For Quick Alerts
ALLOW NOTIFICATIONS  
For Daily Alerts
 

IPL 2025 Retention Live Updates:ಪಂಜಾಬ್‌ ಅತ್ಯಂತ ಶ್ರೀಮಂತ ತಂಡ: ಮೂವರು ಆಟಗಾರರನ್ನು ಉಳಿಸಿಕೊಂಡ RCB

ಈ ಬಾರಿ ಐಪಿಎಲ್‌ ಮೆಗಾ ಹರಾಜು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಐಪಿಎಲ್‌ 10 ಮಾಲೀಕರು ತಾವು ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಲೀಸ್ಟ್‌ನ್ನು ಬಿಸಿಸಿಐಗೆ ನೀಡಬೇಕಿದೆ. ಈ ವೇಳೆ ಮಾಲೀಕರು ಅಳೆದು ತೂಗಿ ತಮ್ಮ ನಿರ್ಧಾರವನ್ನು ಕೈ ಗೊಳ್ಳಲಿದ್ದಾರೆ.

ಯಾರು ಹರಾಜು ಅಂಗಳಕ್ಕೆ ಎಂಟ್ರಿ ನೀಡಲಿದ್ದಾರೆ? ಎಂಬ ಪ್ರಶ್ನೆಗೆ ಉತ್ತರ ಇಂದು ಸಂಜೆಯೊಳಗೆ ಸಿಗಲಿದೆ. ಇನ್ನು ಆರ್‌ಸಿಬಿ ತಂಡ ತನ್ನ ಮೊದಲ ಆಯ್ಕೆಯ ಆಟಗಾರನಾಗಿ ವಿರಾಟ್‌ ಕೊಹ್ಲಿ ಅವರನ್ನು ಉಳಿಸಿಕೊಳ್ಳುವುದು ಪಕ್ಕಾ ಆದಂತೆ ಕಾಣುತ್ತಿದೆ. ಉಳಿದ ಯಾವೆಲ್ಲ ಆಟಗಾರರಿಗೆ ಅವಕಾಶ ನೀಡಲಾಗಿದೆ ಎಂಬುದಕ್ಕೆ ಗುರುವಾರ ಉತ್ತರ ಸಿಗಲಿದೆ.

IPL 2025 Retention Live Kannada News Updates  List of Players Retained by RCB  CSK  MI  SRH

Oct 31, 2024, 10:14 pm IST

ಗುಜರಾತ್ ಟೈಟಾನ್ಸ್

-ರಶೀದ್ ಖಾನ್ (₹18 ಕೋಟಿ) -ಶುಭಮನ್ ಗಿಲ್ (₹16.5 ಕೋಟಿ) -ಸಾಯಿ ಸುದರ್ಶನ್ (₹8.5 ಕೋಟಿ) -ರಾಹುಲ್ ತೆವಾಟಿಯಾ (₹4 ಕೋಟಿ) -ಶಾರುಖ್ ಖಾನ್ (₹4 ಕೋಟಿ) -ಉಳಿದಿರುವ ಆರ್‌ಟಿಎಂ:1 -ಉಳಿದಿರುವ ಪರ್ಸ್ - ₹69 ಕೋಟಿ

Oct 31, 2024, 10:03 pm IST

ಸನ್‌ರೈಸರ್ಸ್ ಹೈದರಾಬಾದ್

-ಪ್ಯಾಟ್ ಕಮ್ಮಿನ್ಸ್ (₹18 ಕೋಟಿ) -ಅಭಿಷೇಕ್ ಶರ್ಮಾ (₹14 ಕೋಟಿ) -ನಿತೀಶ್ ಕುಮಾರ್ ರೆಡ್ಡಿ (₹6 ಕೋಟಿ) -ಹೆನ್ರಿಕ್ ಕ್ಲಾಸೆನ್ (₹23 ಕೋಟಿ) -ಟ್ರಾವಿಸ್ ಹೆಡ್ (₹14 ಕೋಟಿ) -ಉಳಿದಿರುವ ಆರ್‌ಟಿಎಂ: 4 -ಉಳಿದಿರುವ ಪರ್ಸ್ - ₹45 ಕೋಟಿ

Oct 31, 2024, 9:41 pm IST

ಡೆಲ್ಲಿ ಕ್ಯಾಪಿಟಲ್ಸ್

-ಅಕ್ಷರ್ ಪಟೇಲ್ (₹16.5 ಕೋಟಿ) -ಕುಲದೀಪ್ ಯಾದವ್ (₹13.25 ಕೋಟಿ) -ಟ್ರಿಸ್ಟನ್ ಸ್ಟಬ್ಸ್ (₹10 ಕೋಟಿ) -ಅಭಿಷೇಕ್ ಪೊರೆಲ್ (₹4 ಕೋಟಿ) - ಅನ್‌ಕ್ಯಾಪ್ಡ್ -ಉಳಿದಿರುವ ಆರ್‌ಟಿಎಂ: 2 -ಉಳಿದಿರುವ ಪರ್ಸ್ - ₹76.25 ಕೋಟಿ

Oct 31, 2024, 9:28 pm IST

ಪಂಜಾಬ್ ಕಿಂಗ್ಸ್ (PBKS)

-ಶಶಾಂಕ್ ಸಿಂಗ್ (₹5.5 ಕೋಟಿ) -ಪ್ರಭಾಸಿಮ್ರಾನ್ ಸಿಂಗ್ (₹4 ಕೋಟಿ) -ಉಳಿದಿರುವ ಆರ್‌ಟಿಎಂ: 4 -ಉಳಿದಿರುವ ಪರ್ಸ್ - ₹110.5 ಕೋಟಿ

Oct 31, 2024, 9:18 pm IST

ಲಕ್ನೋ ಸೂಪರ್ ಜೈಂಟ್ಸ್

-ನಿಕೋಲಸ್ ಪೂರನ್ (₹21 ಕೋಟಿ) -ಮಯಾಂಕ್ ಯಾದವ್ (₹11 ಕೋಟಿ) -ರವಿ ಬಿಷ್ಣೋಯ್ (₹11 ಕೋಟಿ) -ಮೊಹ್ಸಿನ್ ಖಾನ್ (ಅನ್‌ಕ್ಯಾಪ್ಡ್, ₹4 ಕೋಟಿ) -ಆಯುಷ್ ಬದೋನಿ (ಅನ್‌ಕ್ಯಾಪ್ಡ್, ₹4 ಕೋಟಿ) -ಉಳಿದಿರುವ ಆರ್‌ಟಿಎಂ: 1 -ಉಳಿದಿರುವ ಪರ್ಸ್ - ₹69 ಕೋಟಿ

Oct 31, 2024, 8:55 pm IST

ರಾಜಸ್ಥಾನ ರಾಯಲ್ಸ್

-ಸಂಜು ಸ್ಯಾಮ್ಸನ್ (₹18 ಕೋಟಿ) -ಯಶಸ್ವಿ ಜೈಸ್ವಾಲ್ (₹18 ಕೋಟಿ) -ರಿಯಾನ್ ಪರಾಗ್ (₹14 ಕೋಟಿ) -ಧ್ರುವ್ ಜುರೆಲ್ (₹14 ಕೋಟಿ) -ಶಿಮ್ರಾನ್ ಹೆಟ್ಮೆಯರ್ (₹11 ಕೋಟಿ) -ಸಂದೀಪ್ ಶರ್ಮಾ (ಅನ್‌ಕ್ಯಾಪ್ಡ್,₹ 4 ಕೋಟಿ) -ಉಳಿದಿರುವ ಆರ್‌ಟಿಎಂ: 0 -ಉಳಿದಿರುವ ಪರ್ಸ್ - ₹41 ಕೋಟಿ

Oct 31, 2024, 8:44 pm IST

ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್)

-ರಿಂಕು ಸಿಂಗ್ (₹13 ಕೋಟಿ) -ವರುಣ್ ಚಕ್ರವರ್ತಿ (₹12 ಕೋಟಿ) -ಸುನಿಲ್ ನರೈನ್ (₹12 ಕೋಟಿ) -ಆಂಡ್ರೆ ರಸೆಲ್ (₹12 ಕೋಟಿ) -ಹರ್ಷಿತ್ ರಾಣಾ (ಅನ್‌ಕ್ಯಾಪ್ಡ್, ₹ 4 ಕೋಟಿ) -ರಮಣದೀಪ್ ಸಿಂಗ್ (ಅನ್‌ಕ್ಯಾಪ್ಡ್, ₹ 4 ಕೋಟಿ) -ಉಳಿದಿರುವ ಆರ್‌ಟಿಎಂ: 0 -ಉಳಿದಿರುವ ಪರ್ಸ್ - ₹51 ಕೋಟಿ

Oct 31, 2024, 8:35 pm IST

ಚೆನ್ನೈ ಸೂಪರ್ ಕಿಂಗ್ಸ್

-ರುತುರಾಜ್ ಗಾಯಕ್ವಾಡ್ (₹18 ಕೋಟಿ) -ರವೀಂದ್ರ ಜಡೇಜಾ (₹18 ಕೋಟಿ) -ಮಥೀಶ ಪತಿರಾನ (₹13 ಕೋಟಿ) -ಶಿವಂ ದುಬೆ (₹12 ಕೋಟಿ) -ಎಂಎಸ್ ಧೋನಿ (ಅನ್‌ಕ್ಯಾಪ್ಡ್. ₹ 4 ಕೋಟಿ) -ಉಳಿದಿರುವ ಆರ್‌ಟಿಎಂ: 1 -ಉಳಿದಿರುವ ಪರ್ಸ್ - ₹55 ಕೋಟಿ

Oct 31, 2024, 8:26 pm IST

ಮುಂಬೈ ಇಂಡಿಯನ್ಸ್

-ಜಸ್ಪ್ರೀತ್ ಬುಮ್ರಾ (₹18 ಕೋಟಿ) -ಹಾರ್ದಿಕ್ ಪಾಂಡ್ಯ (₹16.35 ಕೋಟಿ) -ಸೂರ್ಯಕುಮಾರ್ ಯಾದವ್ (₹16.35 ಕೋಟಿ) -ರೋಹಿತ್ ಶರ್ಮಾ (₹16.30 ಕೋಟಿ) -ತಿಲಕ್ ವರ್ಮಾ (₹8 ಕೋಟಿ) -ಉಳಿದಿರುವ ಆರ್‌ಟಿಎಂ: 1 -ಉಳಿದಿರುವ ಪರ್ಸ್ - ₹45 ಕೋಟಿ

Oct 31, 2024, 8:18 pm IST

ಆರ್‌ಸಿಬಿ ಉಳಿಸಿಕೊಂಡಿರುವ ಆಟಗಾರರು

-ವಿರಾಟ್ ಕೊಹ್ಲಿ (₹21 ಕೋಟಿ) -ರಜತ್ ಪಾಟಿದಾರ್ (₹11 ಕೋಟಿ) -ಯಶ್ ದಯಾಳ್ (₹5 ಕೋಟಿ) -ಉಳಿದಿರುವ ಆರ್‌ಟಿಎಂ: 3 -ಉಳಿದಿರುವ ಪರ್ಸ್ ಮೊತ್ತ - ₹83 ಕೋಟಿ

Oct 31, 2024, 5:46 pm IST

-ಆರ್‌ಸಿಬಿ ತಂಡದಲ್ಲಿ ಇಲ್ಲ ವಿದೇಶಿ ಆಟಗಾರರಿಗೆ ಸ್ಥಾನ. -ಆರ್‌ಸಿಬಿಯಲ್ಲಿ ಇಲ್ಲ ಎರಡನೇ ಆಯ್ಕೆಯ ಆಟಗಾರ.

Oct 31, 2024, 5:39 pm IST

ಮುಂಬೈ ಇಂಡಿಯನ್ಸ್ ತಂಡದಲ್ಲೇ ಉಳಿದ ರೋಹಿತ್ ಶರ್ಮಾ. ತಂಡದಿಂದ ಹೊರಬರುತ್ತಾರೆ ಎನ್ನುವ ವದಂತಿಗಳನ್ನು ಸುಳ್ಳು ಮಾಡಿದ 'ಹಿಟ್‌ ಮ್ಯಾನ್'. 16.30 ಕೋಟಿ ರೂಪಾಯಿಗೆ ರಿಟೈನ್ ಮಾಡಿಕೊಂಡ ಮುಂಬೈ ಇಂಡಿಯನ್ಸ್.

Oct 31, 2024, 5:39 pm IST

ಮೊಹಮ್ಮದ್‌ ಸಿರಾಜ್‌, ಫಾಫ್‌ಗೆ ಇಲ್ಲ ಸ್ಥಾನ: ವಿರಾಟ್ ಕೊಹ್ಲಿ ಮೊದಲ ಆಯ್ಕೆಯ ಆಟಗಾರ ವಿರಾಟ್‌ ಕೊಹ್ಲಿ 21 ರಜತ್ ಪಟೀದಾರ್ 11 ಕೋಟಿ ಯಶ್ ದಯಾಳ್ 5 ಕೋಟಿ

Oct 31, 2024, 5:35 pm IST

ಕನ್ನಡಿಗ ಕೆಎಲ್ ರಾಹುಲ್ ಕೂಡ ಮೆಗಾ ಹರಾಜಿಗೆ ಬರಲು ಸಿದ್ಧತೆ. ಕೆಎಲ್ ರಾಹುಲ್‌ರನ್ನು ಕೈಬಿಟ್ಟ ಲಕ್ನೋ ಸೂಪರ್ ಜೈಂಟ್ಸ್.

Oct 31, 2024, 5:34 pm IST

21 ಕೋಟಿ ರೂಪಾಯಿ ವಿರಾಟ್ ಕೊಹ್ಲಿಯನ್ನು ರಿಟೈನ್ ಮಾಡಿಕೊಂಡ ಆರ್ ಸಿಬಿ. ರಜತ್ ಪಟಿದಾರ್ ಮತ್ತು ಯಶ್‌ ದಯಾಳ್‌ರನ್ನು ಉಳಿಸಿಕೊಂಡು ಉಳಿದವರನ್ನು ಕೈಬಿಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು.

Oct 31, 2024, 5:33 pm IST

ಐಪಿಎಲ್ ಮೆಗಾಹರಾಜಿಗೆ ರಿಷಬ್‌ ಪಂತ್‌. ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬಂದ ವಿಕೆಟ್ ಕೀಪರ್ ಬ್ಯಾಟರ್. ನಾಲ್ಕು ಆಟಗಾರರನ್ನು ರಿಟೈನ್ ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್.

Oct 31, 2024, 4:27 pm IST

ಎಲ್‌ಎಸ್‌ಜಿ ನಾಯಕ ಕೆಎಲ್ ರಾಹುಲ್ ತಂಡವನ್ನು ತೊರೆಯಲಿದ್ದಾರೆ ಎನ್ನುವ ವದಂತಿ ಬೆನ್ನಲ್ಲೇ ಆರ್ ಸಿಬಿ ತಂಡಕ್ಕೆ ಮರಳಿ ಬರುವಂತೆ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ #CometoRCB ಎನ್ನುವ ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್ ಆಗಿದ್ದು, ತವರಿನ ತಂಡಕ್ಕೆ ಮರಳಲು ಮನವಿ ಮಾಡಿದ್ದಾರೆ.

Oct 31, 2024, 4:21 pm IST

ಮಯಾಂಕ್‌ ಅಗರ್‌ವಾಲ್‌, ಕೆಎಲ್ ರಾಹುಲ್‌, ಅಭಿನವ್ ಮನೋಹರ್‌, ದೇವದತ್ ಪಡಿಕ್ಕಲ್‌, ಶ್ರೇಯಸ್ ಗೋಪಾಲ್‌, ಮನೀಷ್ ಪಾಂಡೆ, ಅಭಿನವ್ ಮನೋಹರ್, ಮನೋಜ್ ಭಂಡಾರೆ, ವಿಜಯ್‌ ಕುಮಾರ್ ವೈಶಾಖ್, ಯಾರು ಆಗುತ್ತಾರೇ ರಿಟೇನ್‌?

Oct 31, 2024, 4:15 pm IST

ಕೆಎಲ್ ರಾಹುಲ್ ಅವರ ನಿಧಾನಗತಿಯ ಬ್ಯಾಟಿಂಗ್‌ನಿಂದ ಲಕ್ನೋ ಸೂಪರ್ ಜೈಂಟ್ಸ್ ಅವರನ್ನು ಉಳಿಸಿಕೊಳ್ಳಲು ಬಯಸುತ್ತಿಲ್ಲ. ಕಳೆದ ಋತುವಿನಲ್ಲಿ ಹಲವು ಪಂದ್ಯಗಳಲ್ಲಿ ಪವರ್‌ಪ್ಲೇಯಲ್ಲಿ ರಾಹುಲ್ ನಿಧಾನಗತಿಯ ಬ್ಯಾಟಿಂಗ್‌ನಿಂದ ಮ್ಯಾನೇಜ್‌ಮೆಂಟ್ ಅಸಮಾಧಾನಗೊಂಡಿತ್ತು. ಈ ಕಾರಣಕ್ಕಾಗಿ ರಾಹುಲ್ ಅವರನ್ನು ಉಳಿಸಿಕೊಳ್ಳದಿರಲು ಲಖನೌ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

Oct 31, 2024, 4:08 pm IST

ಎಲ್ಲಿ ನೋಡಬಹುದು?

ಸಾಮಾಜಿಕ ಮಾಧ್ಯಮದಲ್ಲಿ ರಿಟೇನ್ಷನ್‌ ಲೀಸ್ಟ್ ಘೋಷಿಸಲಾಗುತ್ತದೆ. ಅಲ್ಲದೆ Sports18 1 ನಲ್ಲಿ ನೇರ ಪ್ರಸಾರ ಹಾಗೂ JioCinema ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ನಲ್ಲಿ ನೋಡಬಹುದು.

Oct 31, 2024, 4:06 pm IST

ಚೆನ್ನೈ ಸೂಪರ್‌ ಕಿಂಗ್ಸ್‌ನಲ್ಲಿ ಮಹೇಂದ್ರ ಸಿಂಗ್‌ ಧೋನಿ ಉಳಿಸಿಕೊಳ್ಳುವುದು ಪಕ್ಕಾ ಅನ್‌ಕ್ಯಾಪ್ಡ್‌ ಪ್ಳೇಯರ್‌ ಆಗಿ ಅವಕಾಶ (ಅಂತಾರಾಷ್ಟ್ರೀಯ ಪಂದ್ಯಗಳನ್ನು ಐದು ವರ್ಷ ಆಡದ ಹಿನ್ನೆಲೆ ಮಾಹಿ ಅನ್‌ಕ್ಯಾಪ್ಡ್‌ ಪ್ಲೇಯರ್‌ ಆಗಿ ಆಡುವ ಅವಕಾಶ. ಧೋನಿಗೆ 4 ಕೋಟಿ ನೀಡಿ ಚೆನ್ನೈ ಮಣೆ.)

Oct 31, 2024, 4:05 pm IST

IPL 2025 ರ ಚೆನ್ನೈ ಸೂಪರ್ ಕಿಂಗ್ಸ್ ರಿಟೇನ್ ಪಟ್ಟಿ

-ಮೊದಲ ಆಯ್ಕೆಯ ಆಟಗಾರನಿಗೆ: ₹18 ಕೋಟಿ -ಎರಡನೇ ಆಯ್ಕೆಯ ಆಟಗಾರನಿಗೆ: ₹14 ಕೋಟಿ -ಮೂರನೇ ಆಯ್ಕೆಯ ಆಟಗಾರನಿಗೆ: ₹11 ಕೋಟಿ -ನಾಲ್ಕನೇ ಆಯ್ಕೆಯ ಆಟಗಾರನಿಗೆ: ₹14 ಕೋಟಿ -ಅನ್‌ಕ್ಯಾಪ್ಡ್ ಆಟಗಾರನಿಗೆ: ₹4 ಕೋಟಿ

Oct 31, 2024, 3:59 pm IST

ಅಭಿನವ್ ಮನೋಹರ್ ಅವರನ್ನು ಅನ್ ಕ್ಯಾಪ್ಡ್ ಪ್ಲೇಯರ್ ಆಗಿ ಗುಜರಾತ್ ಟೇಟನ್ಸ್ ಉಳಿಸಿಕೊಳ್ಳುವುದಾ?

Oct 31, 2024, 3:57 pm IST

ಸಿಎಸ್‌ಕೆ

Oct 31, 2024, 3:55 pm IST

ಸನ್ ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮ್ಮಿನ್ಸ್, ಹೆನ್ರಿಚ್ ಕ್ಲಾಸೆನ್, ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಹಾಗೂ ನಿತೀಶ್ ರೆಡ್ಡಿ ಉಳಿಸಿಕೊಳ್ಳಲು ಯೋಜನೆ ರೂಪಿಸಿದೆ. ಮತ್ತೊಂದೆಡೆ, ಲಕ್ನೋ ಸೂಪರ್ ಜೈಂಟ್ಸ್ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟರ್ ಸ್‌ಮನ್ ನಿಕೋಲಸ್ ಪೂರನ್ ಅವರನ್ನು ಉಳಿಸಿಕೊಂಡಿದೆ. ಆದರೆ, ಇದು ಇನ್ನೂ ಬಹಿರಂಗವಾಗಿಲ್ಲ.

Oct 31, 2024, 3:42 pm IST

ಪಂಜಾಬ್ ನಲ್ಲಿ ಯಾರಿಗೆ ಸಿಗುತ್ತೆ ಚಾನ್ಸ್? ಯಾರು ಮೊದಲ ಆಯ್ಕೆಯ ಆಟಗಾರ

Oct 31, 2024, 3:36 pm IST

ಐಪಿಎಲ್‌ ಮೂಲಗಳ ಪ್ರಕಾರ, ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಶ್ರೇಯಸ್ ಅಯ್ಯರ್ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಇದಲ್ಲದೆ, ಸ್ಫೋಟಕ ಆಲ್‌ರೌಂಡರ್ ಆಂಡ್ರೆ ರಸೆಲ್ ಅವರಿಗೆ ಗೇಟ್‌ಪಾಸ್ ನೀಡಲು ಮುಂದಾಗಿದೆ. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರ ಬಂದಿಲ್ಲ.

Oct 31, 2024, 3:21 pm IST

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಎಂಎಸ್‌ ಧೋನಿ ಮತ್ತು ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ತಂಡದಲ್ಲಿ ಉಳಿಯುವ ಸಾಧ್ಯತೆಯಿದೆ.

Oct 31, 2024, 3:05 pm IST

ಮೂಲಗಳ ಪ್ರಕಾರ, ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಕೆಎಲ್ ರಾಹುಲ್ ಬೇರ್ಪಟ್ಟಿದ್ದಾರೆ. ಮತ್ತೊಂದೆಡೆ ರಿಷಬ್ ಪಂತ್ ಅವರು ಕೂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಬಿಡುಗಡೆ ಆಗಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಕೆಲವೇ ಗಂಟೆಗಳಲ್ಲಿ ಹೊರ ಬೀಳಲಿದೆ.

Oct 31, 2024, 2:30 pm IST

ಐಪಿಎಲ್ 2025ರ ಮೆಗಾ ಹರಾಜಿಗೆ ಎಲ್ಲಾ 10 ಫ್ರಾಂಚೈಸಿ ತಂಡಗಳು ತಾವು ಉಳಿಸಿಕೊಂಡಿರುವ ಮತ್ತು ತಾವು ಬಿಟ್ಟಿರುವ ಆಟಗಾರರ ಪಟ್ಟಿಯನ್ನು ಪ್ರಕಟಿಸಲು ತಯಾರಾಗಿವೆ.

Oct 31, 2024, 2:27 pm IST

ಎಷ್ಟು ಕರ್ನಾಟಕದ ಆಟಗಾರರಿಗೆ ಮಣೆ ಹಾಕುತ್ತಾರೆ ಮಾಲೀಕರು?

Oct 31, 2024, 2:24 pm IST

ಎಲ್ಲರ ಚಿತ್ತ ಕದ್ದ ಎಲ್‌ಎಸ್‌ಜಿ ರಿಟೇನ್ಷನ್‌ ಲೀಸ್ಟ್‌. ಕೆಎಲ್‌ ರಾಹುಲ್‌ ರಿಲೀಸ್‌ ಅಥವಾ ರಿಟೇನ್‌ ಎಂಬ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ.

Oct 31, 2024, 2:09 pm IST

ಮುಂಬೈ ತಂಡ ಯಾರನ್ನು ಉಳಿಸಿಕೊಳ್ಳಲಿದೆ ಎಂಬ ಪ್ರಶ್ನೆಗೆ ಇಂದು ಸಿಗಲಿದೆ ಉತ್ತರ.

Oct 31, 2024, 1:02 pm IST

ಆರ್‌ಸಿಬಿ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ? ಪಜಲ್ ಮೂಲಕ ತಲೆಗೆ ಹುಳ ಬಿಟ್ಟ ಫ್ರಾಂಚೈಸಿ

Oct 31, 2024, 12:04 pm IST

ಅಕ್ಟೋಬರ್‌ 31 ರಿಟೇನ್ಷನ್‌ ಲೀಸ್ಟ್‌ ನೀಡಲು ಡೆಡ್‌ಲೈನ್‌

Story first published: Thursday, October 31, 2024, 12:03 [IST]
Other articles published on Oct 31, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+