IPL 2025 Retention: ಪ್ರತಿ ಫ್ರಾಂಚೈಸಿಯಿಂದ ಉಳಿಸಿಕೊಳ್ಳುವ ಕನಿಷ್ಠ 1 ಆಟಗಾರ; ಆರ್‌ಸಿಬಿಯಲ್ಲಿ ಯಾರು?
ಮುಂಬರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಗಾಗಿ ನಡೆಯಲಿರುವ ಮೆಗಾ ಹರಾಜು ಪ್ರಕ್ರಿಯೆ, ಪಂದ್ಯಾವಳಿಯಲ್ಲಿ ಸಂಪೂರ್ಣ ತಂಡಗಳನ್ನೇ ಬದಲಾಯಿಸುತ್ತದೆ.
ವರದಿಗಳ ಪ್ರಕಾರ, ಬಿಸಿಸಿಐ ಅಧಿಕಾರಿಗಳು ಈ ತಿಂಗಳ ಕೊನೆಯಲ್ಲಿ ಎಲ್ಲಾ ಹತ್ತು ಫ್ರಾಂಚೈಸಿಗಳ ತಂಡದ ಮಾಲೀಕರನ್ನು ಭೇಟಿಯಾಗಲಿದ್ದು, ಐಪಿಎಲ್ ಮೆಗಾ ಹರಾಜಿಗಾಗಿ ಉಳಿಸಿಕೊಳ್ಳುವ ಆಟಗಾರರ ಸಂಖ್ಯೆ ಮತ್ತು ಇತರ ನಿಯಮಗಳನ್ನು ಚರ್ಚಿಸಲಿದ್ದಾರೆ.

ಕೆಲವು ತಂಡಗಳು ಉಳಿಸಿಕೊಳ್ಳುವ ಆಟಗಾರರ ಸಂಖ್ಯೆಯು 8ಕ್ಕಿಂತ ಹೆಚ್ಚಿರಬೇಕೆಂದು ಬಯಸುತ್ತಾರೆ. ಕೆಲವು ಫ್ರಾಂಚೈಸಿಗಳು ಉಳಿಸಿಕೊಳ್ಳುವ ಆಟಗಾರರ ಸಂಖ್ಯೆಯು ಶೂನ್ಯವಾಗಿರಬೇಕೆಂದು ಬಯಸಿದ್ದಾರೆ.
ಐಪಿಎಲ್ 2025ರ ರೀಟೆನ್ಶನ್‌ನಲ್ಲಿ ಒಬ್ಬ ಆಟಗಾರನನ್ನು ಮಾತ್ರ ಉಳಿಸಿಕೊಳ್ಳಲು ಬಿಸಿಸಿಐ ಅನುಮತಿಸುತ್ತದೆ ಎಂದು ಭಾವಿಸಿದರೆ, ಪ್ರತಿ ತಂಡವು ಉಳಿಸಿಕೊಳ್ಳಬಹುದಾದ ಸಂಭಾವ್ಯ ಹೆಸರುಗಳ ಕುರಿತು ನಮ್ಮ ಭವಿಷ್ಯವಾಣಿ ಇಲ್ಲಿವೆ.
ಮುಂಬೈ ಇಂಡಿಯನ್ಸ್ - ಜಸ್ಪ್ರೀತ್ ಬುಮ್ರಾ
ರಾಜಸ್ಥಾನ್ ರಾಯಲ್ಸ್ - ಸಂಜು ಸ್ಯಾಮ್ಸನ್
ಲಕ್ನೋ ಸೂಪರ್ ಜೈಂಟ್ಸ್ - ನಿಕೋಲಸ್ ಪೂರನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು - ವಿರಾಟ್ ಕೊಹ್ಲಿ
ಗುಜರಾತ್ ಟೈಟನ್ಸ್ - ಶುಭ್ಮನ್ ಗಿಲ್
ಕೋಲ್ಕತ್ತಾ ನೈಟ್ ರೈಡರ್ಸ್ - ಶ್ರೇಯಸ್ ಅಯ್ಯರ್
ಡೆಲ್ಲಿ ಕ್ಯಾಪಿಟಲ್ಸ್ - ಅಕ್ಷರ್ ಪಟೇಲ್
ಸನ್ ರೈಸರ್ಸ್ ಹೈದರಾಬಾದ್ - ಪ್ಯಾಟ್ ಕಮ್ಮಿನ್ಸ್
ಪಂಜಾಬ್ ಕಿಂಗ್ಸ್ - ಅರ್ಶ್‌ದೀಪ್ ಸಿಂಗ್
ಚೆನ್ನೈ ಸೂಪರ್ ಕಿಂಗ್ಸ್- ರುತುರಾಜ್ ಗಾಯಕ್ವಾಡ್
ಐಪಿಎಲ್ ರೀಟೆನ್ ನಿಯಮಗಳು
ಐಪಿಎಲ್ ರೀಟೆನ್ ನಿಯಮಗಳ ಪ್ರಕಾರ, ಪ್ರತಿ ಫ್ರಾಂಚೈಸಿಯು ತನ್ನ ಸಂಪೂರ್ಣ ತಂಡವನ್ನು ಉಳಿಸಿಕೊಳ್ಳುವ ಅಧಿಕಾರವನ್ನು ಹೊಂದಿದೆ ಮತ್ತು ಮಿನಿ ಹರಾಜಿನ ಮೊದಲು ಅದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವುದಿಲ್ಲ.
ಆದರೆ, ಮೂರು ವರ್ಷಗಳಿಗೊಮ್ಮೆ ನಡೆಯುವ ಮೆಗಾ ಹರಾಜಿನ ಮೊದಲು, ಎಲ್ಲಾ ತಂಡಗಳು ಕನಿಷ್ಠ ಮೂರು, ಗರಿಷ್ಠ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿಸಲಾಗಿದೆ.
ಮೂರಕ್ಕಿಂತ ಹೆಚ್ಚು ಭಾರತೀಯ ಆಟಗಾರರು ಅಥವಾ ಇಬ್ಬರು ಸಾಗರೋತ್ತರ ಆಟಗಾರರನ್ನು ಉಳಿಸಿಕೊಳ್ಳುವುದನ್ನು ಐಪಿಎಲ್ ನಿಯಮಗಳು ನಿಷೇಧಿಸುತ್ತವೆ. ಅನ್‌ಕ್ಯಾಪ್ಡ್ ಆಟಗಾರರ ರೀಟೆನ್ ಅನ್ನು ಎರಡಕ್ಕೆ ಮಿತಿಗೊಳಿಸಲಾಗಿದೆ.
ಇನ್ನು ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳ ಸಭೆಯನ್ನು ಜುಲೈ ಅಂತ್ಯದಲ್ಲಿ ನಿಗದಿಪಡಿಸಲಾಗಿದೆ. ಬಿಸಿಸಿಐ ಐಪಿಎಲ್ ರೀಟೆನ್ ನಿಯಮಗಳಲ್ಲಿ ಕೆಲವನ್ನು ಬದಲಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications