ರಿಷಭ್ RCB ತಂಡವನ್ನು ಸೇರುತ್ತಾರಾ? ಪಂತ್ ಹೇಳಿದ್ದೇನು?
ಐಪಿಎಲ್ ಮೆಗಾ ಹರಾಜಿನತ್ತ ಅಭಿಮಾನಿಗಳು ಚಿತ್ತ ಹರಿಸಿದ್ದಾರೆ. ಮಾಲೀಕರು ಸಹ ಬಿಸಿಸಿಐ ಹೊರಡಿಸಲಿರುವ ರಿಟೆನ್ಶನ್ ಪಾಲಿಸಿಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಹರಾಜಿನ ಲೆಕ್ಕಾಚಾರವನ್ನು ಐಪಿಎಲ್ ಮಾಲೀಕರು ಆರಂಭಿಸಿದ್ದಾರೆ.
ಬಿಸಿಸಿಐ ಇನ್ನೇನು ಕೆಲವೇ ದಿನಗಳಲ್ಲಿ ರಿಟೆನ್ಶನ್ ಪಾಲಿಸಿ ಬಿಡುಗಡೆ ಮಾಡಲಿದೆ. ಈ ಬಳಿಕ ತಂಡಗಳು ತಮ್ಮಲ್ಲಿ ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ನೀಡುತ್ತಾರೆ. ಇದೇ ಹಿನ್ನೆಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಭ್ ಪಂಥ್ ಬಿಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ. ಅಲ್ಲದೆ ಅವರು ಆರ್‌ಸಿಬಿ ತಂಡವನ್ನು ಸೇರಿಕೊಳ್ಳುತ್ತಾರೆ ಎಂಬ ಚರ್ಚೆಗಳು ಮತ್ತೆ ಆರಂಭವಾಗಿವೆ.

ವೈರಲ್ ಪೋಸ್ಟ್
ಈಗ ಮತ್ತೊಂದು ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಪೋಸ್ಟ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಟಾರ್ ಆಟಗಾರ ರಿಷಭ್ ಪಂತ್ ಅವರನ್ನು ಸಂಪರ್ಕಿಸಿದ್ದು, ಫಾಫ್ ಡು ಪ್ಲೆಸಿಸ್ ಸ್ಥಾನ ತುಂಬುತ್ತಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿಗೆ ರಿಷಭ್ ಪಂತ್ ತಮ್ಮ ರಿಯಾಕ್ಷನ್ ನೀಡಿದ್ದಾರೆ.
ಪಂತ್ ಮನವಿ
ಇದೆಲ್ಲವೂ ಸುಳ್ಳು ಸುದ್ದಿ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುವುದರಿಂದ ದೂರವಿರಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ರಿಷಭ್ ಪಂತ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆಯುತ್ತಾರೆ ಎಂಬ ಮಾತುಗಳು ಇದ್ದವು. ಕೋಚ್ ರಿಕಿ ಪಾಂಟಿಂಗ್ ಡೆಲ್ಲಿ ತಂಡವನ್ನು ತೊರೆಯುತ್ತಿದ್ದಂತೆ ಪಂತ್ ಸಹ, ತಂಡವನ್ನು ತೊರೆಯುತ್ತಾರೆ ಎಂಬ ಊಹಾಪೋಹಗಳು ಎದ್ದಿದ್ದವು. ಈ ಬಗ್ಗೆ ಇನ್ನು ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಆದರೆ ಬಿಸಿಸಿಐ ರಿಟೇನ್ಶನ್ ಮಾಹಿತಿಯನ್ನು ರಿಲೀಸ್ ಮಾಡಿದ ಬಳಿಕ ಯಾವ ತಂಡ ಯಾರನ್ನು ಉಳಿಸಿಕೊಳ್ಳಲಿದೆ ಎಂಬ ಮಾಹಿತಿ ಸಿಗುತ್ತದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಷಭ್ ಪಂತ್ ಅವರನ್ನು ಉಳಿಸಿಕೊಳ್ಳುತ್ತದೋ ಇಲ್ಲವೋ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಒಂದು ವೇಳೆ ರಿಷಭ್ ಪಂತ್ ಅವರನ್ನು ಡೆಲ್ಲಿ ಕೈ ಬಿಟ್ಟಿದ್ದೇ ಆದಲ್ಲಿ ಹರಾಜು ಅಂಗಳಕ್ಕೆ ಪಂತ್ ಪ್ರವೇಶಿಸಲಿದ್ದಾರೆ. ಈ ವೇಳೆ ಅವರು ಭಾರೀ ಹಣಕ್ಕೆ ಬೇರೆ ತಂಡವನ್ನು ಸಹ ಸೇರಬಹುದು.
ರಿಷಬ್ ಪಂತ್ ಅವರನ್ನು 2021 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರನ್ನಾಗಿ ನೇಮಕ ಮಾಡಲಾಯಿತು. ಅವರು 2024 ರಲ್ಲೂ ಸಹ ಅದೇ ತಂಡದ ಪರ ಅಖಾಡಕ್ಕೆ ಇಳಿದಿದ್ದರು. ಆದರೆ ಐಪಿಎಲ್ 2025ರಲ್ಲಿ ಪಂತ್ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿಯೇ ಇರುತ್ತಾರೋ ಇಲ್ಲವೋ ಎಂಬ ಬಗ್ಗೆ ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications