ಆಡಲು ಭರ್ಜರಿ ತಯಾರಿ ನಡೆಸುತ್ತಿದೆ. ಕಳೆದ ಬಾರಿಯಂತೆ ಆರ್‌ಸಿಬಿ ತವರಿನಲ್ಲಿ 7 ಪಂದ್ಯಗಳನ್ನು ಆಡಲಿದೆ. ತವರಿನ ಅಂಗಳದಲ್ಲಿ ಹೈವೋಲ್ಟೇಜ್ ಪಂದ್ಯಗಳನ್ನು ನೋಡಿ ಕಣ್ತುಂಬಿಕೊಳ್ಳಲು ಆರ್‌ಸಿಬಿ ಅಭಿಮಾನಿಗಳು ಕಾಯುತ್ತಿದ್ದಾರೆ.

IPL 2025 RCB team complete schedule

ಆರ್‌ಸಿಬಿ ವೇಳಾಪಟ್ಟಿ

ಪಂದ್ಯ 1) ಮಾರ್ಚ್ 22, ಶನಿವಾರ, ಕೆಕೆಆರ್ vs ಆರ್‌ಸಿಬಿ- ಈಡನ್ ಗಾರ್ಡನ್ಸ್, ಕೋಲ್ಕತಾ.
ಪಂದ್ಯ 2) ಮಾರ್ಚ್ 28, ಶುಕ್ರವಾರ, ಸಿಎಸ್‌ಕೆ vs ಆರ್‌ಸಿಬಿ- ಚಿದಂಬರಂ ಕ್ರೀಡಾಂಗಣ, ಚೆನ್ನೈ.
ಪಂದ್ಯ 3) ಏಪ್ರಿಲ್ 2, ಬುಧವಾರ, ಆರ್‌ಸಿಬಿ vs ಜಿಟಿ- ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.
ಪಂದ್ಯ 4) ಏಪ್ರಿಲ್ 7, ಸೋಮವಾರ, ಎಂಐ vs ಆರ್‌ಸಿಬಿ- ವಾಂಖೆಡೆ ಕ್ರೀಡಾಂಗಣ, ಮುಂಬೈ.
ಪಂದ್ಯ 5) ಏಪ್ರಿಲ್ 10, ಗುರುವಾರ, ಆರ್‌ಸಿಬಿ vs ಡಿಸಿ- ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.
ಪಂದ್ಯ 6) ಏಪ್ರಿಲ್ 13, ಭಾನುವಾರ, ಆರ್‌ಆರ್ vs ಆರ್‌ಸಿಬಿ- ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣ, ಜೈಪುರ.
ಪಂದ್ಯ 7) ಏಪ್ರಿಲ್ 18, ಶುಕ್ರವಾರ, ಆರ್‌ಸಿಬಿ vs ಪಿಬಿಕೆಎಸ್‌- ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.
ಪಂದ್ಯ 8) ಏಪ್ರಿಲ್ 20, ಭಾನುವಾರ, ಪಿಬಿಕೆಎಸ್‌ vs ಆರ್‌ಸಿಬಿ- ಮಹಾರಾಜ ಯದವೀಂದ್ರ ಸಿಂಗ್ ಕ್ರೀಡಾಂಗಣ, ಮುಲ್ಲಾನ್‌ಪುರ.
ಪಂದ್ಯ 9) ಏಪ್ರಿಲ್ 24, ಗುರುವಾರ, ಆರ್‌ಸಿಬಿ vs ಆರ್‌ಆರ್- ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.
ಪಂದ್ಯ 10) ಏಪ್ರಿಲ್ 27, ಭಾನುವಾರ, ಡಿಸಿ vs ಆರ್‌ಸಿಬಿ- ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ.
ಪಂದ್ಯ 11) ಮೇ 3, ಶನಿವಾರ, ಆರ್‌ಸಿಬಿ vs ಸಿಎಸ್‌ಕೆ - ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.
ಪಂದ್ಯ 12) ಮೇ 9, ಶುಕ್ರವಾರ, ಎಲ್‌ಎಸ್‌ಜಿ vs ಆರ್‌ಸಿಬಿ- ಎಕಾನ ಕ್ರಿಕೆಟ್ ಸ್ಟೇಡಿಯಂ, ಲಕ್ನೋ.
ಪಂದ್ಯ 13) ಮೇ 13, ಗುರುವಾರ, ಆರ್‌ಸಿಬಿ vs ಎಸ್‌ಆರ್‌ಹೆಚ್- ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.
ಪಂದ್ಯ 14) ಮೇ 17, ಶನಿವಾರ, ಆರ್‌ಸಿಬಿ vs ಕೆಕೆಆರ್‌- ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.

Story first published: Sunday, February 16, 2025, 21:27 [IST]
Other articles published on Feb 16, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+