IPL 2025: ರಿಷಭ್ ಪಂತ್ ಎಡವಟ್ಟು; ಡೆಲ್ಲಿ ಎದುರು ಲಕ್ನೋಗೆ ಸೋಲು
ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರೀಡಾಂಗಣದಲ್ಲಿ ಐಪಿಎಲ್ 2025ರ ನಾಲ್ಕನೇ ಪಂದ್ಯ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ ರಿಷಭ್ ಪಂತ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅಕ್ಸರ್ ಪಟೇಲ್ ಮುನ್ನಡೆಸುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸಿತು. ಕೊನೆಯ ಓವರ್ನಲ್ಲಿ ಡೆಲ್ಲಿ ತಂಡ 1 ವಿಕೆಟ್‌ನಿಂದ ರೋಮಾಂಚಕ ಗೆಲುವು ಕಂಡಿತು.
ಲಕ್ನೋ ತಂಡದ ಪರವಾಗಿದ್ದ ಗೆಲುವನ್ನು ಡೆಲ್ಲಿ ಕ್ಯಾಪಿಟಲ್ಸ್‌ನ ಇಬ್ಬರು ಬ್ಯಾಟರ್ಸ್ ಕಸಿದುಕೊಂಡರು. 7 ಮತ್ತು 8ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಸೋಲುವ ಪಂದ್ಯವನ್ನು ಡೆಲ್ಲಿ ಬ್ಯಾಟರ್ಸ್ ಗೆಲ್ಲಿಸಿದರು. ಲಕ್ನೋ ತಂಡದ ಸೋಲಿಗೆ ಒಂದು ಕಡೆ ನಾಯಕ ರಿಷಭ್ ಪಂತ್ ಕಾರಣವಾದರು.

ಲಕ್ನೋ ಸೂಪರ್ ಜೈಂಟ್ಸ್ ಒಂದು ಹಂತದಲ್ಲಿ ಸುಲಭವಾಗಿ ಗೆಲ್ಲುವು ಅವಕಾಶವನ್ನು ಹೊಂದಿತ್ತು. ಆದರೆ ಲಕ್ನೋ ತಂಡ ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಂಡಿದ್ದರಿಂದ ಸೋಲನ್ನು ಎದುರಿಸಬೇಕಾಯಿತು. ಅದರಲ್ಲೂ ನಾಯಕನಾಗಿ ತಂಡವನ್ನು ಸರಿ ದಾರಿಯಲ್ಲಿ ನಡೆಸಬೇಕಿದ್ದ ರಿಷಭ್ ಪಂತ್ ಮಾಡಿದ ಎಡವಟ್ಟುಗಳೇ ಲಕ್ನೋ ಸೋಲಿಗೆ ಮುಖ್ಯ ಕಾರಣವಾಗಿದೆ. ಅದರಲ್ಲೂ ಕೊನೆಯ ಓವರ್‍ನಲ್ಲಿ ಗೆಲುವಿನ ಹಂಚಿನಲ್ಲಿರುವ ಅವರು ಮಾಡಿದ ಈ ಒಂದು ತಪ್ಪು ಗೆಲುವು ಸಾಧಿಸಿಲು ಸಾಧ್ಯವಾಗಲಿಲ್ಲ.
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಬರೋಬ್ಬರಿ 27 ಕೋಟಿ ರೂ. ದಾಖಲೆ ಮೊತ್ತಕ್ಕೆ ಬಿಡ್ ಆಗಿದ್ದ ರಿಷಬ್ ಪಂತ್ ಬ್ಯಾಟಿಂಗ್, ಕೀಪಿಂಗ್ ಮತ್ತು ನಾಯಕತ್ವ ನಿಭಾಯಿಸುವಲ್ಲಿ ವಿಫಲವಾದರು. ಹೀಗಾಗಿ ಲಕ್ನೋ ಬೃಹತ್ ಮೊತ್ತ ಕಲೆ ಹಾಕಿದರು, ಡೆಲ್ಲಿ ಎದುರು ಸೋಲು ಕಂಡಿತು.
ಪಂದ್ಯ ಕೊನೆಯ ಓವರ್ನಲ್ಲಿ ಡೆಲ್ಲಿ ಗೆಲುವಿಗೆ ಕೇವಲ 6 ರನ್ ಅವಶ್ಯಕ ಇತ್ತು. ಆದರೆ, ಡೆಲ್ಲಿ 9 ವಿಕೆಟ್ ಕಳೆದುಕೊಂಡು ಸೋಲಿನ ದವಡೆಯಲ್ಲಿತ್ತು. ಕೊನೆ ಓವರ್‍ನಲ್ಲಿ ಮೋಹಿತ್ ಶರ್ಮಾ ಬ್ಯಾಟಿಂಗ್ ಮಾಡುತ್ತಿದ್ದರೆ, ಅಶುತೋಷ್ ಶರ್ಮಾ ನಾನ್ ಸ್ಟ್ರೈಕರ್ ತುದಿಯಲ್ಲಿದ್ದಾರೆ. ಶಹಬಾಜ್ ಅಹ್ಮದ್ ಕೊನೆಯ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿ ಹೊತ್ತು ಬಂದರು. ಮೊದಲನೇ ಎಸೆತದಲ್ಲೇ ಮೋಹಿತ್ ಶರ್ಮಾ ಕ್ರೀಸ್ ಬಿಟ್ಟು ಮುಂದೆ ಚೆಂಡನ್ನು ಮಿಸ್ ಮಾಡಿಕೊಂಡರು. ಆದರೆ ಚೆಂಡು ವಿಕೆಟ್‌ಕೀಪಿಂಗ್ ಮಾಡುತ್ತಿದ್ದ ರಿಷಭ್ ಪಂತ್ ಕೈ ಸೇರಿತು.
ಈ ಸಂದರ್ಭದಲ್ಲಿ ರಿಷಬ್ ಪಂತ್ ಚೆಂಡನ್ನು ಹಿಡಿದಿದ್ದರೆ ಸ್ಟಂಪ್ ಔಟ್ ಮಾಡುವ ಮೂಲಕ ತಂಡಕ್ಕೆ ಗೆಲುವಿಗೆ ಪ್ರಮುಖ ಪಾತ್ರವಹಿಸಬಹುದಾಗಿತ್ತ. ಆದರೆ ಕೀಪಿಂಗ್‌ನಲ್ಲಿ ವಿಫಲವಾದ ಕಾರಣ ಗೆಲುವಿನ ಅವಕಾಶವನ್ನು ಕಳೆದುಕೊಂಡರು. ನಂತರದ ಎಸೆತದಲ್ಲಿ ಮೋಹಿತ್ ಶರ್ಮಾ ಒಂದು ರನ್ ಗಳಿಸಿದರು. ಕ್ರೀಸ್‌ಗೆ ಬಂದ ಅಶುತೋಷ್ ಶರ್ಮಾ ಮೂರನೇ ಎಸೆತದಲ್ಲಿ ಭರ್ಜರು ಸಿಕ್ಸರ್ ಬಾರಿಸಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಭರ್ಜರಿ ಗೆಲುವು ತಂದುಕೊಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications