For Quick Alerts
ALLOW NOTIFICATIONS  
For Daily Alerts
 

RCB ಲೀಗ್‌ ಹಂತದಲ್ಲಿ ಗೆದ್ದ ಐದು ಸ್ಮರಣೀಯ ಪಂದ್ಯಗಳು

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಈಗಾಗಲೇ ಫೈನಲ್‌ಗೆ ಅರ್ಹತೆ ಪಡೆದಿದೆ. ನ್ಯೂ ಚಂಡೀಗಡ್‌ ಅಂಗಳದಲ್ಲಿ ನಡೆದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಬೆಂಗಳೂರು ಜಯ ಸಾಧಿಸಿದೆ. 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಬೆಂಗಳೂರು ತಂಡ ಹಲವು ಐತಿಹಾಸಿಕ ಗೆಲುವು ದಾಖಲಿಸಿದೆ ಇದರ ಪರಿಣಾಮವೇ ಬೆಂಗಳೂರು ತಂಡ ಈ ಹಂತದಲ್ಲಿ ನಿಂತಿದೆ. ಹಾಗಿದ್ದರೆ ಲೀಗ್‌ ಹಂತದಲ್ಲಿ ಬೆಂಗಳೂರು ತಂಡದ ಹೆಜ್ಜೆ ಗುರುತುಗಳು ಹೇಗಿದ್ದವು ಎಂಬ ಬಗ್ಗೆ ವರದಿ ಇಲ್ಲಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸತತ 17 ಆವೃತ್ತಿಗಳ ಐಪಿಎಲ್‌ನಲ್ಲಿ ಆಡುತ್ತಿದೆ. ಆದರೆ ಒಮ್ಮೆಯೂ ಐಪಿಎಲ್‌ ಟ್ರೋಫಿ ಗೆಲ್ಲದೇ ಹತಾಶೆಯನ್ನು ಅನುಭವಿಸಿದೆ. ಆದರೆ ಈ ತಂಡದ ಮೇಲೆ ಅಭಿಮಾನಿಗಳ ಪ್ರೀತಿ ಮಾತ್ರ ಕಮ್ಮಿ ಆಗಲೇ ಇಲ್ಲ. ದಿನೇ ದಿನೇ ಈ ತಂಡದ ಬ್ರ್ಯಾಂಡ್‌ ವ್ಯಾಲ್ಯೂ ಬೆಳೆಯುತ್ತಾ ಸಾಗಿದಂತೆ, ಅಭಿಮಾನಿಗಳ ಸಂಖ್ಯೆಯಲ್ಲೂ ಏರಿಕೆ ಆಗಿದೆ. ಈ ಬಾರಿ ಆರ್‌ಸಿಬಿ ಮೈದಾನದಲ್ಲಿ ಅಷ್ಟೇ ಅಲ್ಲ, ಸಾಮಾಜಿಕ ತಾಣದಲ್ಲೂ ಬಿಗ್ ಇಂಪ್ಯಾಕ್ಟ್ ಮಾಡಿದೆ. ಇದಕ್ಕೆ ಕಾರಣ ಲೀಗ್ ಹಂತದಲ್ಲಿ ಆರ್‌ಸಿಬಿ ನೀಡಿರುವ ಪ್ರದರ್ಶನ.

IPL 2025 RCB s Historic League Wins A Superb Path to the Final

ಈ ಬಾರಿ ಆರ್‌ಸಿಬಿ ಹಲವು ಸ್ಮರಣೀಯ ಇನಿಂಗ್ಸ್‌ಗಳನ್ನು ಆಡಿದೆ. ಇದರಲ್ಲಿ ಎಲ್ಲರ ಕಣ್ಣು ಮುಂದೆ ಬರುವುದು ಚೆನ್ನೈ ವಿರುದ್ಧದ ಪಂದ್ಯ. ಆರ್‌ಸಿಬಿ 17 ವರ್ಷಗಳ ಬಳಿಕ ಸಿಎಸ್‌ಕೆ ತಂಡವನ್ನು ಅವರದ್ದೇ ತವರು ಚೆನ್ನೈನಲ್ಲಿ ಸೋಲಿಸಿದೆ. ಅಲ್ಲದೆ ಲೀಗ್‌ ಹಂತದ ಎರಡೂ ಪಂದ್ಯಗಳಲ್ಲಿ ಮಣಿಸಿದ್ದು ಇದೇ ಮೊದಲು.

ದೊಡ್ಡ ತಂಡಕ್ಕೆ ಪೆಟ್ಟು

ಆರ್‌ಸಿಬಿ ಈ ಬಾರಿ ಲೀಗ್‌ ಹಂತದ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿತ್ತು. ಇದರಲ್ಲಿ ಎದುರಾಳಿ ತಂಡದ ತವರಿನಲ್ಲಿ ಅಬ್ಬರಿಸಿದ ಪರಿಣಾಮವೇ ಆರ್‌ಸಿಬಿ ಇಂದು ಈ ಹಂತಕ್ಕೆ ಬಂದು ನಿಂತಿದೆ. ಸುಮಾರು 10 ವರ್ಷಗಳ ಬಳಿಕ ಆರ್‌ಸಿಬಿ ಮುಂಬೈ ಇಂಡಿಯನ್ಸ್‌ ತಂಡವನ್ನು ಮುಂಬೈನ ವಾಂಖೇಡೆ ಅಂಗಳದಲ್ಲಿ ಮಣಿಸಿ ಇತಿಹಾಸ ಬರೆದಿದೆ. ಹಾಲಿ ಚಾಂಪಿಯನ್‌ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡವನ್ನು 6 ವರ್ಷಗಳ ಬಳಿಕ ಈಡನ್‌ ಗಾರ್ಡನ್‌ನಲ್ಲಿ ಮಣಿಸಿ ಅಬ್ಬರಿಸಿದೆ.

IPL 2025 RCB s Historic League Wins A Superb Path to the Final

ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ನವದೆಹಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ಆರ್‌ಸಿಬಿ ಏಳು ವರ್ಷಗಳ ಬಳಿಕ ಮಣಿಸಿ ಆರ್ಭಟಿಸಿದೆ. ಇನ್ನು ಆರ್‌ಸಿಬಿ ಇದೇ ಆವೃತ್ತಿಯಲ್ಲಿ ಎದುರಾಳಿ ತಂಡದ ತವರಿನಲ್ಲಿ ಆಡಿದ ಏಳು ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಹೊಂದಿದೆ. ಈ ಮೂಲಕವೂ ಬೆಂಗಳೂರು ತಂಡ ಇತಿಹಾಸ ನಿರ್ಮಿಸಿದೆ. ಲೀಗ್‌ ಹಂತದ ಕೊನೆಯ ಪಂದ್ಯದಲ್ಲೂ ಲಕ್ನೋ ಸೂಪರ್‌ ಜೈಂಟ್ಸ್ ನೀಡಿದ್ದ 228 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಇನ್ನು ಒಂದು ಓವರ್ ಬಾಕಿ ಇರುವಂತೆಯೇ ಆತಿಥೇಯ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಮೂಲಕ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆಯಿತು.

Story first published: Saturday, May 31, 2025, 8:06 [IST]
Other articles published on May 31, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+