Ricky Ponting: ಡೆಲ್ಲಿ ಕ್ಯಾಪಿಟಲ್ಸ್ ತೊರೆಯಲು ಕಾರಣ ತಿಳಿಸಿದ ರಿಕಿ ಪಾಂಟಿಂಗ್
ಮುಂಬರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ಭಾರೀ ಕುತೂಹಲ ಮೂಡಿಸಿದೆ. ಐಪಿಎಲ್ 2025ರ ಆರಂಭಕ್ಕೂ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕೂ ಮೊದಲು ಐಪಿಎಲ್ ಫ್ರಾಂಚೈಸಿಗಳು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ.
ಇದೀಗ ಪಂಜಾಬ್ ಕಿಂಗ್ಸ್ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ತಮ್ಮ ತಂಡದ ಹೊಸ ಮುಖ್ಯ ಕೋಚ್ ಆಗಿ ನೇಮಿಸಿದೆ. ಪಂಜಾಬ್ ಸೇರುವ ಮೊದಲು ಪಾಂಟಿಂಗ್ ಡೆಲ್ಲಿ ಪ್ಯಾಪಿಟಲ್ಸ್ ತಂಡದಲ್ಲಿದ್ದರು.

ರಿಕಿ ಪಾಂಟಿಂಗ್ ಡೆಲ್ಲಿ ಜೊತೆಗಿನ ತನ್ನ 7 ವರ್ಷಗಳ ಒಡನಾಟವನ್ನು ಕೊನೆಗೊಳಿಸಿ ಪಂಜಾಬ್ ಕಿಂಗ್ಸ್‌ನೊಂದಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಮುಂದಿನ ನಾಲ್ಕು ವರ್ಷಗಳ ವರೆಗೆ ಪಾಂಟಿಂಗ್‌ರನ್ನು ನೇಮಕ ಮಾಡಿಕೊಂಡಿರುವುದಾಗಿ ಪಂಜಾಬ್ ತಂಡದ ಮಾಲೀಕರು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ರಿಕಿ ಪಾಂಟಿಂಗ್ ಅವರನ್ನು ಹುದ್ದೆಯಿಂದ ಡೆಲ್ಲಿ ಮಾಲೀಕರು ಕೈ ಬಿಟ್ಟಿದ್ದರು. ಆದರೆ ಈ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಮಾಹಿತಿ ಹೊರ ಬಂದಿರಲಿಲ್ಲ. ಜೊತೆಗೆ ಯಾವ ಕಾರಣಕ್ಕಾಗಿ ಅವರು ಡೆಲ್ಲಿ ತೊರೆಯುತ್ತಿದ್ದಾರೆ ಎಂಬುದು ತಿಳಿದಿರಲಿಲ್ಲ. ಈಗ ಪಾಂಟಿಂಗ್ ಡೆಲ್ಲಿ ತೊರೆಯಲು ಮುಖ್ಯ ಕಾರಣವನ್ನು ತಿಳಿಸಿದ್ದಾರೆ.
ಪಾಂಟಿಂಗ್ ಹೇಳಿದ್ದೇನು?
'ನಾವು ಡೆಲ್ಲಿ ತಂಡದಲ್ಲಿ ನಿಜವಾಗಿಯೂ ಉತ್ತಮವಾದ ಕೌಟುಂಬಿಕ ವಾತಾವರಣವನ್ನು ಸೃಷ್ಟಿಸಿದ್ದೇವೆ. ಅವರಿಗೆ ಏನು ಬೇಕು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ನನ್ನ ಲಭ್ಯತೆ ಸಮಸ್ಯೆಯಾಗುತ್ತಿದೆ ಎಂದು ಅವರು ನನಗೆ ಹೇಳಿದರು.
ಜೊತೆಗೆ ಅವರು ಪೂರ್ಣ ಸಮಯದ ಮುಖ್ಯ ಕೋಚ್ ಹೊಂದಲು ಬಯಸಿದ್ದರು. ನಾನು ಅದಕ್ಕೆ ಬದ್ಧರಾಗಲು ಸಾಧ್ಯವಾಗಲಿಲ್ಲ. ಹಾಗಾಗಿ ನಾನು ಡೆಲ್ಲಿ ಜೊತೆಗಿನ ಪಯಣ ಕೊನೆಗೊಳಿಸಿದ್ದೇನೆ. ಇದರಿಂದ ನಾನು ನಿರಾಶೆಗೊಂಡಿದ್ದೇನೆ' ಎಂದು ಪಾಂಟಿಂಗ್ ಹೇಳಿದ್ದಾರೆ.
ಪಂಜಾಬ್ ಕಿಂಗ್ಸ್ ಐಪಿಎಲ್‌ನಲ್ಲಿ ಅತ್ಯಂತ ವಿಫಲ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್‌ಸಿಬಿ ಹೊರತುಪಡಿಸಿ, ಪಂಜಾಬ್ ಕೂಡ ಐಪಿಎಲ್ ಟ್ರೋಫಿಯನ್ನು ಗೆಲ್ಲದ ಮೂರನೇ ತಂಡವಾಗಿದೆ. ಇದುವರಗೆ ಪಂಜಾಬ್ ಕಿಂಗ್ಸ್ 8 ಆವೃತ್ತಿಗಳಲ್ಲಿ 6 ಕೋಚ್‌ಗಳನ್ನು ಬದಲಾಯಿಸಿದೆ.
2017 ರಿಂದ 2023 ರವರೆಗೂ ಒಟ್ಟು 5 ಕೋಚ್‌ಗಳನ್ನು ಕಂಡಿರುವ ಪಂಜಾಬ್ ಪ್ಲೇ ಆಪ್ ಪ್ರವೇಶ ಪಡೆಯಲು ಸಾಧ್ಯವಾಗಿಲ್ಲ. 2017ರಲ್ಲಿ ವಿರೇಂದ್ರ ಸೆಹ್ವಾಗ್, 2018ರಲ್ಲಿ ಬ್ರಾಡ್ ಹಾಡ್ಜ್, 2019ರಲ್ಲಿ ಮೈಕ್ ಹೆಸ್ಸನ್, 2020, 2021ರಲ್ಲಿ ಅನಿಲ್ ಕುಂಬ್ಳೆ, 2022 ಮತ್ತು 2023ರಲ್ಲಿ ಟ್ರೆವರ್ ಬೇಯ್ಲಿಸ್ ಕೋಚ್ ಆಗಿದ್ದರು. ಇದೀಗ ಆರನೇ ಕೋಚ್ ಆಗಿ ರಿಕಿ ಪಾಂಟಿಂಗ್ ಪಂಜಾಬ್ ಸೇರಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications