Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025 RCB vs MI: ವಾಂಖೆಡೆಯಲ್ಲಿ ವಿರಾಟ್ ಕೊಹ್ಲಿ ಡಬಲ್ ರೆಕಾರ್ಡ್

ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್ 2025 ರ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟಿಂಗ್ ಆರಂಭಿಸಿತು. ಆರ್‌ಸಿಬಿ ಸ್ಪೋಟಕ ಬ್ಯಾಟರ್ ಫಿಲ್ ಸಾಲ್ಟ್ ಅವರ ವಿಕೆಟ್ ಅನ್ನು ಆರಂಭದಲ್ಲಿ ಕಳೆದುಕೊಂಡರೂ, ಅದ್ಭುತವಾಗಿ ಪವರ್ ಪ್ಲೇ ಮುಗಿಸಿದೆ. ವಿರಾಟ್ ಕೊಹ್ಲಿ ಜೊತೆಗೆ ದೇವದತ್ ಪಡಿಕ್ಕಲ್ ಅಬ್ಬರಿಸಿದರು. ಮತ್ತೊಂದೆಡೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಡಬಲ್ ರೆಕಾರ್ಡ್ ಮಾಡುವಲ್ಲಿ ಯಶಸ್ವಿಯಾದರು.

ಟಿ20 ಕ್ರಿಕೆಟ್ ನಲ್ಲಿ ಇದುವರೆಗೆ ಯಾವುದೇ ಭಾರತೀಯ ಕ್ರಿಕೆಟಿಗ ಮಾಡದ ಸಾಧನೆಯನ್ನು ವಿರಾಟ್ ಕೊಹ್ಲಿ ಮಾಡಿದ್ದಾರೆ. ವಿರಾಟ್ ಕೊಹ್ಲಿ 13000 ಟಿ20 ರನ್ ಕಲೆ ಹಾಕಿದ ದಾಖಲೆಯನ್ನು ಸೃಷ್ಟಿಸಿದರು. ಇದಲ್ಲದೆ, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ 100 ಬೌಂಡರಿ ಬಾರಿಸಿದ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾದರು.

IPL 2025 RCB vs MI Virat Kohli creates double record at Wankhede

ಟಿ20 ಕ್ರಿಕೆಟ್ ನಲ್ಲಿ ಇದುವರೆಗೆ ಯಾವುದೇ ಭಾರತೀಯ ಕ್ರಿಕೆಟಿಗ ಮಾಡದ ಸಾಧನೆಯನ್ನು ವಿರಾಟ್ ಕೊಹ್ಲಿ ಮಾಡಿದ್ದಾರೆ. ವಿರಾಟ್ ಕೊಹ್ಲಿ 13000 ಟಿ20 ರನ್ ಕಲೆ ಹಾಕಿದ ದಾಖಲೆಯನ್ನು ಸೃಷ್ಟಿಸಿದ್ದಾರೆ. ಇದಲ್ಲದೆ, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ 100 ಬೌಂಡರಿ ಬಾರಿಸಿದ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಅವರಿಗೆ ಈ ಸಾಧನೆ ಮಾಡಲು ಕೇವಲ 17 ರನ್‌ಗಳ ದೂರದಲ್ಲಿದರು. ವಿರಾಟ್ ಕೊಹ್ಲಿ 403 ಪಂದ್ಯಗಳಲ್ಲಿ ಕೇವಲ 387 ಇನ್ನಿಂಗ್ಸ್‌ಗಳಲ್ಲಿ 41.47 ರ ಸರಾಸರಿಯಲ್ಲಿ ಮತ್ತು 134.20 ರ ಸ್ಟ್ರೈಕ್ ರೇಟ್‌ನಲ್ಲಿ 12983 ರನ್ ಗಳಿಸಿದ್ದರು.

ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿರುವ ದಾಖಲೆ ವೆಸ್ಟ್ ಇಂಡೀಸ್ ದಿಗ್ಗಜ ಬ್ಯಾಟರ್ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಕ್ರಿಸ್ ಗೇಲ್ ಒಟ್ಟು 14562 ರನ್‌ ಗಳಿಸಿದ್ದಾರೆ. ನಂತರ ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್ (13610), ಪಾಕಿಸ್ತಾನದ ಶೋಯೆಬ್ ಮಲಿಕ್ (13537) ಮತ್ತು ವೆಸ್ಟ್‌ ಇಂಡೀಸ್‌ನ ಕೀರನ್ ಪೊಲಾರ್ಡ್ (13637) ಟಿ20 ಕ್ರಿಕೆಟ್‌ನಲ್ಲಿ 13000 ರನ್ ಗಳಿಸಿದ ಬ್ಯಾಟರ್‍‌ಗಳ ಪಟ್ಟಿಯಲ್ಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.

ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ಬೌಲರ್‍‌ಗಳಿಗೆ ವಿರಾಟ್ ಕೊಹ್ಲಿ ಹಿಗ್ಗಾಮುಗ್ಗ ಬಾರಿಸಿದರು. ಆರ್‌ಸಿಬಿ ತಂಡ 200 ರನ್‌ಗಳ ಗಡಿ ದಾಟುವಲ್ಲಿ ವಿರಾಟ್ ಕೊಹ್ಲಿ ಅದ್ಭುತ ಆರಂಭ ನೀಡಿದರು. ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದ ಅವರು 42 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 67 ರನ್ ಬಾರಿಸಿ ಔಟ್ ಆದರು.

Story first published: Monday, April 7, 2025, 20:32 [IST]
Other articles published on Apr 7, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+