IPL 2025: ಐಪಿಎಲ್ ಮಾಲೀಕರ ಟೆನ್ಷನ್ ಹೆಚ್ಚಿಸಿದ ಬಿಸಿಸಿಐ ನಿರ್ಧಾರ
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟೆಸ್ಟ್ ಪಂದ್ಯ ನಡೆಯುತ್ತಿದೆ. ಆದರೆ ಈ ಟೆಸ್ಟ್‌ಗೂ ಮುನ್ನ ಎಲ್ಲರ ಚಿತ್ತವನ್ನು ಕದ್ದ ಒಂದು ಅಂಶ ಎಂದರೆ, ರಿಟೇನ್ಷನ್. ಐಪಿಎಲ್ ಮಾಲೀಕರು ಯಾವ ಆಟಗಾರನನ್ನು ಉಳಿಕೊಳ್ಳಲಿದ್ದಾರೆ, ಯಾರಿಗೆ ಗೇಟ್ ಪಾಸ್ ನೀಡಲಿದ್ದಾರೆ ಎಂಬ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿವೆ.
ಕಳೆದ ಮೂರು ವಾರಗಳ ಹಿಂದೆ ಬಿಸಿಸಿಐ ರಿಟೇನ್ಷನ್ ಪಾಲಿಸಿಯನ್ನು ರಿಲೀಸ್ ಮಾಡಿತ್ತು. ಈ ವೇಳೆ ಐಪಿಎಲ್ ಮಾಲೀಕರು ತಾವು ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು, ಅಕ್ಟೋಬರ್ 31ರೊಳಗೆ ಬಿಸಿಸಿಐಗೆ ನೀಡಬೇಕಿದೆ. ಬಿಸಿಸಿಐಗೆ ಮಾಲೀಕರು ರಿಟೇನ್ಷನ್ ಲೀಸ್ಟ್ ನೀಡಿದ ಬಳಿಕವೇ ಮುಂದಿನ ಕಾರ್ಯಗಳಿಗೆ ಚಾಲನೆ ಸಿಗಲಿದೆ. ಆದರೆ ಬಿಸಿಸಿಐ ರಿಟೇನ್ಷನ್ ಪಟ್ಟಿಯಲ್ಲಿ ನೀಡಿರುವ ಒಂದು ನಿಯಮ ನಿಜಕ್ಕೂ ಐಪಿಎಲ್ ಮಾಲೀಕರ ಟೆನ್ಷನ್ ಹೆಚ್ಚಿಸಿದೆ. ಆಟಗಾರನನ್ನು ಉಳಿಸಿಕೊಳ್ಳಲು ಮಾಲೀಕರು ನೂರು ಬಾರಿ ಯೋಚಿಸಬೇಕಾಗುತ್ತದೆ.

ಬಿಸಿಸಿಐ ಇತ್ತಿಚಿಗೆ ಬಿಡುಗಡೆ ಮಾಡಿರುವ ರಿಟೇನ್ಷನ್ ಲೀಸ್ಟ್‌ನಲ್ಲಿ ಉಳಿಸಿಕೊಂಡ ಆಟಗಾರರಿಗೆ ಮಾಲೀಕರು ನೀಡಬಹುದಾದ ಮೊತ್ತವನ್ನು ಘೋಷಿಸಿದೆ. ಒಟ್ಟು ಆರು ಆಟಗಾರರನ್ನು ಫ್ರಾಂಚೈಸಿಗಳು ಉಳಿಸಿಕೊಳ್ಳ ಬಹುದಾಗಿದೆ. ಅಲ್ಲದೆ ರೈಟ್ ಟು ಮ್ಯಾಚ್ ಕಾರ್ಡ್ ಸಹ ಮಾಲೀಕರ ಬಳಿ ಇರುವುದರಿಂದ, ಇದನ್ನು ಸಹ ಅವರು ಹರಾಜಿನ ವೇಳೆ ಬಳಸಬಹುದಾಗಿದೆ.
ಹಾಗಿದ್ದರೆ ಯಾವ ಆಟಗಾರನಿಗೆ ಎಷ್ಟು ಹಣ?
ಬಿಸಿಸಿಐ ರಿಲೀಸ್ ಮಾಡಿರುವ ರಿಟೇನ್ಷನ್ ಪಾಲಿಸಿಯ ಪ್ರಕಾರ, ಮೊದಲ ಆಯ್ಕೆಯ ಆಟಗಾರನಿಗೆ ಮಾಲೀಕರು 18 ಕೋಟಿ ರೂ. ನೀಡಿ ತಂಡದಲ್ಲಿ ಉಳಿಸಿಕೊಳ್ಳಬಹುದು. ಎರಡನೇ ಆಟಗಾರನಿಗೆ 14 ಕೋಟಿ ರೂ. ಮೂರನೇ ಆಟಗಾರನಿಗೆ 11 ಕೋಟಿ ರೂ. ನೀಡಿ ಉಳಿಸಿಕೊಳ್ಳಬಹುದು. ಇದಾದ ಬಳಿಕ ಬೇರೆ ಬೇರೆ ಆಟಗಾರರಿಗೂ ರಿಟೇನ್ ವ್ಯಾಲ್ಯು ಇರುತ್ತದೆ. ನಾಲ್ಕು ಹಾಗೂ ಐದನೇ ಸ್ಥಾನದಲ್ಲಿರುವ ಆಟಗಾರ ಸಹ ಹೆಚ್ಚು ಕಡಿಮೆ ಇಷ್ಟೇ ಹಣವನ್ನು ಪಡೆಯಬಹುದು. ಇನ್ನು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡದ ಅನ್‌ಕ್ಯಾಪ್ಡ್ ಆಟಗಾರರಿಗೆ 4 ಕೋಟಿ ರೂ. ನೀಡಬೇಕಾಗುತ್ತದೆ.
ಮಾಲೀಕರ ಚಿಂತೆ ಏನು?
ಐಪಿಎಲ್‌ನ 10 ಮಾಲೀಕರ ಚಿಂತೆ, ಬೆರಳೆಣಿಕೆ ಆಟಗಾರರನ್ನು ಉಳಿಸಿಕೊಳ್ಳಲು ಇಷ್ಟೋಂದು ಹಣವನ್ನು ಖರ್ಚು ಮಾಡಿದರೆ, ಉಳಿದ ಹಣದಲ್ಲಿ ಹೇಗೆ ಉತ್ತಮ ತಂಡವನ್ನು ಕಟ್ಟಲು ಸಾಧ್ಯ. ಇನ್ನು ಐಪಿಎಲ್ ಮಾಲೀಕರು ಇಷ್ಟು ದಿನ ಬಲಿಷ್ಠ ತಂಡವನ್ನು ಕಟ್ಟಿ, ಆಟಗಾರರನ್ನು ಕೈ ಬಿಡಲು ತಯಾರಿಲ್ಲ. ಆದರೆ ಅವರನ್ನು ಉಳಿಸಿಕೊಳ್ಳಲು ಅವರಿಗೆ ನೀಡಬೇಕಾದ ಹಣವನ್ನು ನೋಡಿದರೆ ಚಿಂತೆ ಆರಂಭವಾಗಿದೆ.
ಪರ್ಸ್ ಸೈಜ್ 120 ಕೋಟಿ
ಅಂದಹಾಗೆ ಈ ಬಾರಿ ಐಪಿಎಲ್ ಮಾಲೀಕರು ಪರ್ಸ್ ಸೈಜ್ ದೊಡ್ಡದು ಮಾಡಲಾಗಿದೆ. ಈ ಬಾರಿ ಮಾಲೀಕರು 120 ಕೋಟಿ ರೂ. ಗಳನ್ನು ಆಟಗಾರರನ್ನು ಕೊಳ್ಳಲು ಖರ್ಚು ಮಾಡಬಹುದಾಗಿದೆ. ಆದರೆ ತಂಡದ ಚಿಂತೆಯನ್ನು ಹೆಚ್ಚಿಸಿರುವ ಅಂಶ ಎಂದರೆ, ಕೆಲವೇ ಆಟಗಾರರನ್ನು ಉಳಿಸಿಕೊಂಡರೂ ಇಷ್ಟೊಂದು ಹಣವನ್ನು ವ್ಯಯಿಸಬೇಕಾಗುತ್ತದೆ. ತಂಡವನ್ನು ನಿರ್ಮಿಸಲು 18 ರಿಂದ 25 ಆಟಗಾರರ ಅವಶ್ಯಕತೆ ಇದ್ದು, ಉಳಿದ ಹಣದಲ್ಲಿ ಬಲಿಷ್ಠ ತಂಡವನ್ನು ಕಟ್ಟುವುದು ಹೇಗೆ ಎಂಬ ಚಿಂತೆ ಆರಂಭವಾಗಿದೆ.
ಈ ಬಾರಿ ಹರಾಜು ಅಂಗಳಕ್ಕೆ ಬಿಗ್ ಸ್ಟಾರ್ ಆಟಗಾರರು ಪ್ರವೇಶಿಸುವುದು ಖಚಿತವಾಗಿದೆ. ಈ ಹಿಂದೆ ಇದನ್ನು ಕಂಡಿದ್ದು ಅಪರೂಪವಾಗಿದೆ. ಸ್ಟಾರ್ ಆಟಗಾರರು ಹರಾಜು ಅಂಗಳಕ್ಕೆ ಇಳಿದರೆ, ಬೇರೆ ಮಾಲೀಕರು ಸಂತಸದಿಂದ ಹಣದ ಹೊಳೆಯನ್ನು ಹರಿಸಲು ಸಿದ್ಧರಾಗಿರುತ್ತಾರೆ.
ತಂಡಗಳ ಪ್ಲ್ಯಾನ್ ಏನು?
ಆರು ಆಟಗಾರರನ್ನು ಉಳಿಸಿಕೊಳ್ಳಲು ಹೆಚ್ಚಿನ ತಂಡಗಳು ಮನಸ್ಸು ಹೊಂದಿಲ್ಲ ಎಂಬ ಚರ್ಚೆಗಳು ಆರಂಭವಾಗಿವೆ. ಆಟಗಾರರನ್ನು ಹರಾಜು ಅಂಗಳಕ್ಕೆ ಬಿಟ್ಟು ಕಡಿಮೆ ಬೆಲೆಯಲ್ಲಿ ಮತ್ತೆ ಸ್ಟಾರ್‌ಗಳನ್ನು ಖರೀದಿಸುವ ಇರಾದೆ ತಂಡಗಳದ್ದಾಗಿದೆ. ಈ ನಡುವೆ ಮಾಲೀಕರು ಹಾಗೂ ಕೋಚಿಂಗ್ ಸಿಬ್ಬಂದಿಗಳ ನಡುವೆ ಚರ್ಚೆಗಳು ಆರಂಭವಾಗಿವೆ. ಐಪಿಎಲ್ ಮಾಲೀಕರು ಯಾರನ್ನು ಉಳಿಸಿಕೊಂಡಿದ್ದಾರೆ ಎಂಬ ಬಗ್ಗೆ ಅಕ್ಟೋಬರ್ 31ರಂದು ಉತ್ತರ ಸಿಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications