ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಟೂರ್ನಿಗೆ ಕೌಂಟ್‌ಡೌನ್ ಶುರುವಾಗಿದೆ. ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಎದುರಿಸಲಿದೆ. ಆರ್‌ಸಿಬಿ ಅಭಿಮಾನಗಳಿಂದ 'ಈ ಸಲ ಕಪ್ ನಮ್ದೆ' ಎಂಬ ಜಪವೂ ಶುರುವಾಗಿದೆ. ಈ ಬಾರಿ ಮೆಂಟರ್ ದಿನೇಶ್ ಕಾರ್ತಿಕ್ ನೇತೃತ್ವದಲ್ಲಿ ಹೊಸ ಆರ್‌ಸಿಬಿ ತಂಡವನ್ನು ಕಟ್ಟಲಾಗಿದೆ. ಹೊಸ ಬಲಿಷ್ಠ ಆರ್‌ಸಿಬಿ ತಂಡದಲ್ಲಿ ಅನುಭವಿಗಳೊಂದಿಗೆ ಯುವ ಸ್ಟಾರ್ ಆಟಗಾರರ ದಂಡೆಯಿದೆ.
ಐಪಿಎಲ್ 2025ರ ಉದ್ಘಾಟನಾ ಪಂದ್ಯಕ್ಕೂ ಮುನ್ನ ಹೊಸ ಆರ್‌ಸಿಬಿ ತಂಡದ ಸ್ಟ್ರೆಂಥ್ ಅಂಡ್ ವೀಕ್ನೆಸ್ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಚೊಚ್ಚಲ ಕಪ್ ಎತ್ತಿ ಹಿಡಿಯಲು ಸಜ್ಜಾಗಿರುವ ಆರ್‌ಸಿಬಿ ತಂಡದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಆರ್‌ಸಿಬಿ ಮೂರು ವಿಭಾಗಗಳಲ್ಲಿ ಮೇಲ್ನೋಟಕ್ಕೆ ಬಲಿಷ್ಠವಾಗಿ ಕಾಣುತ್ತಿದೆ. ಆದರೆ, ಆರ್‌ಸಿಬಿ ತಂಡದ ಒಳಗೆ ಕೆಲವು ವಿಕ್ನೇಸ್ ಕೂಡ ಇದೆ. ಈ ಬಾರಿ ಆರ್‌ಸಿಬಿ ತಂಡಕ್ಕೆ ಯುವ ಸ್ಟಾರ್ ಬ್ಯಾಟರ್ ರಜತ್ ಪಾಟಿದಾರ್ ನಾಯಕತ್ವ ವಹಿಸಲು ತಯಾರಾಗಿದ್ದಾರೆ. ರಜತ್ ಪಾಟಿದಾರ್ ದೇಶಿ ಕ್ರಿಕೆಟ್‌ನಲ್ಲಿ ಯಶಸ್ಸು ಕಂಡಿದ್ದಾರೆ. ಆದರೆ, ಐಪಿಎಲ್‌ನಲ್ಲಿ ಅವರು ಮೊದಲ ಬಾರಿಗೆ ನಾಯಕನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅನುಭವ ಕೊರೆತೆ ಇರುವ ರಜತ್ ಪಾಟಿದಾರ್ ನಾಯಕತ್ವ ಆರ್‌ಸಿಬಿಗೆ ಮುಳುವಾಗಬಹುದು.
ಆರ್‌ಸಿಬಿ ಭಾರತೀಯ ಬದಲಿಗೆ ವಿದೇಶಿ ಆಟಗಾರರ ಮೇಲೆ ಹೆಚ್ಚು ಅವಲಂಬನೆ ಆಗಿದೆ. ಅಲ್ಲದೆ, ತಂಡದ ಕ್ವಾಲಿಟಿ ಸ್ಪಿನ್ನರ್ಸ್ ಇಲ್ಲ. ಸ್ವಪ್ನಿಲ್ ಸಿಂಗ್ ಮತ್ತು ಸುಯಶ್ ಶರ್ಮಾ ಆರ್‌ಸಿಬಿ ತಂಡದಲ್ಲಿ ಸ್ಪಿನ್ ಬೌಲಿಂಗ್ ಪಾತ್ರ ನಿರ್ವಹಿಸಲಿದ್ದಾರೆ. ಅವಶ್ಯಕತೆ ಇದ್ದಾಗ ಲಿಯಾಮ್ ಲಿವಿಂಗ್‌ಸ್ಟೋನ್ ಕೂಡ ಸ್ಪಿನ್ ಮಾಡಲಿದ್ದಾರೆ. ಚಿನ್ನಸ್ವಾಮಿ ಮೈದಾನ ಬ್ಯಾಟಿಂಗ್ ಪಿಚ್ ಆಗಿರುವುದರಿಂದ ಫಿಲ್ ಸಾಲ್ಟ್, ಟಿಮ್ ಡೇವಿಡ್, ಲಿಯಾಮ್ ಲಿವಿಂಗ್‌ಸ್ಟೋನ್ ಅವರಂತಹ ಹೊಡಿಬಡಿ ಆಟಗಾರರಿಗೆ ಆರ್‌ಸಿಬಿ ಮಣೆ ಹಾಕಿದೆ. ಆದರೆ ಹೊರಗಿನ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಆರ್‌ಸಿಬಿ ತಂಡಕ್ಕೆ ಹೊಸ ಚಾಲೆಂಜ್ ಎದುರಾಗಬಹುದು. ಏಕೆಂದರೆ ಆರ್‌ಸಿಬಿ ತಂಡದಲ್ಲಿ ರಜತ್ ಪಾಟಿದಾರ್ ಹೊರೆತುಪಡಿಸಿದರೆ ಸ್ಪಿನ್ ಫ್ರೆಂಡ್ಲಿ ಬ್ಯಾಟರ್ಸ್ ಇಲ್ಲ.
ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಬೆಸ್ಟ್ ತಂಡವಾಗಿದೆ. ಆರ್‌ಸಿಬಿ ತಂಡ ಯಾವಾಗಲೂ ಬಲಿಷ್ಠ ಬ್ಯಾಟಿಂಗ್ ಲೈನ್ ಆಫ್ ಹೊಂದಿರುತ್ತದೆ. ಈ ಬಾರಿಗೆ ಅದ್ಭುತ ಟಾಪ್ ಆರ್ಡರ್ ಬ್ಯಾಟಿಂಗ್ ಹೊಂದಿದೆ. ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್, ದೇವದತ್ ಪಡಿಕ್ಕಲ್ ಅವರಂತಹ ಬ್ಯಾಟರ್ಸ್ ಆರ್‌ಸಿಬಿ ತಂಡದ ಬಲವಾಗಿದ್ದಾರೆ. ಆದರೆ 22 ಆಟಗಾರರ ಪಡೆಯಲ್ಲಿ ಬೆಸ್ಟ್ ಪ್ಲೇಯಿಂಗ್-11 ಅನ್ನು ಆಯ್ಕೆ ಮಾಡುವುದು ಆರ್‌ಸಿಬಿ ಟೀಮ್ ಮ್ಯಾನೇಜ್ಮೆಂಟ್ ದೊಡ್ಡ ಸವಾಲಾಗಿದೆ. ಐಪಿಎಲ್ 2025ರಲ್ಲಿ ಆರ್‌ಸಿಬಿ ಬಲಿಷ್ಠವಾಗಿ ಕಾಣುತ್ತಿದ್ದು, ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರೆ, ಕಪ್ ಅನ್ನು ಮುಡಿಗೇರಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.
ಆರ್‌ಸಿಬಿ ತಂಡ: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್, ಲಿಯಾಮ್ ಲಿವಿಂಗ್‌ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ರಸಿಕ್‌ದರ್ ಸಲಾಂ, ಸುಯಂಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ನುವಾನ್ ತುಷಾರ, ಮನೋಜ್ ಭಂಡಗೆ, ಜಕೆಲ್ ಬೆಥೆಲ್, ದೇವದತ್ ಪಡಿಕ್ಕಲ್, ಸಾತ್ವಿಕ್ ಚಿಕಾರ, ಲುಂಗಿ ಎನ್‌ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಠಿ.